ಶಿಕ್ಷಣದೊಂದಿಗೆ ನಾಯಕತ್ವದ ಗುಣ ಅಗತ್ಯ : ಡಾ.ಮಂಜುನಾಥ್ ಶ್ರೀಪಾದ್ ರೇವಣಕರ್ ಹೇಳಿಕೆ

New Project
Published on

ಮೂಡುಬಿದಿರೆ: ಶಿಕ್ಷಣದೊಂದಿಗೆ ನಾಯಕತ್ವದ ಗುಣ ಬೆಳೆಸಿಕೊಳ್ಳುವುದು ಬಹಳ ಮುಖ್ಯ. ಎಲ್ಲಿ ಸಂಸ್ಕಾರವಿರುತ್ತದೆಯೋ ಅಲ್ಲಿ ಶಿಕ್ಷಣವಿರುತ್ತದೆ. ಶಾಲಾ ಸುಧಾರಣೆ ಮಕ್ಕಳ ಕೈಯಲ್ಲಿದೆ ಎಂದು ಸೂರಜ್ ಶೈಕ್ಷಣಿಕ ಮತ್ತು ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ರೊಟೇರಿಯನ್ ಡಾ.ಮಂಜುನಾಥ್ ಶ್ರೀಪಾದ್ ರೇವಣಕರ್ ಹೇಳಿದರು.

ಎಕ್ಸಲೆಂಟ್ ಸಿಬಿಎಸ್‌ಇ ಶಾಲೆಯಲ್ಲಿ 2025-26ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಸಂಸತ್ತನ್ನು ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಕೀಲ ಪದ್ಮಪ್ರಸಾದ್ ಜೈನ್ ಮುಖ್ಯ ಅತಿಥಿಯಾಗಿದ್ದರು. ಎಕ್ಸಲೆಂಟ್ ಸಂಸ್ಥೆ ಅಧ್ಯಕ್ಷ ಯುವರಾಜ್ ಜೈನ್, ಕಾರ್ಯದರ್ಶಿ ರಶ್ಮಿತಾ ಜೈನ್, ಎಕ್ಸಲೆಂಟ್ ವಿದ್ಯಾಸಂಸ್ಥೆಗಳ ಆಡಳಿತ ನಿರ್ದೇಶಕ ಡಾ.ಬಿ.ಪಿ.ಸಂಪತ್ ಕುಮಾರ್, ಪ್ರಾಂಶುಪಾಲ ಪ್ರಸಾದ್ ಉಪಸ್ಥಿತರಿದ್ದರು.

ಹರ್ಷಿತಾ ಕಾರ್ಯಕ್ರಮ ನಿರೂಪಿಸಿದರು. ಶಾಲಾ ನಾಯಕಿ ನಿರೀಕ್ಷಾ ಸ್ವಾಗತಿಸಿದರು. ನಾಯಕ ಶ್ರೀಕಾರ್ ಪಾಟೀಲ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net