

ಬಂಟ್ವಾಳ: ಸಮಾಜ ಸೇವಾ ಸಹಕಾರಿ ಸಂಘ ಬಂಟ್ವಾಳ ವಾರ್ಷಿಕ ಮಹಾಸಭೆ ಬಿ.ಸಿ.ರೋಡಿನಲ್ಲಿ ನಡೆಯಿತು.
ಅಧ್ಯಕ್ಷತೆ ವಹಿಸಿದ್ದ ಸಂಘ ಅಧ್ಯಕ್ಷ ಸುರೇಶ ಕುಲಾಲ್ 2023-24ನೇ ಸಾಲಿನಲ್ಲಿ ಸದಸ್ಯರಿಗೆ ಶೇ.17ಡಿವಿಡೆಂಡ್ ಪ್ರಕಟಿಸಿದರು. ಸಂಘದಲ್ಲಿ 8660 ಸದಸ್ಯರಿದ್ದು, ಪಾಲು ಬಂಡವಾಳ 7.87 ಕೋ.ರೂ., 214.26 ಕೋ.ರೂ. ಠೇವಣಾತಿಗಳು, 15.68 ಕೋ.ರೂ.ನಿಧಿಗಳು, 59.82 ಕೋ.ರೂ.ವಿನಿಯೋಗಗಳು, 192.78 ಕೋ.ರೂ.ಸಾಲ ಹೊರಬಾಕಿ ಇದ್ದು, 95.02 ಶೇ.ವಸೂಲಾತಿ ಮಾಡಲಾಗಿದೆ ಎಂದರು.
2023-24ನೇ ಸಾಲಿನಲ್ಲಿ 982.54 ಕೋ.ರೂ.ವ್ಯವಹಾರ ನಡೆಸಿ, 5.71ಕೋಟಿ ಲಾಭಗಳಿಸಿರುತ್ತದೆ. ಸಂಘದ ದುಡಿಯುವ ಬಂಡವಾಳ 239.90 ಕೋ.ರೂ.ಆಗಿದ್ದು, ಅಡಿಟ್ ವರ್ಗೀಕರಣದಲ್ಲಿ ಎ ತರಗತಿ ಪಡೆದಿದೆ.
ಸಂಘದ ಉಪಾಧ್ಯಕ್ಷ ಪದ್ಮನಾಭ ವಿ., ಆಡಳಿತ ಮಂಡಳಿ ಸದಸ್ಯರಾದ ವಿಶ್ವನಾಥ ಕೆ.ಬಿ., ಅರುಣ್ ಕುಮಾರ್, ಜನಾರ್ದನ ಕುಲಾಲ್ ಬೊಂಡಾಲ, ಸತೀಶ, ಸುರೇಶ್ ಎನ್., ರಮೇಶ್ ಸಾಲ್ಯಾನ್, ನಾಗೇಶ್ ಬಿ., ವಿ.ವಿಜಯ್ ಕುಮಾರ್, ಎಂ.ಕೆ.ಗಣೇಶ್ ಸಮಗಾರ, ಜಗನ್ನಿವಾಸ ಗೌಡ, ಜಯಂತಿ, ವಿದ್ಯಾ, ವಿಜಯಲಕ್ಷ್ಮೀ ಉಪಸ್ಥಿತರಿದ್ದರು.
ಸಂಘ ನಿರ್ದೇಶಕ ಬಿ.ರಮೇಶ್ ಸಾಲ್ಯಾನ್ ಸ್ವಾಗತಿಸಿ. ಸಹಾಯಕ ಪ್ರಧಾನ ವ್ಯವಸ್ಥಾಪಕ ಮೋಹನ್ ಎಂ.ಕೆ. ವಾರ್ಷಿಕ ವರದಿ ವಾಚಿಸಿದರು. ಪ್ರಧಾನ ವ್ಯವಸ್ಥಾಪಕ ಭೋಜ ಮೂಲ್ಯ ಲೆಕ್ಕ ಪತ್ರ ಮಂಡಿಸಿದರು. ವ್ಯವಸ್ಥಾಪಕ ವಿನೋದ್ ಕುಮಾರ್ ಸಹಕರಿಸಿದರು.