

ಮಂಜೇಶ್ವರ: ಮಂಜೇಶ್ವರ ಉಪಜಿಲ್ಲಾ ಶಾಸ್ತ್ರೋತ್ಸವ ಸಂಘಟನಾ ಸಮಿತಿ ರಚನೆ ಸಭೆ ಸೋಮವಾರ ಕಳಿಯೂರು ಸಂತ ಜೋಸೆಫರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿತು. ಮೀಂಜ ಗ್ರಾಪಂ ಅಧ್ಯಕ್ಷೆ ಸುಂದರಿ ಆರ್.ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮಂಜೇಶ್ವರ ಬ್ಲಾಕ್ ಪಂಚಾಯಿತಿ ಅಧ್ಯಕ್ಷೆ ಶಮಿನ ಉದ್ಘಾಟಿಸಿದರು.
ಉಪಜಿಲ್ಲಾ ವಿದ್ಯಾಧಿಕಾರಿ ರಾಜಗೋಪಾಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವರ್ಕಾಡಿ ಗ್ರಾಪಂ ಅಧ್ಯಕ್ಷೆ ಭಾರತಿ, ಜಿಪಂ ಸದಸ್ಯೆ ಕಮಲಾಕ್ಷಿ, ಬ್ಲಾಕ್ ಪಂಚಾಯಿತಿ ಸದಸ್ಯ ರಾಧಾಕೃಷ್ಣ ಕೆ.ವಿ., ಬ್ಲಾಕ್ ಪಂಚಾಯಿತಿ ಸದಸ್ಯೆ ಅಶ್ವಿನಿ ಎಂ.ಎಲ್., ಮೀಂಜ ಗ್ರಾಪಂ ಉಪಾಧ್ಯಕ್ಷ ಜಯರಾಮ ಬಲ್ಲಂಗುಡೇಲ್, ವರ್ಕಾಡಿ ಗ್ರಾಪಂ ಉಪಾಧ್ಯಕ್ಷ ಅಬೂಬಕ್ಕರ್ ಸಿದ್ದಿಕ್, ವಾರ್ಡ್ ಸದಸ್ಯ ಬಾಬು, ಉದ್ಯಮಿ ಗೋಪಾಲ ಶೆಟ್ಟಿ ಅರಿಬೈಲು, ಸಂಚಾಲಕ ಬೇಸಿಲ್ ವಾಸ್ ಶುಭ ಹಾರೈಸಿದರು.
ಪಿ.ಟಿ.ಎ ಸದಸ್ಯರು, ವರ್ಕಾಡಿ ಚರ್ಚ್ ಉಪಾಧ್ಯಕ್ಷ ರಾಜೇಶ್, ಹಳೇ ವಿದ್ಯಾರ್ಥಿ ಸದಸ್ಯರು, ನಿವೃತ ಮುಖ್ಯ ಶಿಕ್ಷಕರು, ಶಿಕ್ಷಕರು, ವಿದ್ಯಾಭಿಮಾನಿಗಳು ಉಪಸ್ಥಿತರಿದ್ದರು. ಎಚ್.ಎಂ.ಫೋರಂ ಕಾರ್ಯದರ್ಶಿ ಶಾಮ್ ಭಟ್ ನಿರ್ದೇಶನಗಳನ್ನು ದಾಖಲಿಸಿದರು. ಸಮಿತಿ ಕನ್ವೀನರ್ ರೋಮನ್ ಡಿಸೋಜ ಸಂಘಟನಾ ಸಮಿತಿ ವರದಿ ಮಂಡಿಸಿದರು. ಆರ್ಥಿಕ ಸಮಿತಿ ಕನ್ವೀನರ್ ಸಿಪ್ರಿಯನ್ ಡಿಸೋಜ ಬಜೆಟ್ ಮಂಡಿಸಿದರು. ಮುಖ್ಯಶಿಕ್ಷಕಿ ಪುಷ್ಪ್ಪಾವತಿ ಸ್ವಾಗತಿಸಿದರು. ವೀಣಾ ಡಿಸೋಜ ವಂದಿಸಿದರು. ಶಿಕ್ಷಕ ಮಹಮ್ಮದ್ ಬಶೀರ್ ನಿರೂಪಿಸಿದರು.