

ಉಡುಪಿ: ವಿವಿಧ ದುರಸ್ತಿ ಕಾರ್ಯನಿಮಿತ್ತ ಹಲವೆಡೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.
27ರಂದು ಬೆಳಗ್ಗೆ 9ಗಂಟೆಯಿಂದ ಸಂಜೆ 5.30ರ ವರೆಗೆ 33/11ಕೆವಿ ಶಿರ್ವ ಎಂ.ಯು.ಎಸ್.ಎಸ್ ನಿಂದ ಹೊರಡುವ 11ಕೆವಿ ಮುದರಂಗಡಿ ಫೀಡರಿನಲ್ಲಿ ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ, ಬಂಟಕಲ್ಲು, ಪಡುಬೆಳ್ಳೆ, ಶಿರ್ವ, ಪಂಜಿಮಾರು, ಚೆಕ್ ಪಾದೆ, ಕಾಪು, ಇಂದ್ರಪುರ, ಬಂಗ್ಲೆಗುಡ್ಡೆ, ಕುತ್ಯಾರು, ಕಾಪು ರೋಡ್, ಕಳತ್ತೂರು, ತೆಂಕರಪಲ್ಕೆ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗುತ್ತದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.
30ರಂದು ಬೆಳಗ್ಗೆ 9ಗಂಟೆಯಿಂದ ಸಂಜೆ 5ರ ವರೆಗೆ ಕುಂದಾಪುರ ಪುರಸಭೆ ವ್ಯಾಪ್ತಿ, ಗೋಪಾಡಿ, ಕುಂಭಾಶಿ, ತೆಕ್ಕಟ್ಟೆ, ಕೋಡಿ, ಅಂಕದಕಟ್ಟೆ ಎಂ.ಕೋಡಿ, ಬೀಜಾಡಿ, ಪ್ರಗತಿನಗರ, ಶಾಂತಿನಗರ, ರಾಜೀವನಗರ, 80 ಬಡಗುಬೆಟ್ಟು, ಈಶ್ವರನಗರ, ಸರಳೇಬೆಟ್ಟು, ಗಣೇಶ್ ಭಾಗ್, ಸಿಂಡಿಕೇಟ್ ಸರ್ಕಲ್, ಎಂ.ಜಿ.ಸಿ ಸ್ಕೂಲ್, ಬಿ.ಎಸ್.ಎನ್.ಎಲ್ , ಡಿ.ಸಿ ಆಫೀಸ್, ಆರ್.ಟಿ.ಒ ಆಫೀಸ್, ಪೆರಂಪಳ್ಳಿ, ಸಗ್ರಿ ನೋಳೆ, ಶಿವಳ್ಳಿ ಇಂಡಸ್ಟ್ರಿಯಲ್ ಏರಿಯಾ, ಮಣಿಪಾಲ ಟೌನ್, ವೇಣುಗೋಪಾಲ ದೇವಸ್ಥಾನ ಬಳಿ, ಕೆ.ಎಂ.ಸಿ ಆಸ್ಪತ್ರೆ, ಎಂ.ಐ.ಟಿ ಕ್ಯಾಂಪಸ್, ರೋಯಲ್ ಎಂಬೆಸಿ, ಇಂದಿರಾನಗರ, ಕಸ್ತೂರ್ಬಾ ನಗರ, ಕುಕ್ಕಿಕಟ್ಟೆ, ಪದ್ಮನಾಭನಗರ, ಚಿಟ್ಪಾಡಿ, ಹನುಮಾನ್ ಗ್ಯಾರೇಜ್ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗುತ್ತದೆ.
30ರಂದು ಬೆಳಗ್ಗೆ 9.30ರಿಂದ ಸಂಜೆ 5.30ರ ವರೆಗೆ ಆದಿಉಡುಪಿ, ಮಧ್ವನಗರ, ಮಲ್ಪೆ ಮುಖ್ಯರಸ್ತೆ, ಪಂದುಬೆಟ್ಟು, ಕಲ್ಮಾಡಿ, ಇನ್‌ಕಂಟ್ಯಾಕ್ಸ್ ಆಫೀಸ್ ಹತ್ತಿರ, ಕಿದಿಯೂರು, ಬಾಪುತೋಟ, ಬಂಕೇರಕಟ್ಟೆ, ಕೊಪ್ಪಲತೋಟ, ಹಾರ್ಬರ್ ಹೊಸಾಳ, ಕಚ್ಚೂರು, ರಂಗನಕೆರೆ, ಹೇರಾಡಿ, ಹನೆಹಳ್ಳಿ, ಕೂರಾಡಿ, ನಡೂರು, ಪಡುನೀಲಾವರ, ಬೆಣ್ಣೆಕುದ್ರು, ಹೈರಾಬೆಟ್ಟು, ಕೆ.ಜಿ ರೋಡ್, ಸಾಲ್ಮರ, ಮಾಯಾಡಿ, ಅಮ್ಮುಂಜೆ, ಆದರ್ಶನಗರ, ಕೀರ್ತಿನಗರ, ಸಾಲಿಕೇರಿ, ಬಿರ್ತಿ, ಹೊನ್ನಾಳ, ಕುಕ್ಕುಡೆ, ಉಗ್ಗೇಲ್‌ಬೆಟ್ಟು, ಜಾತಾಬೆಟ್ಟು, ಹಾವಂಜೆ, ಹೇರೂರು, ಕುಂಜಾಲು, ಆರೂರು, ಚೇರ್ಕಾಡಿ, ಹಲುವಳ್ಳಿ, ಹೆಗ್ಗುಂಜೆ, ಕಾಡೂರು, ಪೆಜಮಂಗೂರು, ಕೊಕ್ಕರ್ಣೆ, ಕೆಂಜೂರು ಪ್ರದೇಶಗಳಲ್ಲಿ ವಿದ್ಯುತ್ ಇರುವುದಿಲ್ಲ.
31ರಂದು ಬೆಳಗ್ಗೆ 9ಗಂಟೆಯಿಂದ ಸಂಜೆ 5ರ ವರೆಗೆ ಮಣಿಪುರ, ಮೂಡುಬೆಳ್ಳೆ, ಮರ್ಣೆ, ಕಟ್ಟಿಂಗೇರಿ, ಕೆಮ್ತೂರು, ಪುತ್ತಿಗೆ, ಪಕ್ಕಾಲು, ಪೆರ್ಡೂರು ಪೇಟೆ, ಮುತ್ತೂರ್ಮೆ, ಕುಕ್ಕೆಹಳ್ಳಿ, ಪಾಡಿಗಾರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗುತ್ತದೆ.
31ರಂದು ಬೆಳಗ್ಗೆ 9ಗಂಟೆಯಿಂದ ಸಂಜೆ 5.30ರ ವರೆಗೆ ಭಟ್ಟಂಪಳ್ಳಿ, ಪಾಂಡುಕಲ್ಲು, ಎಳ್ಳಾರೆ, ಶಂಕರಲಿಂಗೇಶ್ವರ ದೇವಸ್ಥಾನದ ಬಳಿ, ಮುಳ್ಳುಗುಡ್ಡೆ, ಶಿವಪುರ, ಮುದ್ರಾಡಿ, ಕಡ್ತಲ, ದೊಂಡರಂಗಡಿ, ಗುಡ್ಡೆಯಂಗಡಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗುತ್ತದೆ.