ಸೆ.25ರಂದು ಕರ್ನಾಟಕ ಬಂದ್​ ಆಗುತ್ತಾ? ಇಲ್ವಾ?

karnataka bund
Published on

ಬೆಂಗಳೂರು: ಭೂ ಸುಧಾರಣೆ, ಎಪಿಎಂಸಿ ಕಾಯ್ದೆ ಜಾರಿಗೆ ಸುಗ್ರೀವಾಜ್ಞೆ ರದ್ದು ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸರ್ಕಾರದ ವಿರುದ್ಧ 30ಕ್ಕೂ ಹೆಚ್ಚು ಸಂಘಟನೆಗಳು ರಾಜ್ಯರಾಜಧಾನಿಯಲ್ಲಿ ಬೀದಿಗಳಿದು ಪ್ರತಿಭಟನೆ ನಡೆಸುತ್ತಿವೆ. ಇದರ ಮುಂದುವರಿದ ಭಾಗವಾಗಿ ಸೆ.25ರಂದು ಕರ್ನಾಟಕ ಬಂದ್​ಗೆ ಕರೆ ನೀಡಲಾಗಿದೆ. ಇದರ ಬೆನ್ನಲ್ಲೇ ಕೆಲ ಮುಖಂಡರು ಬಂದ್​ಗೆ ಅಪಸ್ವರ ಎತ್ತಿದ್ದು, ಬಂದ್​ ಬೇಕಾ? ಬೇಡ್ವಾ? ಎಂಬ ಪ್ರಶ್ನೆ ಎದ್ದಿದೆ.

ಈ ಕುರಿತು ಮಂಗಳವಾರ ಸಂಜೆ 4ಕ್ಕೆ ಕುರುಬೂರು ಶಾಂತಕುಮಾರ್​ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಮುಖಂಡರು ಸುದ್ದಿಗೋಷ್ಠಿ ನಡೆಸಿದರು. ಸುಗ್ರೀವಾಜ್ಞೆ ಮೂಲಕ ಸರ್ಕಾರಗಳು ಜಾರಿಗೆ ತಂದಿರುವ ಭೂ ಸುಧಾರಣೆ, ಎಪಿಎಂಸಿ ಕಾಯ್ದೆಗೆ ದೇಶದ ಜನತೆ ಅಂಗೀಕಾರ ನೀಡಿಲ್ಲ. ಹಾಗಾಗಿ ಸೆ.25ರಂದು ಕರ್ನಾಟಕ ಬಂದ್​ಗೆ ಕರೆ ನೀಡಿದ್ದಾರೆ. ಈ ಬಂದ್​ಗೆ ನಮ್ಮ ತಾತ್ವಿಕ ಒಪ್ಪಿಗೆ ಇದೆ. ಆದರೆ, ಐಕ್ಯ ಹೋರಾಟದ ಬೆಂಬಲದ ಬಗ್ಗೆ ಬುಧವಾರ ಬೆಳಗ್ಗೆ ಘೋಷಣೆ ಮಾಡುತ್ತೇವೆ ಎಂದು ರೈತ ಮುಖಂಡರು ಹೇಳಿದರು. ಈಗಾಗಲೇ 7-8 ಸಂಘಟನೆಗಳು ಬಂದ್​ಗೆ ಒಪ್ಪಿಗೆ ನೀಡಿವೆ. ಆನ್​ಲೈನ್​ ಮೂಲಕ ಮಂಗಳವಾರ ಸಂಜೆ ಇನ್ನುಳಿದ ಸಂಘಟನೆಗಳ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು. ಇದನ್ನೂ ಓದಿರಿ ರೈತರ ವ್ಯಾಪಾರ ಸುಲಭ ಮಾಡುವ ತಿದ್ದುಪಡಿ ಮಸೂದೆ: ರಾಜ್ಯಸಭೆಯಲ್ಲಿ ಸಿಕ್ಕಿತು ಅಂಗೀಕಾರ

ಈ ನಡುವೆ ಸಂಘಟನೆಗಳಲ್ಲೇ ಬಂದ್​ ಕುರಿತಾಗಿ ಭಿನ್ನಾಭಿಪ್ರಾಯ ಮೂಡಿದೆ. ಕರೊನಾದಂತಹ ಸಂಕಷ್ಟದ ನಡುವೆ ಕರ್ನಾಟಕ ಬಂದ್​ ಬೇಕಾ? ಎಂದು ಕೆಲ ನಾಯಕರು ಅಭಿಪ್ರಾಯಪಟ್ಟಿದ್ದಾರೆ. ಎಷ್ಟೋ ಜನ ಕೂಲಿ-ನಾಲಿ ಮಾಡಿಕೊಂಡು ಜೀವನ ಮಾಡುತ್ತಿದ್ದಾರೆ. ಲಾಕ್​ಡೌನ್​ ಟೈಂನಲ್ಲಿ ಸಾಕಷ್ಟು ನಷ್ಟ ಸಂಭವಿಸಿದೆ. ಹೀಗಾಗಿ ನಮ್ಮ ಹೋರಾಟವನ್ನು ನಾವು ಮಾಡೋಣ, ಆದ್ರೆ ಬಂದ್​ ಬೇಡ ಎಂಬ ಅಭಿಪ್ರಾಯ ಕೆಲವರಿಂದ ಕೇಳಿಬಂದಿದೆ. ಒಟ್ಟಾರೆ ಕರ್ನಾಟಕ ಬಂದ್​ ಆಗುತ್ತೋ, ಇಲ್ಲವೋ ಎಂಬುದು ಬುಧವಾರ ಸಂಜೆ ವೇಳೆಗೆ ಸಂಪೂರ್ಣ ಚಿತ್ರಣ ಸಿಗಲಿದೆ.

ಕೋಡಿಹಳ್ಳಿ ಚಂದ್ರಶೇಖರ್​ ಮತ್ತು ಕುರುಬೂರು ಶಾಂತಕುಮಾರ್​ ನೇತೃತ್ವದಲ್ಲಿ ಸೋಮವಾರ ಆರಂಭವಾದ ಧರಣಿಯಲ್ಲಿ ಸಹಸ್ರಾರು ಸಂಖ್ಯೆಯ ರೈತರು ಪಾಲ್ಗೊಂಡಿದ್ದಾರೆ. ಸುಗ್ರೀವಾಜ್ಞೆ ಮೂಲಕ ಜಾರಿ ಮಾಡಿರುವ ಭೂ ಸುಧಾರಣೆ, ಎಪಿಎಂಸಿ ಕಾಯ್ದೆಯನ್ನು ರದ್ದು ಮಾಡಲೇಬೇಕೆಂದು ಮಳೆಯಲ್ಲೂ ಪ್ರತಿಭಟನೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net