ಕಠಿಣ ಪರಿಶ್ರಮದಿಂದ ಸಂಸ್ಥೆ ಕಟ್ಟಿದ ಛಲವಾದಿ : ಪ್ರೊ.ಎ.ಎಂ.ಖಾನ್ ಮೆಚ್ಚುಗೆ

01
Published on

ಉಳ್ಳಾಲ: ಉದ್ಯಮದಲ್ಲಿ ಯಶಸ್ಸು ಸಾಧಿಸಿದ ಬಳಿಕ ಶಿಕ್ಷಣ ಕ್ಷೇತ್ರಕ್ಕೆ ಕಾಲಿಟ್ಟು ಕಠಿಣ ಪರಿಶ್ರಮದಿಂದ ದೊಡ್ಡ ಸಂಸ್ಥೆ ಕಟ್ಟಿದ ಛಲವಾದಿ ಯು.ಕೆ.ಮೋನು ಎಂದು ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎ.ಎಂ.ಖಾನ್ ಶ್ಲಾಘಿಸಿದರು.

ಕಣಚೂರು ಇಸ್ಲಾಮಿಕ್ ಎಜುಕೇಶನ್ ಟ್ರಸ್ಟ್ ಆಶ್ರಯದಲ್ಲಿ, ಕಣಚೂರು ಶಿಕ್ಷಣ ಸಂಸ್ಥೆಯ ಸಂಸ್ಥಾಪಕರ ದಿನ ಪ್ರಯುಕ್ತ ಸೋಮವಾರ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಕಣಚೂರು ಸಮೂಹ ಶಿಕ್ಷಣ ಸಂಸ್ಥೆಗಳ ಸಲಹೆಗಾರ, ಕಲ್ಲಿಕೋಟೆ ವಿವಿ ವಿಶ್ರಾಂತ ಕುಲಪತಿ ಪ್ರೊ.ಅಬ್ದುಲ್ ರಹಿಮಾನ್ ಮಾತನಾಡಿದರು. ಕಣಚೂರು ಇಸ್ಲಾಮಿಕ್ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ.ಯು.ಕೆ.ಮೋನು ಅಧ್ಯಕ್ಷತೆ ವಹಿಸಿದ್ದರು. ಕಣಚೂರು ಇನ್‌ಸ್ಟಿಟ್ಯೂಷನ್ ಆಫ್ ಮೆಡಿಕಲ್ ಸೈನ್ಸಸ್‌ನ ನಿರ್ದೇಶಕ ಅಬ್ದುಲ್ ರಹಿಮಾನ್, ನಿರ್ದೇಶಕರಾದ ಝೊಹರಾ ಮೋನು, ಷಹದಾ ರಹಿಮಾನ್, ಉಮಯ್ಯ ಭಾನು ಆರಿಫ್, ಫರೀದಾ ನಾಸರ್, ಡಾ.ಅಬಿದ ಹಾಸಿಂ, ಕಣಚೂರು ಆರೋಗ್ಯ ವಿಜ್ಞಾನ ಸಲಹಾ ಸಮಿತಿ ಅಧ್ಯಕ್ಷ ಡಾ.ಮೊಹಮ್ಮದ್ ಇಸ್ಮಾಯಿಲ್ ಎಚ್, ಸದಸ್ಯ ಡಾ.ಎಂ.ವೆಂಕಟರಾಯ ಪ್ರಭು ಮೊದಲಾದವರು ಉಪಸ್ಥಿತರಿದ್ದರು.

ಡಾ.ರೋಹನ್ ಮೋನಿಸ್ ಸನ್ಮಾನಿತರ ವಿವರ ನೀಡಿದರು. ಡಾ.ಮೋಲಿ ಸಲ್ದಾನ ವಂದಿಸಿದರು. ಪ್ರತೀಕ್ಷಾ ಶೆಟ್ಟಿ ಹಾಗೂ ಸೌಮ್ಯ ಕಾರ್ಯಕ್ರಮ ನಿರೂಪಿಸಿದರು.

ಬಾಲ್ಯದ ದಿನಗಳು ಕಷ್ಟದಿಂದ ಕೂಡಿತ್ತು. ಉದ್ಯಮಿಯಾದ ಬಳಿಕ ಶ್ರೀಮಂತಿಕೆಯ ಬದುಕು ಬಂದಿತ್ತು. ಆದರೆ ಅಮ್ಮನಿಗೆ ಅನುಭವಿಸಲು ಸಾಧ್ಯವಾಗಲಿಲ್ಲ. ಸಮಾಜ ನನಗೆ ಕೊಟ್ಟದ್ದನ್ನು ಮರಳಿ ಸಮಾಜಕ್ಕೆ ಅಷ್ಟೇ ಕೊಟ್ಟಿದ್ದೇನೆ ಎನ್ನುವ ತೃಪ್ತಿಯಿಲ್ಲ. ಎಂಟು ಮಕ್ಕಳೊಂದಿಗೆ ಆರಂಭಗೊಂಡ ಈ ಶಿಕ್ಷಣ ಸಂಸ್ಥೆ ಯಶಸ್ಸಿನ ಹಿಂದೆ ಎಲ್ಲರ ಶ್ರಮ ಅಡಗಿದೆ. ಡಾ.ಯು.ಕೆ.ಮೋನು ಸಂಸ್ಥಾಪಕ, ಕಣಚೂರು ಇಸ್ಲಾಮಿಕ್ ಎಜುಕೇಶನ್ ಟ್ರಸ್ಟ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net