

ಬದಿಯಡ್ಕ: ರಕ್ಷಾ ಬಂಧನವು ಸಹೋದರತ್ವ ಬೆಸೆಯುವ ಜತೆಗೆ ಸಮಾನತೆ, ಸೌಹಾರ್ದ ಮತ್ತು ಒಗ್ಗಟ್ಟನ್ನು ಪ್ರತಿನಿಧಿಸುತ್ತದೆ. ಈ ಹಬ್ಬದಿಂದ ಮನಸುಗಳಲ್ಲಿ ಬಾಂಧವ್ಯ ಬೆಸೆಯುತ್ತದೆ ಎಂದು ಹಾಸನದ ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಸ್ಥಾಪಕಾಧ್ಯಕ್ಷೆ ಕಲಾವತಿ ಮಧುಸೂದನ ಹೇಳಿದರು.
ಬದಿಯಡ್ಕ ಶ್ರೀಭಾರತೀ ವಿದ್ಯಾಪೀಠದಲ್ಲಿ ಸೋಮವಾರ ರಕ್ಷಾ ಬಂಧನ ಹಾಗೂ ಸಂಸ್ಕೃತ ದಿನಾಚರಣೆಯಲ್ಲಿ ಉಪನ್ಯಾಸ ನೀಡಿದರು.
ಸ್ಪಂದನ ಸರಿ ವೇದಿಕೆಯ ಜಿಲ್ಲಾಧ್ಯಕ್ಷ ವಿರಾಜ್ ಅಡೂರು ಪ್ರಾಸ್ತಾವಿಸಿದರು. ಸಂಸ್ಕೃತ ದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳಿಂದ ಸಂಸ್ಕೃತ ಭಾಷಣ, ಗೀತೆ ಹಾಗೂ ಪ್ರತಿಜ್ಞೆ ನಡೆಯಿತು. ಶಾಲೆ ವ್ಯವಸ್ಥಾಪಕ ಜಯಪ್ರಕಾಶ ಪಜಿಲ, ಸಾಹಿತಿ ನರಸಿಂಹ ಭಟ್ ಏತಡ್ಕ, ಶಿಕ್ಷಕ ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ, ಸಂಧ್ಯಾರಾಣಿ, ಶ್ರೀಲಕ್ಷ್ಮೀ ಉಪಸ್ಥಿತರಿದ್ದರು. ಶಿಫಾಲಿ ರೈ ಸ್ವಾಗತಿಸಿದರು. ಅವನೀಶ್ ಶರ್ಮ ವಂದಿಸಿದರು. ನಿಹಾರಿಕಾ ನಿರೂಪಿಸಿದರು. ಮಕ್ಕಳು ಪರಸ್ಪರ ರಕ್ಷೆ ಕಟ್ಟಿ ಸಂಭ್ರಮಿಸಿದರು.