ನ.2ರಂದು ಪತ್ರಿಕೋದ್ಯಮ ವಿಚಾರಗೋಷ್ಠಿ

seminar
Published on

ಬೈಂದೂರು: ಬೈಂದೂರು ಉತ್ಸವದ ಅಂಗವಾಗಿ ಬೈಂದೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ವತಿಯಿಂದ ನ.2ರಂದು ‘ಅಭಿವೃದ್ಧಿ ಪತ್ರಿಕೋದ್ಯಮ- ವಾಸ್ತವ ಸವಾಲು ಸಾಧ್ಯತೆಗಳು’ ವಿಚಾರಗೋಷ್ಠಿ ನಡೆಯಲಿದೆ. 2ರಂದು ಬೆಳಗ್ಗೆ 11 ಗಂಟೆಗೆ ಬೈಂದೂರಿನ ಗಾಂಧಿ ಮೈದಾನದಲ್ಲಿ ಬೈಂದೂರು ಉತ್ಸವದ ಪ್ರದಾನ ವೇದಿಕೆಯಲ್ಲಿ ಕಾರ್ಯಕ್ರಮ ನಡೆಯಲಿದ್ದು, ಬೈಂದೂರು ತಾಲೂಕು ಕಾರ್ಯನಿತರ ಪತ್ರಕರ್ತರ ಸಂಘದ ಅಧ್ಯಕ್ಷ ಅಂದುಕಾ ಎ.ಎಸ್. ಅಧ್ಯಕ್ಷತೆ ವಹಿಸಲಿದ್ದಾರೆ.

ಕರಾವಳಿ ಪತ್ರಿಕೋದ್ಯಮದ ಸವಾಲುಗಳು ವಿಚಾರವಾಗಿ ಪತ್ರಕರ್ತ ಲಕ್ಷ್ಮೀಮಚ್ಚಿನ ಮಾತನಾಡಲಿದ್ದಾರೆ. ನವಮಾಧ್ಯಮದ ಸವಾಲು ಸಾಧ್ಯತೆ ಬಗ್ಗೆ ಮಣಿಪಾಲ ಮಾಹೆಯ ಗಾಂಧಿಯನ್ ಸೆಂಟರ್‌ಫಾರ್ ಫಿಲೋಸಾಫಿಕಲ್ ಆರ್ಟ್ಸ್ ಆ್ಯಂಡ್ ಸೈನ್ಸಸ್ ಸಂಸ್ಥೆ ನಿರ್ದೇಶಕ ಪ್ರೊ.ವರದೇಶ್ ಹಿರೇಗಂಗೆ ವಿಷಯ ಮಂಡನೆ ಮಾಡಲಿದ್ದಾರೆ. ಬೈಂದೂರು ಪತ್ರಿಕೋದ್ಯಮ ಅಭಿವೃದ್ಧಿಯ ಮುನ್ನೋಟ ಕುರಿತು ಸಂಘದ ಗೌರವಾಧ್ಯಕ್ಷ ಎಸ್.ಜನಾರ್ದನ ಮರವಂತೆ ವಿಚಾರ ಮಂಡಿಸಲಿದ್ದಾರೆ. ಉಡುಪಿ ಜಿಲ್ಲಾ ಕಾರ್ಯನಿತರ ಪತ್ರಕರ್ತರ ಸಂಘ ಉಡುಪಿ ಅಧ್ಯಕ್ಷ ರಾಜೇಶ್ ಶೆಟ್ಟಿ ಶುಭಾಶಂಸನೆಗೈಯಲಿದ್ದಾರೆ ಎಂದು ಸಂಘದ ಅಧ್ಯಕ್ಷ ಅಂದುಕಾ ಎ.ಎಸ್., ಕಾರ್ಯದರ್ಶಿ ಅರುಣ್ ಕುಮಾರ್ ಶಿರೂರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net