

ಬೆಳ್ತಂಗಡಿ: ಆಧುನಿಕ ಕಾಲದಲ್ಲಿ ಮೊಬೈಲ್, ಕಂಪ್ಯೂಟರ್ ನವೀಕರಣಗೊಂಡಂತೆ ನಾವು ಕೂಡ ಜೀವನದಲ್ಲಿ ನವೀನತೆ ಹೊಂದುವುದು ಅನಿವಾರ್ಯ ಎಂದು ರತ್ನಮಾನಸ ವಸತಿ ನಿಲಯದಲ್ಲಿ ನಡೆದ ರಕ್ಷಾ ಬಂಧನದಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಪಾಲಿಟೆಕ್ನಿಕ್ ಕಾಲೇಜು ಉಪನ್ಯಾಸಕ ಸಂಪತ್ ಕುಮಾರ್ ಹೇಳಿದರು.
ರಕ್ಷಾ ಬಂಧನದ ಮೂಲಕ ನಮ್ಮನ್ನು ನಾವು ರಕ್ಷಣೆ ಮಾಡಿಕೊಳ್ಳುವುದರೊಂದಿಗೆ ನಮ್ಮ ದೇಶದ ರಕ್ಷಣೆ ಕರ್ತವ್ಯವಾಗಿದೆ. ಪ್ರೀತಿ, ವಾತ್ಸಲ್ಯ, ಸಹೋದರತೆ, ಭ್ರಾತೃತ್ವ, ಸಹಬಾಳ್ವೆ ಧಾರೆಗಳನ್ನು ಸೇರಿಸಿಕೊಂಡು ರಕ್ಷಿಸಬೇಕಾಗುತ್ತದೆ ಎಂದರು.
ರತ್ನಮಾನಸ ನಿಲಯದ ಪಾಲಕ ಯತೀಶ್ ಕೆ.ಬಳಂಜ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕ ರವಿಚಂದ್ರ ಸ್ವಾಗತಿಸಿದರು. ಉದಯರಾಜ್ ವಂದಿಸಿದರು. ನಿಶೀತ್ ನಿರೂಪಿಸಿದರು. ಡಿ.ಎಡ್ ಕಾಲೇಜು ಉಪನ್ಯಾಸಕ ಮಂಜು ಯು.ಆರ್., ಸಿಬ್ಬಂದಿ ದೀಪಕ್ ಕೆ, ಮಾಣಿಕ್ಯರಾಜ್, ಉದಯಕುಮಾರ್, ಮಹೇಂದ್ರ ಉಪಸ್ಥಿತರಿದ್ದರು.