More

    ವಿಧಾನಮಂಡಲ ಕಲಾಪ ಆರಂಭ, 60ಕ್ಕೂ ಹೆಚ್ಚು ಶಾಸಕರು ಗೈರು?

    ಬೆಂಗಳೂರು: ಮಳೆಗಾಲದ ವಿಧಾನಮಂಡಲ ಕಲಾಪ ಸೋಮವಾರ ಬೆಳಗ್ಗೆ 11ಕ್ಕೆ ಆರಂಭವಾಗಿದೆ. ಪ್ರತಿಭಾರಿ ಅಧಿವೇಶನ ಶುರುವಾಗುತ್ತಿದ್ದ ಸಮಯದಲ್ಲಿ ವಿಧಾನಸೌಧ ಗಿಜುಗಿಡುತ್ತಿತ್ತು. ಆದರೆ, ಈ ಬಾರಿ ಬಹುತೇಕ ಜನಪ್ರತಿನಿಧಿಗಳು ಗೈರಾಗಿದ್ದಾರೆ.

    ಗೃಹಸಚಿವ ಬಸವರಾಜ ಬೊಮ್ಮಾಯಿ, ಡಿಸಿಎಂ ಅಶ್ವಥ್ ನಾರಾಯಣ್​ ಸೇರಿದಂತೆ 50ಕ್ಕೂ ಹೆಚ್ಚು ಶಾಸಕರಿಗೆ ಕರೊನಾ ಸೋಂಕು ದೃಢಪಟ್ಟಿದ್ದು, ಐಸೋಲೇಷನ್​ನಲ್ಲಿದ್ದಾರೆ. ಇನ್ನು ಸೋಂಕಿನ ಭೀತಿ ಹಿನ್ನೆಲೆಯಲ್ಲಿ 70 ವರ್ಷ ಮೇಲ್ಪಟ್ಟ ಶಾಸಕರು ಸದನಕ್ಕೆ ಗೈರಾಗಿದ್ದಾರೆ. ಸಾರ್ವಜನಿಕರು, ಶಾಸಕರ ಪಿಎ ಮತ್ತು ಗನ್ ಮ್ಯಾನ್​ಗಳಿಗೆ ವಿಧಾನಸಭಾ ಅಧಿವೇಶನಕ್ಕೆ ಪ್ರವೇಶ ಇಲ್ಲ. ಹಾಗಾಗಿ ಈ ಬಾರಿಯ ಸದನ ಖಾಲಿ ಖಾಲಿ ಎನಿಸುತ್ತಿದೆ. ಇದನ್ನೂ ಓದಿರಿ ‘ಬಿಜೆಪಿಯಲ್ಲಿ ಯಡಿಯೂರಪ್ಪಗೆ ಮತ್ತೊಬ್ಬ ಪ್ರತಿಸ್ಪರ್ಧಿಯೇ ಇಲ್ಲ’

    ಡಿಸಿಎಂ ಅಶ್ವಥ್ ನಾರಾಯಣ್, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಸಚಿವ ಗೋಪಾಲಯ್ಯ, ಬೈರತಿ ಬಸವರಾಜು, ಉಮಾನಾಥ್ ಕೋಟ್ಯಾನ್, ಎಂ‌.ಪಿ.ಕುಮಾರಸ್ವಾಮಿ, ಎಸ್.ಆರ್. ವಿಶ್ವನಾಥ್, ಪ್ರಭು ಚವ್ಹಾಣ್, ಶಶಿಕಲಾ ಜೊಲ್ಲೆ, ಎಚ್.ಪಿ. ಮಂಜುನಾಥ, ಬಿ.ನಾರಾಯಣ ರಾವ್, ಡಿ.ಎಸ್. ಹುಲಗೇರಿ, ಬಸನಗೌಡ ದದ್ದಲ್, ಪ್ರಿಯಾಂಕ ಖರ್ಗೆ, ಕುಸುಮಾ ಶಿವಳ್ಳಿ, ಬಿ.ಕೆ. ಸಂಗಮೇಶ, ವೆಂಕಟರಾವ್ ನಾಡಗೌಡ, ಡಿ.ಸಿ.ಗೌರಿಶಂಕರ್, ಕೆ.ಮಹದೇವ್ ಅವರುಗಳು ಸದ್ಯ ಕರೊನಾ ಸೋಂಕಿನಿಂದ ಬಳಲುತ್ತಿದ್ದು, ಐಸೋಲೇಷನ್​ನಲ್ಲಿದ್ದಾರೆ. ಇವರ್ಯಾರೂ ಕಲಾಪಕ್ಕೆ ಹಾಜರ್​ ಆಗಿಲ್ಲ.

    ಕಲಾಪ ಆರಂಭಕ್ಕೂ ಮುನ್ನ ಇತ್ತೀಚಿಗೆ ಅಗಲಿದ ಗಣ್ಯರಿಗೆ ಸದನದಲ್ಲಿ ಸಂತಾಪ ಸೂಚಿಸಲಾಯಿತು. ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಸಂಸದ ಅಶೋಕ್ ಗಸ್ತಿ, ಶಾಸಕ ಸತ್ಯನಾರಾಯಣ ಸೇರಿದಂತೆ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಲಾಯಿತು.

    ಸದನ ಆರಂಭವಾಗಿ 30 ನಿಮಿಷ ಕಳೆದರೂ ಬಹುತೇಕ ಶಾಸಕರು ಆಗಮಿಸಿರಲಿಲ್ಲ. ಆಡಳಿತ ಮತ್ತು ವಿಪಕ್ಷ ಕುರ್ಚಿಗಳು ಖಾಲಿ ಖಾಲಿ ಕಾಣಿಸುತ್ತಿದ್ದವು.

    ‘ಮುಂದಿನ ದಿನಗಳಲ್ಲಿ ಬಿ.ವೈ.ವಿಜಯೇಂದ್ರ ಅವರೇ ರಾಜ್ಯದ ಮುಖ್ಯಮಂತ್ರಿ…’

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts