ಮೊಮ್ಮಗಳನ್ನು ಕಳೆದುಕೊಂಡ ಮಾಜಿ ಸಿಎಂ ಬಿಎಸ್​ವೈ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ ಸದ್ಗುರು

Sadguru
Published on

ಬೆಂಗಳೂರು: ಇತ್ತೀಚೆಗೆ ಮೊಮ್ಮಗಳನ್ನು ಕಳೆದುಕೊಂಡ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಸಾಂತ್ವನ ಹೇಳಲು ತಮಿಳುನಾಡು ಈಶ ಫೌಂಡೇಶನ್​ನ ಸದ್ಗುರು ಜಗ್ಗಿ ವಾಸುದೇವ್ ಅವರು ಯಡಿಯೂರಪ್ಪ ನಿವಾಸಕ್ಕೆ ಭೇಟಿ ನೀಡಿದ್ದರು.

ಈಸ ಸಂದರ್ಭದಲ್ಲಿ ಯಡಿಯೂರಪ್ಪ ಸಹಿತ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದರು. ಇದೇ ಸಂದರ್ಭದಲ್ಲಿ ಇತ್ತೀಚೆಗೆ ಮೃತಪಟ್ಟ ಡಾ.ಸೌಂದರ್ಯ ಅವರ ಮಗುವನ್ನು ಎತ್ತಿಕೊಂಡು ಕೆಲ ಸಮಯ ಕಳೆದರು.

ಸದ್ಗುರು ಭೇಟಿ ಕುರಿತು ಕೂ ಮಾಡಿರುವ ಯಡಿಯೂರಪ್ಪ ಅವರು, 'ಇಂದು ನಮ್ಮ ಮನೆಗೆ ಆಗಮಿಸಿ ಆಶೀರ್ವದಿಸಿದ ಈಶ ಪ್ರತಿಷ್ಠಾನದ ಪೂಜ್ಯ ಸದ್ಗುರು ಜಗ್ಗಿ ವಾಸುದೇವ್‌ ಅವರಿಗೆ ಭಕ್ತಿಪೂರ್ವಕ ವಂದನೆಗಳು. ಅಕಾಲಿಕವಾಗಿ ನಮ್ಮನ್ನು ಅಗಲಿದ ಮೊಮ್ಮಗಳನ್ನು ಕಳೆದುಕೊಂಡು ದುಃಖದಲ್ಲಿರುವ ಕುಟುಂಬದ ಸದಸ್ಯರನ್ನು, ಸದ್ಗುರುಗಳು ಸಾಂತ್ವನದ ಮಾತುಗಳಿಂದ ಸಂತೈಸಿದ್ದು ಮನಸ್ಸಿಗೆ ಅತ್ಯಂತ ಸಮಾಧಾನವುಂಟುಮಾಡಿದೆ' ಎಂದು ಹೇಳಿದ್ದಾರೆ.

Koo App
ಇಂದು ನಮ್ಮ ಮನೆಗೆ ಆಗಮಿಸಿ ಆಶೀರ್ವದಿಸಿದ ಈಶ ಪ್ರತಿಷ್ಠಾನದ ಪೂಜ್ಯ ಸದ್ಗುರು ಜಗ್ಗಿ ವಾಸುದೇವ್‌ ಅವರಿಗೆ ಭಕ್ತಿಪೂರ್ವಕ ವಂದನೆಗಳು. ಅಕಾಲಿಕವಾಗಿ ನಮ್ಮನ್ನು ಅಗಲಿದ ಮೊಮ್ಮಗಳನ್ನು ಕಳೆದುಕೊಂಡು ದುಃಖದಲ್ಲಿರುವ ಕುಟುಂಬದ ಸದಸ್ಯರನ್ನು, ಸದ್ಗುರುಗಳು ಸಾಂತ್ವನದ ಮಾತುಗಳಿಂದ ಸಂತೈಸಿದ್ದು ಮನಸ್ಸಿಗೆ ಅತ್ಯಂತ ಸಮಾಧಾನವುಂಟುಮಾಡಿದೆ. @SadhguruJV
View attached media content
-BS Yediyurappa (@bsybjp)13 Feb 2022
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net