ಮಡಂತ್ಯಾರು ಸಹಕಾರಿಗೆ ಆಯ್ಕೆ

New Project (10)
Published on

ಬೆಳ್ತಂಗಡಿ: ಮಡಂತ್ಯಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಸಹಕಾರಿ ಭಾರತಿಯ ಅಭ್ಯರ್ಥಿ, ಅಲ್ಪಸಂಖ್ಯಾತ ಮೋರ್ಚಾದ ರಾಜ್ಯ ಉಪಾಧ್ಯಕ್ಷ ಜೋಯಲ್ ಗಾಡ್ಫಿ ಮೆಂಡೋನ್ಸಾ ಅಧ್ಯಕ್ಷರಾಗಿ ಹಾಗೂ ಉಪಾಧ್ಯಕ್ಷರಾಗಿ ಮಡಂತ್ಯಾರು ಗ್ರಾ.ಪಂ. ಮಾಜಿ ಸದಸ್ಯ, ಹಾ.ಉ.ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಕಾಂತಪ್ಪ ಗೌಡ ಆಯ್ಕೆಯಾಗಿದ್ದಾರೆ.

ನಿರ್ದೇಶಕರಾಗಿ ಅರವಿಂದ ಜೈನ್, ಧನಲಕ್ಷ್ಮೀ, ಕುಮಾರ ನಾಯ್ಕ, ಅಮಿತಾ ಪ್ರಿಯಾ ಲೋಬೊ, ಮಹಾಬಲ ಕೆ, ಸುರೇಶ್ ಎಸ್, ಕಿಶೋರ್ ಕುಮಾರ್, ಪದ್ಮನಾಭ ಸಾಲಿಯಾನ್, ಗೋಪಾಲಕೃಷ್ಣ ಕೆ, ಗಣೇಶ್ ಮೂಲ್ಯ ಆಯ್ಕೆಯಾದರು. ಸಹಕಾರಿ ಭಾರತಿ 9ರಲ್ಲಿ ಜಯಗಳಿಸಿದ್ದು ಹಾಗೂ ಕಾಂಗ್ರೆಸ್ ಬೆಂಬಲಿತ 3 ಅಭ್ಯರ್ಥಿಗಳು ವಿಜಯಶಾಲಿಯಾಗಿದ್ದಾರೆ. ವಿಲಾಸ್ ಚುನಾವಣಾ ಪ್ರಕ್ರಿಯೆಯನ್ನು ನಡೆಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜೋಕಿಂ ಡಿಸೋಜ, ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ಪ್ರತಿನಿಧಿ ಸಿರಾಜುದ್ದೀನ್ ಹಾಗೂ ಸಿಬ್ಬಂದಿ ಸಹಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net