

ಬೆಂಗಳೂರು: ಭಾರತದ ಅತಿದೊಡ್ಡ ಪುಸ್ತಕ ಮಳಿಗೆ ಎಂದು ಹೆಸರಾಗಿರುವ ಸಪ್ನಾ ಬುಕ್ ಹೌಸ್ ರಾಜ್ಯೋತ್ಸವ ಪ್ರಯುಕ್ತ ಕನ್ನಡ ಪುಸ್ತಕ ಓದುಗರಿಗೆ ಈ ನವೆಂಬರ್ನಲ್ಲಿ ವಿಶೇಷವಾದ ರಿಯಾಯಿತಿಯನ್ನು ನೀಡುತ್ತಿದೆ.
ಮಳಿಗೆಯಲ್ಲಿರುವ ಎಲ್ಲ ಕನ್ನಡ ಪುಸ್ತಕಗಳ ಮೇಲೆ ಶೇ.10ರಿಂದ 50 ರಿಯಾಯಿತಿ ನೀಡಲಾಗುತ್ತಿದ್ದು, ಓದುಗರಿಗೆ ಈ ವಿಶೇಷ ಸೌಲಭ್ಯ ಈ ತಿಂಗಳ ಅಂತ್ಯದವರೆಗೂ ಲಭ್ಯವಿರಲಿದೆ. ರಾಜ್ಯೋತ್ಸವ ಪ್ರಯುಕ್ತ ನೀಡಲಾಗುತ್ತಿರುವ ಈ ವಿಶೇಷ ರಿಯಾಯಿತಿಯನ್ನು ಓದುಗರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಂಸ್ಥೆ ಮನವಿ ಮಾಡಿಕೊಂಡಿದೆ. ವಿಶೇಷ ರಿಯಾಯಿತಿ ಮಾತ್ರವಲ್ಲದ ರಾಜ್ಯೋತ್ಸವ ಪ್ರಯುಕ್ತ ಸಪ್ನಾ ಬುಕ್ ಹೌಸ್ ಇದೇ ನ. 27ರಂದು 66 ಕನ್ನಡ ಪುಸ್ತಕಗಳನ್ನು ಕೂಡ ಬಿಡುಗಡೆ ಮಾಡಲಿದೆ.
ಸಪ್ನಾ ಬುಕ್ ಹೌಸ್ ಜ್ಞಾನಪೀಠ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು ಸೇರಿದಂತೆ 500 ಬರಹಗಾರರ 5 ಸಾವಿರಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದೆ. ಜತೆಗೆ, ಬಹಳಷ್ಟು ಬೇರೆ ಭಾಷೆಯ ಪುಸ್ತಕಗಳನ್ನು ಕನ್ನಡ ಭಾಷೆಗೆ ಅನುವಾದಿಸಿ ಪ್ರಕಟಿಸಿದೆ. ಮಳಿಗೆಯಲ್ಲಿ ಮಕ್ಕಳಿಂದ ಹಿಡಿದು ಹಿರಿಯ ನಾಗರಿಕರವರೆಗೆ ಯಾವುದೇ ರೀತಿಯ ಪುಸ್ತಕ ಕೂಡ ಸಿಗುತ್ತದೆ ಎಂದು ಸಂಸ್ಥೆ ಮಾಹಿತಿ ನೀಡಿದೆ.
ಸಪ್ನಾ ಬುಕ್ ಹೌಸ್ ಭಾರತದ ಅತಿದೊಡ್ಡ ಪುಸ್ತಕ ಮಳಿಗೆ ಎಂದು ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ಸತತ ಏಳು ವರ್ಷಗಳಿಂದ ಗುರುತಿಸಿದೆ. ಕರ್ನಾಟಕ ಸರ್ಕಾರ ನೀಡುವ ರಾಜ್ಯೋತ್ಸವ ಪ್ರಶಸ್ತಿಗೂ ಸಪ್ನ ಬುಕ್ ಹೌಸ್ ಪಾತ್ರವಾಗಿದೆ.