ಬಾಲಬಂಧು ಪುರಸ್ಕಾರಕ್ಕೆ ಆಯ್ಕೆ

Btw_Selection
Published on

ಬಂಟ್ವಾಳ: ಶಂಭೂರು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನ.19ರಂದು ಜರುಗಲಿರುವ ಬಂಟ್ವಾಳ ತಾಲೂಕಿನ 18ನೇ ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ ಕೊಡಮಾಡುವ ‘ಬಾಲಬಂಧು ಪುರಸ್ಕಾರ’ಕ್ಕೆ ಪಾಣೆಮಂಗಳೂರು ಶ್ರೀ ಶಾರದಾ ಪ್ರೌಢ ಶಾಲೆಯ ಸಹ ಶಿಕ್ಷಕಿ ಸುಧಾ ನಾಗೇಶ್ ಅವರನ್ನು ಆಯ್ಕೆ ಮಾಡಲಾಗಿದೆಯೆಂದು ಮಕ್ಕಳ ಕಲಾ ಲೋಕದ ಅಧ್ಯಕ್ಷ ರಮೇಶ ಎಂ.ಬಾಯಾರು ತಿಳಿಸಿದ್ದಾರೆ.

ಕವನಗಳು, ಹಾಸ್ಯ ಲಹರಿ, ಮಿನಿ ಅರ್ಥ ಕೋಶ, ವಿದ್ಯಾರ್ಥಿ ಕೈಪಿಡಿ, ತುಳು ಕೃತಿ, ಮಕ್ಕಳ ಸ್ವರಚನೆಗಳ ಹಸ್ತ ಪತ್ರಿಕೆ, ವಿದ್ಯಾರ್ಥಿ ಸಾಹಿತ್ಯ ಗೋಷ್ಠಿ ಆಯೋಜನೆ. 576 ವಿದ್ಯಾರ್ಥಿಗಳಿಗೆ ಗೈಡ್ಸ್ ತರಬೇತಿ, 5 ಗೈಡ್ಸ್‌ಗಳು ರಾಷ್ಟ್ರಪತಿ ಪುರಸ್ಕಾರ, 55 ಗೈಡ್ಸ್ ಗಳು ರಾಜ್ಯ ಪುರಸ್ಕಾರ ಪ್ರಶಸ್ತಿ, 12 ಸ್ಕೌಟ್ಸ್ ಮತ್ತು 15 ಗೈಡ್ಸ್ ಗಳು ‘ವಿಶ್ವ ಸಾಂಸ್ಕೃತಿಕ ಜಾಂಬೂರಿಯಲ್ಲಿ ಭಾಗಿ, 4 ಸ್ಕೌಟ್ ಮತ್ತು ಇಬ್ಬರು ಗೈಡ್ಸ್ ವಿಟ್ಲ ಸ್ಥಳೀಯ ಸಂಸ್ಥೆಯು ಹಮ್ಮಿಕೊಂಡಿದ್ದ ಜಿಲ್ಲಾ ಕ್ಯಾಂಪೊರಿಯಲ್ಲಿ ಭಾಗವಹಿಸಲು ಪ್ರೇರಣೆ ನೀಡಿರುವ ಮೂಲಕ ಹಲವಾರು ಪ್ರಶಸ್ತಿಗಳನ್ನು ಪಡೆದಿರುವ ಹಿನ್ನೆಲೆಯಲ್ಲಿ ಈ ಗೌರವಕ್ಕೆ ಆಯ್ಕೆ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net