ಆ್ಯಪ್‌ನಿಂದ ವೈಜ್ಞಾನಿಕ, ನಿಖರ ಫಲಿತಾಂಶ

paddy-1
ಮೂಡಬೆಟ್ಟು ಗ್ರಾಮದಲ್ಲಿ ಭತ್ತದ ಬೆಳೆ ಕಟಾವು ಸಮೀಕ್ಷೆ ನಡೆಯಿತು. ತಹಸೀಲ್ದಾರ್ ಪ್ರತಿಭಾ ಆರ್., ಗ್ರಾಮ ಆಡಳಿತಾಧಿಕಾರಿ ಡೇನಿಯಲ್, ಗ್ರಾಮ ಸಹಾಯಕ ಸದಾನಂದ ಇದ್ದರು.
Published on

ಪಡುಬಿದ್ರಿ: ವೈಜ್ಞಾನಿಕವಾಗಿ ಮತ್ತು ನಿಖರವಾಗಿ ಬೆಳೆ ಕಟಾವು ನಡೆಯಬೇಕು. ಪ್ರಸ್ತುತ ಆ್ಯಪ್ ಮೂಲಕ ನಡೆಯುತ್ತಿದ್ದು ಶೇ.100 ನಿಖರ ಫಲಿತಾಂಶ ಬರುತ್ತಿದೆ ಎಂದು ಕಾಪು ತಹಸೀಲ್ದಾರ್ ಹೇಳಿದರು.

ಕಾಪು ತಾಲೂಕಿನ ಮೂಡಬೆಟ್ಟು ಗ್ರಾಮದ ಹೊಲಕ್ಕೆ ಬುಧವಾರ ಭೇಟಿ ನೀಡಿ ಭತ್ತದ ಬೆಳೆ ಕಟಾವು ಸಮೀಕ್ಷೆಯಲ್ಲಿ ಮಾತನಾಡಿದರು.

ಬೆಳೆ ಸಮೀಕ್ಷೆ ದತ್ತಾಂಶ ಬೆಳೆ ವಿಮೆ ಮೊತ್ತ ಇತ್ಯರ್ಥಪಡಿಸಲು, ದೇಶದ ಕೃಷಿ ಇಳುವರಿ ಅಂದಾಜಿಸಲು, ಕೃಷಿ ಪ್ರಶಸ್ತಿ ನೀಡಲು, ಕೃಷಿ ಆದಾಯ ನಿರ್ಧರಿಸಲು ಬಳಕೆಯಾಗುವುದು. ಕಾಪು ತಾಲೂಕಿನಲ್ಲಿ ಅತ್ಯಂತ ನಿಖರವಾಗಿ ಬೆಳೆ ಕಟಾವು ಸಮೀಕ್ಷೆ ನಡೆಯುತ್ತಿದೆ ಎಂದರು.

ಬೆಳೆ ಕಟಾವು ಪ್ರಯೋಗಗಳನ್ನು ಕೃಷಿ ಇಳುವರಿ ಅಂದಾಜಿಸಲು ಮಾತ್ರವಲ್ಲದೆ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಕೃಷಿಯ ಆದಾಯ, ಉತ್ಪಾದನೆ, ಮತ್ತು ಮೇವಿನ ಪ್ರಮಾಣ ಮತ್ತು ಕೃಷಿ ಪ್ರಶಸ್ತಿ ನೀಡಲು ಪ್ರಮುಖ ಪಾತ್ರ ವಹಿಸುತ್ತದೆ. ಬೆಳೆ ವಿಮೆ ನಷ್ಟ ಅಂದಾಜಿಸಿ ವಿಮೆ ಇತ್ಯರ್ಥಪಡಿಸಲು ಇದರ ದತ್ತಾಂಶ ಉಪಯೋಗಿಸಲಾಗುತ್ತದೆ ಎಂದರು. ಗ್ರಾಮ ಆಡಳಿತಾಧಿಕಾರಿ ಡೇನಿಯಲ್, ಗ್ರಾಮ ಸಹಾಯಕ ಸದಾನಂದ ಬೆಳೆ ಕಟಾವು ಸಮೀಕ್ಷೆಗೆ ಸಹಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net