

ವಿಜಯವಾಣಿ ಸುದ್ದಿಜಾಲ: ವಿಜಯಪುರ
ಇಲ್ಲಿಯ ಸೋಡಾ ಫ್ಯಾಕ್ಟರಿ ಸ್ಥಾಪನೆ ಕುರಿತ ವಿಷಯಕ್ಕೆ ಸಂಬಂಧಿಸಿದಂತೆ ಏಳು ಸಾವಿರ ರೂಪಾಯಿಗಳ ಲಂಚದ ಬೇಡಿಕೆ ಒಡ್ಡಿದ್ದ ಫುಡ್ ಸೇಫ್ಟಿ ಆಫೀಸರ್ ಇಸಾಕಹುಸೇನ್ ಫಾರೂಕಿ ಇದೀಗ ಅರೆಸ್ಟ್ ಆಗಿದ್ದಾರೆ.
ಈ ಕಾರ್ಖಾನೆ ನಿಯಮ ಉಲ್ಲಂಘನೆ ಆರೋಪ ಎದುರಿಸುತ್ತಿದ್ದು, ಅದನ್ನು ಸರಿ ಮಾಡಲು ಲಂಚದ ಬೇಡಿಕೆ ಒಡ್ಡಿರುವ ಆರೋಪ ಇವರ ಮೇಲಿದೆ.
ಗೋವಿಂದ ಮರಾಠೆ ಎಂಬುವರಿಂದ 7 ಸಾವಿರ ಲಂಚ ಪಡೆಯುವಾಗ ಎಸಿಬಿ ದಾಳಿ ನಡೆಸಿ, ಅವರನ್ನು ಬಂಧಿಸಿದ್ದಾರೆ. ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿರುವ ಫುಡ್ ಸೇಫ್ಟಿ ಕಚೇರಿಯಲ್ಲಿ ದಾಳಿ ನಡೆಸಲಾಗಿದೆ.
ಎಸಿಬಿ ಡಿವೈಎಸ್ಪಿ ಮಂಜುನಾಥ ಗಂಗಲ್, ಇನ್ಸಪೆಕ್ಟರ್ ಹರಿಶ್ಚಂದ್ರ ನೇತೃತ್ವದಲ್ಲಿ ಈ ದಾಳಿ ನಡೆದಿದೆ. ಅಧಿಕಾರಿ ವಿರುದ್ಧ ತನಿಖೆ ನಡೆಯುತ್ತಿದೆ.