

ವಿಜಯವಾಣಿ ಸುದ್ದಿಜಾಲ ಬಂಟ್ವಾಳ
ಜಮೀರ್ ಅಹಮದ್ ಎನ್ನುವ ಮೂರ್ಖ ಮಂತ್ರಿಯನ್ನು ಹಿಡಿದುಕೊಂಡು ಸಿದ್ದರಾಮಯ್ಯ ಸರ್ಕಾರ ಹಿಂದುಗಳು ಹಾಗೂ ರೈತರ ಭೂಮಿಯನ್ನು ವಕ್ಫ್ ಆಸ್ತಿಯಾಗಿ ಪರಿವರ್ತಿಸುವ ಕಾರ್ಯ ಮಾಡುತ್ತಿದ್ದು, ಕಾಂಗ್ರೆಸ್‌ನ ಇಂತಹ ಜನವಿರೋಧಿ ನೀತಿಗೆ ಅಂತ್ಯ ಹಾಡುವ ನಿಟ್ಟಿನಲ್ಲಿ ಕೇಂದ್ರದ ಮೋದಿ ಸರ್ಕಾರ ಕಾನೂನಿಗೆ ತಿದ್ದುಪಡಿ ತರುವ ಕಾರ್ಯ ಮಾಡಲಿದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಕ್ ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ಸರ್ಕಾರದ ಲ್ಯಾಂಡ್ ಜಿಹಾದ್ ಹಾಗೂ ವಕ್ಫ್ ಅಕ್ರಮ ವಿರೋಧಿಸಿ ಬಿ.ಸಿ.ರೋಡಿನಲ್ಲಿ ಸೋಮವಾರ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.
ಕಿಯೋನಿಕ್ಸ್ ಮಾಜಿ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್ ಮಾತನಾಡಿ, ಈ ಅಕ್ರಮದ ಹಿಂದಿರುವ ಸಚಿವ ಜಮೀರ್ ಅಹಮ್ಮದ್ ಖಾನ್‌ರನ್ನು ಸಚಿವ ಸಂಪುಟದಿಂದ ಕಿತ್ತು ಹಾಕಬೇಕು, ವಕ್ಫ್ ಮಂಡಳಿಯನ್ನು ಬರ್ಕಾಸ್ತು ಮಾಡಬೇಕು ಎಂದು ಆಗ್ರಹಿಸಿದರು. ಉಚಿತ ಭಾಗ್ಯಗಳನ್ನು ಪಡೆದು ಸರ್ಕಾರದ ಅಕ್ರಮಗಳನ್ನು ಜನರು ಮರೆತ ಪರಿಣಾಮ ಈ ಪರಿಸ್ಥಿತಿ ಬಂದಿದೆ. ಈ ದೇಶವನ್ನು ಇಸ್ಲಾಮೀಕರಣ ಮಾಡುವ ಷಡ್ಯಂತ್ರ ವಕ್ಫ್ ಅಕ್ರಮದ ಹಿಂದೆ ಅಡಗಿದೆ ಎಂದರು.
ಬಿಜೆಪಿ ರಾಜ್ಯ ಮುಖಂಡ ವಿಕಾಸ್ ಪುತ್ತೂರು, ಬಂಟ್ವಾಳ ಬಿಜೆಪಿ ಅಧ್ಯಕ್ಷ ಆರ್.ಚೆನ್ನಪ್ಪ ಕೋಟ್ಯಾನ್, ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಸುದರ್ಶನ ಬಜ, ಶಿವಪ್ರಸಾದ್ ಶೆಟ್ಟಿ, ಪಕ್ಷದ ಪ್ರಮುಖರಾದ ದೇವಪ್ಪ ಪೂಜಾರಿ, ದಿನೇಶ್ ಅಮ್ಟೂರು, ಸಂದೇಶ್ ಶೆಟ್ಟಿ, ಪುರುಷೋತ್ತಮ ಶೆಟ್ಟಿ, ಪುರುಷೋತ್ತಮ ಸಾಲ್ಯಾನ್, ಜನಾರ್ದನ ಬೊಂಡಾಲ, ಮೋನಪ್ಪ ದೇವಸ್ಯ, ಯಶೋಧರ ಕರ್ಬೆಟ್ಟು, ಪ್ರೇಮನಾಥ ಶೆಟ್ಟಿ ಅಂತರ, ವೆಂಕಟೇಶ್ ನಾವಡ, ಡೊಂಬಯ ಅರಳ, ಆನಂದ ಎ.ಶಂಭೂರು, ಮೋಹನ್ ಪಿ.ಎಸ್., ರಾಮದಾಸ್ ಬಂಟ್ವಾಳ್, ದೇವದಾಸ್ ಶೆಟ್ಟಿ, ನಂದರಾಮ ರೈ ಬೆಳ್ಳೂರು, ಗಣೇಶ್ ರೈ ಮಾಣಿ, ಸುರೇಶ್ ಕೋಟ್ಯಾನ್, ದಿನೇಶ್ ಭಂಡಾರಿ, ಹರಿಪ್ರಸಾದ್, ಪುಷ್ಪರಾಜ್ ಚೌಟ, ಗೋವಿಂದ ಪ್ರಭು, ಸನತ್ ಕುಮಾರ್ ರೈ, ವಿದ್ಯಾವತಿ ಪ್ರಮೋದ್, ದೇವಕಿ, ಹರ್ಷಿಣಿ ಪುಷ್ಪಾನಂದ, ದಿನೇಶ್ ಶೆಟ್ಟಿ ದಂಬೆದಾರ್, ಮೀನಾಕ್ಷಿ ಗೌಡ, ಸಂತೋಷ್ ರಾಯಿಬೆಟ್ಟು, ಅಜಿತ್ ಶೆಟ್ಟಿ, ಸದಾನಂದ ನಾವೂರು ಮೊದಲಾದವರಿದ್ದರು.
ಬಂಟ್ವಾಳ ತಾಲೂಕಿನಲ್ಲಿ ಮೋನಪ್ಪ ಗೌಡ ಎಂಬುವರ ಕೃಷಿ ಜಮೀನು ವಕ್ಫ್ ಟ್ರಿಬ್ಯುನಲ್‌ನಲ್ಲಿ ಸೇರಿಕೊಂಡಿದ್ದು, ತನ್ನ ಜಾಗವನ್ನು ಪಡೆಯಲು ಕೈ ಚಾಚಿ ಬೇಡುವ ಪರಿಸ್ಥಿತಿ ನಿರ್ಮಾಣಗೊಂಡಿದೆ. ರೈತರ ಜಮೀನು ಉಳಿಯಲು ವಕ್ಫ್ ಭೂ ಕಬಳಿಕೆಯ ವಿರುದ್ಧ ಹೋರಾಟ ಅನಿವಾರ್ಯ. - ರಾಜೇಶ್ ನಾಕ್, ಬಂಟ್ವಾಳ ಶಾಸಕ https://www.vijayavani.net/the-government-has-worried-the-farmers https://www.vijayavani.net/service-deficiency-in-canara-bank-savanur