ಸ್ವಚ್ಛತೆ ಜಾಗೃತಿ ಫಲಕ ಅಳವಡಿಕೆ

falaka
ಬಿ.ಸಿ.ರೋಡಿನ ಮುಖ್ಯವೃತ್ತದ ಬಳಿಯಿಂದ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಸ್ವಚ್ಛತೆ ಕುರಿತಾದ ಫಲಕಗಳನ್ನು ಅಳವಡಿಸಲಾಗಿದೆ.
Published on

ಬಂಟ್ವಾಳ: ಬಿ.ಸಿ.ರೋಡು-ಅಡ್ಡಹೊಳೆ ರಸ್ತೆ ಚತುಷ್ಪಥ ಹೆದ್ದಾರಿಯಾಗಿ ಅಭಿವೃದ್ಧಿಯಾಗುತ್ತಿದ್ದು, ಬಿ.ಸಿ.ರೋಡಿನ ಮುಖ್ಯ ವೃತ್ತದ ಬಳಿಯಿಂದ ನೇತ್ರಾವತಿ ಹೊಸ ಸೇತುವೆಯವರೆಗೆ ಸ್ವಚ್ಛತೆ ಜಾಗೃತಿ ಫಲಕಗಳನ್ನು ಬಂಟ್ವಾಳ ಪುರಸಭೆ ಅಳವಡಿಸಿದೆ. ಇದು ಸಾರ್ವಜನಿಕರ ಗಮನ ಸೆಳೆಯುತ್ತಿದೆ.

ಇತ್ತೀಚಿನ ದಿನಗಳಲ್ಲಿ ರಾಷ್ಟ್ರೀಯ ಹೆದ್ದಾರಿಗಳ ಬದಿಯಲ್ಲಿ ಕಸ ಎಸೆಯುವ ಪ್ರವೃತ್ತಿ ಹೆಚ್ಚಾಗುತ್ತಿದ್ದು, ಇದನ್ನು ತಡೆಯುವ ಉದ್ದೇಶದಿಂದ ಸ್ವಚ್ಛತೆ ಕುರಿತು ವಿವಿಧ ಜಾಗೃತಿ ಬರಹಗಳಿರುವ 25 ಫಲಕಗಳನ್ನು ಮೊದಲ ಹಂತದಲ್ಲಿ ಅಳವಡಿಸಲಾಗಿದೆ. ನೇತ್ರಾವತಿ ನದಿ ಹರಿಯುತ್ತಿದ್ದ ನದಿಗೂ ಕಸ ಎಸೆಯದೆ ಸ್ವಚ್ಛವಾಗಿಟ್ಟುಕೊಳ್ಳುವ ಬರಹದ ಫಲಕಗಳನ್ನು ಅಳವಡಿಸಲಾಗಿದೆ. ಫಲಕದಲ್ಲಿ ಬಂಟ್ವಾಳ ಪುರಸಭೆ ದೂರವಾಣಿ ಸಂಖ್ಯೆ ಬರೆಯಲಾಗಿದ್ದು ಕಸ ಎಸೆಯುವುದು ಕಂಡು ಬಂದಲ್ಲಿ ದೂರವಾಣಿಗೆ ಕರೆ ಮಾಡಿ ತಿಳಿಸಬಹುದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net