

ಬೆಂಗಳೂರು:ವಿಜ್ಞಾನ ಲೋಕದ ಕುರಿತು ಮಕ್ಕಳಿಗೆ ಆಸಕ್ತಿ ಮೂಡಿಸುವ ನಿಟ್ಟಿನಲ್ಲಿ ಐಟಿಸಿ ಸನ್ಫೀಸ್ಟ್ ಕಂಪನಿ ಶುಕ್ರವಾರ ನಗರದ ಸೇಂಟ್ ಜೋಸೆಫ್ ಶಾಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ "ಲಿಲ್ ಬಿಗ್ ಫ್ಯಾಂಟಸಿ ಸೈನ್ಸ್ ಬಸ್' ವೀಕ್ಷಿಸಿ ಮಕ್ಕಳು ಪುಳಕಗೊಂಡರು.
ಬಸ್ ಒಳಗಡೆ ಪರದೆಯಲ್ಲಿ ಮೂಡಿಬಂದ ಕಲಾಕೃತಿಯನ್ನು ಕೈಗಳಿಂದ ಸ್ಪರ್ಶಿಸಿ 3ಡಿ ಎಫೆಕ್ಟ್ ಮೂಲಕ ಆಕಾಶಯಾನದ ನೈಜ ಅನುಭವ ಜತೆಗೆ ಮಾಹಿತಿ ಪಡೆದುಕೊಂಡರು. ನೂರಾರು ಕೆಗಳು, ಗಗನಯಾತ್ರೆ ತಮ್ಮ ಸುತ್ತಮುತ್ತ ಹಾದುಹೋಗುವ ಅನುಭವದ ಮೂಲಕ ಆಕಾಶಯಾನ ಕುರಿತ ವಾಸ್ತವವನ್ನು ಮಕ್ಕಳು ಆನಂದಿಸಿದರು. ಬಸ್ನಲ್ಲಿ ವಿಸ್ತಾರವಾದ ಪರದೆ ವ್ಯವಸ್ಥೆ ಮಾಡಲಾಯಿತು. ಪೇಪರ್ ಮೇಲೆ ಬರೆದ ಕಲಾಕೃತಿಯನ್ನು ಸ್ಕ್ಯಾನ್ ಮಾಡಿದ ಬಳಿಕ ಅಂತರಿಕ್ಷದಲ್ಲಿ ಡಿಜಿಟಲ್ ರೂಪದಲ್ಲಿ ದೊಡ್ಡ ಅರವಾಗಿ ಪ್ರದರ್ಶನವಾಯಿತು. ಒಟ್ಟಿನಲ್ಲಿ ವಿಜ್ಷಾನ ಲೋಕದ ಕೌತಕವನ್ನು ಕಣ್ತುಂಬಿಕೊಂಡರು. ದೇಶಾದ್ಯಂತ ಸಂಚರಿಸುವ ಈ ಬಸ್ ಮಕ್ಕಳ ಕ್ರಿಯಾತ್ಮಕತೆ, ಕಲ್ಪನೆಗೆ ಸಾಯಾಗಲಿದೆ. ಆಸಕ್ತಿದಾಯಕ ವಿಚಾರ, ಕಲೆ ಪ್ರದರ್ಶಿಸಿ ಆಯ್ಕೆಯಾದ ಮಕ್ಕಳಿಗೆ ಅಮೆರಿಕದ "ನ್ಯಾಷನಲ್ ಏರೋನಾಟಿಕ್ಸ್ ಆ್ಯಂಡ್ ಸ್ಪೇಸ್ ಅಡ್ಮಿನಿಸ್ಟೇಷನ್' (ನಾಸಾ) ಭೇಟಿ ಮಾಡುವ ಅವಕಾಶವನ್ನು ಐಟಿಸಿ ಡಾರ್ಕ್ ಫ್ಯಾಂಟಸಿ ತಂಡ ಒದಗಿಸಲಿದೆ.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮಾಜಿ ನಿರ್ದೇಶಕ ಪ್ರಕಾಶ್ರಾವ್ ಮಾತನಾಡಿ, ಪರಿಕಲ್ಪನೆ ಮೂಲಕ ಇಸ್ರೋ, ಮಂಗಳಯಾನ ಸೇರಿ ಹಲವು ಪ್ರಮುಖ ಅಂತರಿಕ್ಷ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಸಾಧ್ಯವಾಯಿತು. ಮಕ್ಕಳಲ್ಲಿ ವಿಶೇಷ ಪರಿಕಲ್ಪನೆ, ವಿಜ್ಷಾನದ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಇರುತ್ತದೆ. ಅವರ ಸೃಜನಶೀಲತೆಯನ್ನು ಉತ್ತೇಜಿಸಿ ಕಲ್ಪನೆಗೆ ಜೀವ ನೀಡುವ ಉದ್ದೇಶದಿಂದ ಅಂತರಿಕ್ಷ ಬಸ್ ತಯಾರಿಸಿರುವುದು ವಿಶೇಷ. ಈ ರೀತಿಯ ಪ್ರಯತ್ನಗಳು ಮಕ್ಕಳಲ್ಲಿ ವಿಜ್ಷಾನ ಬಗ್ಗೆ ಇನ್ನಷ್ಟು ಆಸಕ್ತಿ, ಕುತೂಹಲ ಮೂಡಿಸಲು ಸಹಕಾರಿಯಾಗಲಿದೆ ಎಂದರು.
ಸೇಂಟ್ ಜೋಸೆಫ್ ಶಾಲೆ ಪ್ರಾಂಶುಪಾಲ ರೋಹನ್ ಡಿ. ಅಲ್ಮೇಡಾ, ನಿಮ್ಹಾನ್ಸ್ ಡಿಎಂ ಡಾ.ಮೇಘಾ ಮಹಾಜನ್, ಐಟಿಸಿ ಕಂಪನಿಯ ಅಲಿ ಹ್ಯಾರಿಸ್ ಶೇರ್ ಮತ್ತಿತರರಿದ್ದರು.
ನನ್ನ ಮಗಳಿಗೆ ಈಗ 8 ವರ್ಷ. ಪ್ರತಿನಿತ್ಯ ಒಂದೊಂದು ಪರಿಕಲ್ಪನೆ ಮಾಡಿಕೊಂಡು ಪೈಲಟ್ ಆಗುತ್ತೇನೆ, ಬಾಣಸಿಗಳಾಗುತ್ತೇನೆ, ವೈದ್ಯೆಯಾಗುತ್ತೇನೆ ಎನ್ನುತ್ತಾಳೆ. ದಿನದಿಂದ ದಿನಕ್ಕೆ ಮಕ್ಕಳ ಕಲ್ಪನೆ ಬದಲಾಗುತ್ತಿದೆ. ಅವರ ಕಲ್ಪನೆಗೆ ಪ್ರೋತ್ಸಾಹ ನೀಡುವುದು ನಮ್ಮ ಜವಾಬ್ದಾರಿ. ಐಟಿಸಿ ತಂಡದ ವಿನೂತನ ಪ್ರಯತ್ನದಿಂದ ವಿಜ್ಞಾನ ಬಗ್ಗೆ ಕೌತುಕದಿಂದ ತಿಳಿದುಕೊಳ್ಳಲು ಮಕ್ಕಳಿಗೆ ಸಹಾಯವಾಗಲಿದೆ.
| ಮಂದಿರಾ ಬೇಡಿ, ನಟಿ