ಅಧ್ಯಕ್ಷರಾಗಿ ಸಂಜೀವ ಪೂಜಾರಿ ವಂಡ್ಸೆ ಆಯ್ಕೆ

sanjeeva
sanjeeva
Published on

ಕುಂದಾಪುರ: ವಂಡ್ಸೆ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನ ಹಳೆ ವಿದ್ಯಾರ್ಥಿ ಸಂಘದ ರಚನೆ ಭಾನುವಾರ ಶಾಲೆಯ ಸುಬ್ರಮಣ್ಯ ಮಂಜರ ಸಭಾಭವನದಲ್ಲಿ ಜರುಗಿತು.

ಹಳೇ ವಿದ್ಯಾರ್ಥಿ ಸಂಘದ ನೂತನ ಅಧ್ಯಕ್ಷರಾಗಿ ಸಂಜೀವ ಪೂಜಾರಿ ವಂಡ್ಸೆ ಆಯ್ಕೆಯಾದರು. ಗೌರವ ಅಧ್ಯಕ್ಷರಾಗಿ ವಂಡಬಳ್ಳಿ ಜಯರಾಮ್ ಶೆಟ್ಟಿ, ಉಪಾಧ್ಯಕ್ಷರಾಗಿ ಮಹಮ್ಮದ್ ರಫೀಕ್ ಸಾಹೇಬ್, ಕಾರ್ಯದರ್ಶಿಯಾಗಿ ಸೋಮರಾಯ ಜನ್ನು (ಪ್ರಭಾರ ಮುಖ್ಯಶಿಕ್ಷಕರು), ಜತೆ ಕಾರ್ಯದರ್ಶಿ ವಸಂತರಾಜ್ ಶೆಟ್ಟಿ, ಖಜಾಂಚಿ ನಾಗರಾಜ, ಸಂಘಟನಾ ಕಾರ್ಯದರ್ಶಿ ಸಂತೋಷ ಮೆಂಡನ್, ಸಾಂಸ್ಕೃತಿಕ ಕಾರ್ಯದರ್ಶಿ ಗುಂಡು ಪೂಜಾರಿ, ಕ್ರೀಡಾ ಕಾರ್ಯದರ್ಶಿ ಚಂದ್ರ ಬಿಲ್ಲವ, ಜತೆ ಕ್ರೀಡಾ ಕಾರ್ಯದರ್ಶಿ ಗುರುರಾಜ್ ಆಯ್ಕೆಯಾದರು. ಕಾರ್ಯಕಾರಿಣಿ ಸಮಿತಿ ಸದಸ್ಯರಾಗಿ ಉದಯಕುಮಾರ್ ಶೆಟ್ಟಿ, ದೇವು ಮೆಂಡನ್, ಶಂಕರ ಆಚಾರ್ಯ, ಪ್ರಸಾದ್ ಆಚಾರ್ಯ, ರಾಜೀವ ನಾಯ್ಕ, ಪ್ರತಾಪ ಕುಮಾರ್ ಶೆಟ್ಟಿ, ಮೊಹಮ್ಮದ್ ಫಾರೂಕ್, ಸುಮತಿ, ಜಯರಾಮ ಶೆಟ್ಟಿ ಬೆಳ್ವಾಣ, ಅಭಿಷೇಕ್ ಮೆಂಡನ್ ಆಯ್ಕೆಯಾದರು.

ಎಸ್.ಡಿ.ಎಂ.ಸಿ ಅಧ್ಯಕ್ಷೆ ಡಾ.ಪೂರ್ಣಿಮಾ ಹಾಗೂ ಹಳೇ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ದೈಹಿಕ ಶಿಕ್ಷಣ ಶಿಕ್ಷಕ ರಾಜು ಎನ್.ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net