

ಬೈಂದೂರು: ಇಲ್ಲಿನ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಹೊಸ ಬಸ್ ನಿಲ್ದಾಣದ 100 ಮೀಟರ್ ಅಂತರದಲ್ಲಿ ರತ್ತು ಬಾ ಹೈಸ್ಕೂಲ್ ಹತ್ತಿರದ ಮೂಕಾಂಬಿಕಾ ಹೋಟೆಲ್ನಲ್ಲಿ ನಿಷೇಧಿತ ತಂಬಾಕು ಮಾರಾಟ ಮಾಡುತ್ತಿರುವುದನ್ನು ಗಮನಿಸಿ ತಹಸೀಲ್ದಾರರ ಮಾರ್ಗದರ್ಶನದಂತೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಅಜಯ್ ಭಂಡಾರಕರ, ಆರೋಗ್ಯ ನಿರೀಕ್ಷಕ ಸಂತೋಷ್ ಎಂಡಿ, ಪಟ್ಟಣ ಪಂಚಾಯಿತಿ ಸಿಬ್ಬಂದಿ ವರ್ಗದವರಿಂದ ದಿಢೀರ್ ದಾಳಿ ನಡೆಸಿ ಹೋಟೆಲ್ ಮುಚ್ಚಲಾಯಿತು.