ಕೋಟ ಸುದರ್ಶನ ಉರಾಳರಿಗೆ ಗೌರವ ಸನ್ಮಾನ

urala
ಬೆಂಗಳೂರಿನಲ್ಲಿ ಕೋಟ ಸುದರ್ಶನ ಉರಾಳರನ್ನು ಗೌರವಿಸಲಾಯಿತು. ನಿವೃತ್ತ ವೈದ್ಯಾಧಿಕಾರಿ ಡಾ.ಸೂರ್ಯನಾರಾಯಣ ಆಚಾರ್ಯ, ಜ್ಯೋತಿರ್ಗಮಯ ಸ್ಥಾಪಕರಾದ ಕಸ್ತೂರಿ ರಂಗಾಚಾರ್ಯ, ರಾಜ್ಯಪ್ರಶಸ್ತಿ ವಿಜೇತ ನಿವೃತ್ತ ಶಾಲಾ ಮುಖ್ಯಶಿಕ್ಷಕ ಎಚ್. ಹರಿಕೃಷ್ಣ ಹಂದೆ ಮತ್ತಿತರರು ಇದ್ದರು.
Published on

ಕೋಟ: ಬೆಂಗಳೂರಿನಲ್ಲಿ ರಜನಿ ಮತ್ತು ಶಶಿಕಾಂತ ಆಚಾರ್ಯ ಅರ್ಪಿಸುವ ಯಕ್ಷ ಫೌಂಡೇಷನ್ ಬೆಂಗಳೂರು, ಯಕ್ಷಗಾನ ನವ್ಯ ನಿನಾಧ 3ನೇ ಪ್ರಸ್ತುತಿ ಕಾರ್ಯಕ್ರಮದಲ್ಲಿ ಇತ್ತೀಚೆಗೆ ಕೋಟ ಸುದರ್ಶನ ಉರಾಳರನ್ನು ಗೌರವಿಸಲಾಯಿತು.

ನಿವೃತ್ತ ವೈದ್ಯಾಧಿಕಾರಿ ಡಾ.ಸೂರ್ಯನಾರಾಯಣ ಆಚಾರ್ಯ, ಜ್ಯೋತಿರ್ಗಮಯ ಸ್ಥಾಪಕರಾದ ಕಸ್ತೂರಿ ರಂಗಾಚಾರ್ಯ, ರಾಜ್ಯಪ್ರಶಸ್ತಿ ವಿಜೇತ ನಿವೃತ್ತ ಶಾಲಾ ಮುಖ್ಯಶಿಕ್ಷಕ ಎಚ್.ಹರಿಕೃಷ್ಣ ಹಂದೆ, ಯಕ್ಷದೇಗುಲದ ನಿರ್ದೇಶಕ ಕೆ.ಮೋಹನ್, ಬರಹಗಾರ ಮಹಾಬಲಮೂರ್ತಿ ಕೊಡ್ಲುಕೆರೆ, ಅಕ್ಸಿಸ್ ಕಮ್ಯುನಿಕೇಷನ್ ನಿರ್ದೇಶಕ ಹಾಗೂ ಯಕ್ಷಗಾನ ಕಲಾವಿದ ಸುಧೀಂದ್ರ ಹೊಳ್ಳ, ಬರಹಗಾರ ಮತ್ತು ವಿಮರ್ಶಕ ರವಿ ಮಡೋಡಿ, ವೇದ ವಿದ್ವಾಂಸ ಡಾ.ಕೆ.ಪಿ.ನಿರಂಜನ್ ಭಟ್, ಪರಿಸರ ಸಂರಕ್ಷಣಾಧಿಕಾರಿ ಹಾಗೂ ಬಹುರಾಷ್ಟ್ರೀಯ ಬೀಜ ಉದ್ಯಮಿ ಸಂಸ್ಥೆ ಅಧಿಕಾರಿ ಸುಭದ್ರ ಗುಪ್ತ, ಕನ್ನಡ ಕರಾವಳಿ ಕೂಟದ ಸತೀಶ್ ಅಗ್ದಲ ಹಾಗೂ ಯಕ್ಷ ಫೌಂಡೇಷನ್ ನಿರ್ದೇಶಕ ಹಾಲಾಡಿ ಶಶಿಕಾಂತ್ ಆಚಾರ್ಯ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net