ವಿದ್ಯಾರ್ಥಿಗಳಲ್ಲಿ ನಾಯಕತ್ವ ರೂಪಿಸುವ ವೇದಿಕೆ

samsath
ಉಡುಪಿ ಜಿಲ್ಲಾ ಮಟ್ಟದ ಪದವಿ ಪೂರ್ವ ವಿಧ್ಯಾರ್ಥಿಗಳ ಯುವ ಸಂಸತ್ ಅಣಕು ಸ್ಪರ್ಧೆ ಸಮಾರೋಪ ಸಮಾರಂಭದಲ್ಲಿ ಹಿರಿಯಡ್ಕ ಕೆಪಿಎಸ್ ಹಳೇ ವಿದ್ಯಾರ್ಥಿ ಸಂಘದ ಖಜಾಂಚಿ ದಿವಾಕರ ಭಂಡಾರಿ ಮಾತನಾಡಿದರು.
Published on

ಹೆಬ್ರಿ: ಯುವ ಸಂಸತ್ ಅಣಕು ಸ್ಪರ್ಧೆ ವಿದ್ಯಾರ್ಥಿಗಳನ್ನು ಭವಿಷ್ಯದ ಜನ ನಾಯಕರನ್ನಾಗಿ ರೂಪಿಸುವ ವೇದಿಕೆಯಾಗಲಿ ಎಂದು ಹಿರಿಯಡ್ಕ ಕೆಪಿಎಸ್ ಹಳೇ ವಿದ್ಯಾರ್ಥಿ ಸಂಘದ ಖಜಾಂಚಿ ದಿವಾಕರ ಭಂಡಾರಿ ಹೇಳಿದರು.

ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನಾ ಇಲಾಖೆ ಹಾಗೂ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಸಹಯೋಗದಲ್ಲಿ ಹಿರಿಯಡಕ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಉಡುಪಿ ಜಿಲ್ಲಾಮಟ್ಟದ ಪದವಿ ಪೂರ್ವ ವಿಧ್ಯಾರ್ಥಿಗಳ ಯುವ ಸಂಸತ್ ಅಣಕು ಸ್ಪರ್ಧೆ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ವಿಪಕ್ಷ ನಾಯಕಿಯಾಗಿ ಕಾರ್ಯನಿರ್ವಹಿಸಿದ ಕುಂದಾಪುರ ಸ.ಪ.ಪೂ ಕಾಲೇಜಿನ ವರಲಕ್ಷ್ಮೀ ಪ್ರಥಮ ಸ್ಥಾನ, ಸಭಾಪತಿಯಾಗಿ ಕಲಾಪ ನಡೆಸಿದ ಸಾಣೂರು ಸ.ಪ.ಪೂ ಕಾಲೇಜಿನ ನವ್ಯಾ ದ್ವಿತೀಯ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಗೊಂಡರು. ಅಮೃತ ಭಾರತಿ ಪ.ಪೂ ಕಾಲೇಜಿನ ಉಪನ್ಯಾಸಕ ವಿನೇಶ್ ಹಾಗೂ ಹಿರಿಯಡ್ಕ ಕರ್ನಾಟಕ ಪಬ್ಲಿಕ್ ಸ್ಕೂಲ್ ಅಧ್ಯಾಪಕ ರವೀಂದ್ರ ಪ್ರಭು ನಿರ್ಣಾಯಕರಾಗಿ ಕಾರ್ಯನಿರ್ವಹಿಸಿದರು.

ಪ್ರಾಂಶುಪಾಲ ಮಂಜುನಾಥ ಭಟ್ ಸ್ವಾಗತಿಸಿದರು. ಉಪ ಪ್ರಾಂಶುಪಾಲ ಪ್ರಕಾಶ್ ಪ್ರಭು, ಉದ್ಯಮಿ ಸುಂದರ ಕಾಂಚನ್ ಓಂತಿಬೆಟ್ಟು, ಎಸ್‌ಡಿಎಂಸಿ ಸದಸ್ಯ ಮುರಳಿಧರ ಹಾಲಂಬಿ, ಉಪನ್ಯಾಸಕರಾದ ವಾಸು ಮೊಗೇರ್, ಪರಮೇಶ್ವರ, ರಾಘವೇಂದ್ರ ಕಿಣಿ, ಸಂಧ್ಯಾ ನಾಯಕ್, ಜಗದೀಶ್ ನಾಯಕ್ ಉಪಸ್ಥಿತರಿದ್ದರು. ಉಪನ್ಯಾಸಕ ದೇವದಾಸ ಪ್ರಭು ವಂದಿಸಿದರು. ಉಪನ್ಯಾಸಕ ಪ್ರಕಾಶ್ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net