More

    ಸರ್ಕಾರದ ವಿರುದ್ಧ ಸಿಡಿದೆದ್ದ ರೈತರು… ಮಳೆಯಲ್ಲೇ ಬೃಹತ್​ ಪ್ರತಿಭಟನೆ

    ಬೆಂಗಳೂರು: ಕರೊನಾ ಭೀತಿ ನಡುವೆಯೂ ರಾಜ್ಯ ವಿಧಾನಮಂಡಲದ ಮುಂಗಾರು ಅಧಿವೇನ ಆಂಭವಾಗಿದೆ. ಈ ವೇಳೆ ರಾಜ್ಯ ಸರ್ಕಾರದ ವಿರುದ್ಧ 30ಕ್ಕೂ ಹೆಚ್ಚು ಸಂಘಟನೆಗಳು ಸಿಡಿದೆದ್ದು ಬೀದಿಗಳಿದು ಪ್ರತಿಭಟಿಸುತ್ತಿವೆ.

    ಭೂ ಸುಧಾರಣೆ, ಎಪಿಎಂಸಿ ಕಾಯ್ದೆ ಸುಗ್ರೀವಾಜ್ಞೆ, ವಿದ್ಯುತ್​ ಕಾಯ್ದೆ ತಿದ್ದುಪಡಿ ವಿರೋಧಿಸಿ ಕೋಡಿಹಳ್ಳಿ ಚಂದ್ರಶೇಖರ್​ ಮತ್ತು ಕುರುಬೂರು ಶಾಂತಕುಮಾರ್​ ನೇತೃತ್ವದಲ್ಲಿ ವಿಧಾನಸೌಧ ಚಲೋ ಹಮ್ಮಿಕೊಳ್ಳಲಾಗಿದೆ. ಮೆಜೆಸ್ಟಿಕ್​ ಬಳಿಯ ರೈಲ್ವೆ ನಿಲ್ದಾಣದಿಂದ ಹೊರಟ ಬೃಹತ್​ ಪ್ರತಿಭಟನಾ ಮೆರವಣಿಗೆಗೆ ರಾಜ್ಯದ 32 ಸಂಘಟನೆಗಳು ಸಾಥ್​ ನೀಡಿವೆ. ಇದನ್ನೂ ಓದಿರಿ ವಿಧಾನಮಂಡಲ ಕಲಾಪ ಆರಂಭ, 60ಕ್ಕೂ ಹೆಚ್ಚು ಶಾಸಕರು ಗೈರು?

    ಸರ್ಕಾರದ ವಿರುದ್ಧ ಸಿಡಿದೆದ್ದ ರೈತರು... ಮಳೆಯಲ್ಲೇ ಬೃಹತ್​ ಪ್ರತಿಭಟನೆಭೂ ಸುಧಾರಣೆ, ಎಪಿಎಂಸಿ ಕಾಯ್ದೆ ಸುಗ್ರೀವಾಜ್ಞೆ, ವಿದ್ಯುತ್​ ಕಾಯ್ದೆ ತಿದ್ದುಪಡಿ ವಿರೋಧಿಸಿ ಬೆಂಗಳೂರಿನಲ್ಲಿ ಮಳೆಯನ್ನೂ ಲೆಕ್ಕಿಸದೆ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕುತ್ತಿರುವ ಅನ್ನದಾತರು, ಈ ಮೂರು ಕಾಯ್ದೆಯನ್ನೂ ಕೈಬಿಡಬೇಕು ಎಂದು ಆಗ್ರಹಿಸುತ್ತಿದ್ದಾರೆ. ರೈತರ ಹೋರಾಟಕ್ಕೆ ಸರ್ಕಾರ ಮಣಿಯಬೇಕು. ಒಂದು ವೇಳೆ ರೈತರಿಗೆ ಮಾರಕವಾಗಿರುವ ಬಿಲ್​ಗಳನ್ನು ಮಂಡಿಸದ್ದೇ ಆದಲ್ಲಿ ಕಾನೂನು ಭಂಗ, ಜೈಲ್​ ಭರೋ ಚಳವಳಿಯನ್ನೂ ಮಾಡಲು ಸಿದ್ಧರಿದ್ದೇವೆ ಎಂದು ರೈತ ಮುಖಂಡರು ಎಚ್ಚರಿಸಿದರು.

    ಮಧ್ಯಾಹ್ನ 12.50ರ ಸುಮಾರಿಗೆ ರೈತರ ಪ್ರತಿಭಟನಾ ರ್ಯಾಲಿ ರೇಸ್​ಕೊರ್ಸ್​ ರಸ್ತೆ ದಾಟಿತ್ತು. ಮೆಜೆಸ್ಟಿಕ್​, ಫ್ರೀಡಂ ಪಾರ್ಕ್, ಆನಂದರಾವ್​ ಸರ್ಕರ್​, ರೇಸ್​ಕೋರ್ಸ್​ ರಸ್ತೆಯಲ್ಲಿ ಟ್ರಾಫಿಕ್​ ಜಾಮ್​ ಉಂಟಾಗಿತ್ತು. ಪ್ರತಿಭಟನಾ ಮೆರವಣಿಗೆಯಲ್ಲಿ ಸಾವಿರಾರು ಜನ ಜಮಾಯಿಸಿದ್ದರಿಂದ ಎಲ್ಲೆಡೆ ಪೊಲೀಸ್​ ಬಂದೋಬಸ್ತ್ ಏರ್ಪಡಿಸಲಾಗಿದೆ.

    3 ದಿನಕ್ಕೆ ಅಧಿವೇಶನ ಮೊಟಕು? ಸಿಎಂ ವಿರುದ್ಧ ಪ್ರತಿಪಕ್ಷಗಳು ಗರಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts