

ಹೆಬ್ರಿ: ಮನುಷ್ಯನು ಜೀವನದಲ್ಲಿ ಯಶಸ್ಸು ಗಳಿಸಲು ಸಂಸ್ಕಾರ ಪಡೆಯಬೇಕು. ಬಾಲ್ಯದಲ್ಲೇ ಸಂಸ್ಕಾರವನ್ನು ಹೆತ್ತವರು ನೀಡಬೇಕು. ವಿದ್ಯಾರ್ಥಿ ಜೀವನದಲ್ಲಿ ವಿದ್ಯಾಶಕ್ತಿ, ಮೇಧಾ ಶಕ್ತಿ, ಪ್ರಜ್ಞಾ ಶಕ್ತಿ ಪಡೆಯಬೇಕಾದರೆ ಅಕ್ಷರಾಭ್ಯಾಸ, ಸಂಸ್ಕಾರ ಅತ್ಯಗತ್ಯ. ಸರಸ್ವತಿ ದೇವಿಯನ್ನು ಭಕ್ತಿಯಿಂದ ಸ್ತುತಿಸಿದರೆ ವಿದ್ಯಾರ್ಥಿಯ ಭವಿಷ್ಯ ಉಜ್ವಲವಾಗುತ್ತದೆ ಎಂದು ಸಂಸ್ಕೃತ ಶಿಕ್ಷಕ ವಿದ್ವಾನ್ ವೇದವ್ಯಾಸ ತಂತ್ರಿ ಮಡಾಮಕ್ಕಿ ಹೇಳಿದರು.
ಹೆಬ್ರಿ ಪಿ.ಆರ್.ಎನ್ ಅಮೃತಭಾರತಿ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಶುಕ್ರವಾರ ನಡೆದ ಅಕ್ಷರಾಭ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಮೃತ ಭಾರತಿ ಟ್ರಸ್ಟ್ ಸ್ಥಾಪಕ ಅಧ್ಯಕ್ಷ ಸತೀಶ್ ಪೈ, ವಿದ್ಯಾಲಯದ ಅಧ್ಯಕ್ಷ ಶೈಲೇಶ್ ಕಿಣಿ, ಸಮೂಹ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಾದ ಅರುಣ್ ಕುವಾರ್, ಅನಿತಾ, ಅಪರ್ಣಾ ಆಚಾರ್, ಶಕುಂತಲಾ, ಸಾರ್ವಜನಿಕ ಸಂಪರ್ಕಾಧಿಕಾರಿ ವಿಜಯ ಕುವಾರ್ ಶೆಟ್ಟಿ, ಪೋಷಕರು, ವಿದ್ಯಾರ್ಥಿಗಳು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.