

ಕೋಟ: ಸಾಲಿಗ್ರಾಮ ವಿಪ್ರ ಮಹಿಳಾ ವಲಯದ 5ನೇ ವಾರ್ಷಿಕೋತ್ಸವ ಭಾನುವಾರ ಶ್ರೀ ಗುರುನರಸಿಂಹ ದೇವಸ್ಥಾನ ಜ್ಞಾನಮಂದಿರದಲ್ಲಿ ಜರುಗಿತು.
ಸಾಲಿಗ್ರಾಮ ಶ್ರೀ ಗುರುನರಸಿಂಹ ದೇಗುಲ ಅಧ್ಯಕ್ಷ ಡಾ.ಕೆ.ಎಸ್.ಕಾರಂತ ಶುಭಾಶಂಸನೆಗೈದು ಮಾತನಾಡಿದರು.
ರಂಗಕಲಾವಿದೆ ಸುಧಾ ಮಣೂರು ಅವರನ್ನು ಗೌರವಿಸಲಾಯಿತು. ರಾಜ್ಯ ಜಾನಪದ ಪ್ರಪಂಚ ಪ್ರಶಸ್ತಿ 2024 ಪುರಸ್ಕೃತೆ ಜಾಹ್ನವಿ ಹೇರ್ಳೆ ಅವರಿಗೆ ವಿಶೇಷ ಅಭಿನಂದನೆ ಸಲ್ಲಿಸಲಾಯಿತು. ಧಾರ್ಮಿಕ ಸಂಘಟನೆಯಾದ ಶ್ರೀ ಮಹಾವಿಷ್ಣು ಭಜನಾ ಸಂಘ, ಪಾರಂಪಳ್ಳಿ ಅವರನ್ನು ಗೌರವಿಸಲಾಯಿತು. ಸಾಲಿಗ್ರಾಮ ವಿಪ್ರ ಮಹಿಳಾ ವಲಯ ಅಧ್ಯಕ್ಷೆ ವನಿತಾ ಉಪಾಧ್ಯ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಗುರುನರಸಿಂಹ ದೇವಸ್ಥಾನ ಆಡಳಿತ ಮಂಡಳಿ ಸದಸ್ಯ ಕೆ.ಅನಂತ ಪದ್ಮನಾಭ ಐತಾಳ್, ಬ್ರಹ್ಮಾವರ ತಾಲೂಕು ಮಹಿಳಾ ವಲಯ ಅಧ್ಯಕ್ಷೆ ಮಂಜುಳ ಅಡಿಗ ಉಪಸ್ಥಿತರಿದ್ದರು. ಸುಜಾತ ಬಾಯರಿ ವರದಿ ವಾಚಿಸಿದರು. ಸನ್ಮಾನಪತ್ರ ಡಾ.ಸವಿತಾ ಉಪಾಧ್ಯಾಯ, ಶುಭ ಅಡಿಗ ವಾಚಿಸಿದರು. ಸ್ಮಿತಾ ರಾಣಿ ಪ್ರಸ್ತಾವನೆ ಸಲ್ಲಿಸಿದರು. ಸುಪ್ರಿತಾ ಪುರಾಣಿಕ ನಿರೂಪಿಸಿದರು. ಶಿವ ಪ್ರಭಾ ಅಲ್ಸೆ ವಂದಿಸಿದರು.