VIDEO: ಪಾದಯಾತ್ರೆ ಮೂಲಕ ದೇಶ ಪ್ರವಾಸ- ‘ಟ್ಯಾಟೂ ಸ್ವಾಮೀಜಿ’ ಮೈತುಂಬಾ ದೇವಾನುದೇವತೆಗಳು!

tatoo
Published on

ದಾವಣಗೆರೆ: ಟ್ಯಾಟೋ ಸ್ವಾಮಿ ಎಂದೇ ಖ್ಯಾತಿ ಪಡೆದ ಉಡುಪಿಯ ಶ್ರೀ ಲಕ್ಷ್ಮೀಪತಿ ಸ್ವಾಮೀಜಿಯವರು ದೇಶ ಪ್ರವೇಶ ಕೈಗೊಂಡಿದ್ದಾರೆ.

ವಿಶ್ವಶಾಂತಿ, ಸಮಾಜದ ಉನ್ನತಿ ಹಾಗೂ ಜಾತಿ ಪದ್ಧತಿ ವಿರೋಧಿಸಿ ಪಾದಯಾತ್ರೆ ಕೈಗೊಂಡಿರುವ ಸ್ವಾಮೀಜಿಯವರು ದಾವಣಗೆರೆಯ ಜಗಳೂರಿಗೆ ಬಂದಿದ್ದಾರೆ.

ಇವರ ಮೈಮೇಲೆ 35 ದೇವರ ಭಾವಚಿತ್ರದ ಟ್ಯಾಟೂ ಇದೆ. ಯಮಧರ್ಮನ ಆರಾಧನೆ, ಉಪಾಸನೆಯಲ್ಲಿ ನಿರತವಾಗಿರುವ I ಸ್ವಾಮೀಜಿ, ದಾನ ನೀಡಿದ ವಸ್ತುಗಳನ್ನು ಅಗತ್ಯವುಳ್ಳವರಿಗೆ ದಾನ ನೀಡುವುದು ವಿಶೇಷ. ಸದ್ಯ ಜಗಳೂರು ಪಟ್ಟಣದ ಬಿಜೆಪಿ ಮುಖಂಡ ಕಾನನಕಟ್ಟೆ ಪ್ರಭು ಮನೆಗೆ ಭೇಟಿ ಕೊಟ್ಟಿದ್ದಾರೆ.

ಹಿಂದು ಸನಾತನ ಧರ್ಮದ ಪಾದ ಯಾತ್ರೆ ಕೈಗೊಂಡಿರುವ ಇವರು, ಆಂಧ್ರಪ್ರದೇಶದ ವಿಶಾಖಪಟ್ಟಣದಿಂದ ತಮಿಳುನಾಡು, ಕೇರಳಾ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯ ಪ್ರವಾಸ ಮಾಡುತ್ತಿದ್ದಾರೆ. ಕಳೆದ 5 ವರ್ಷದಿಂದ ಪಾದಯಾತ್ರೆ ನಿರತರಾಗಿದ್ದಾರೆ. ಜಗಳೂರಿನಿಂದ ಆಂಧ್ರಪ್ರದೇಶಕ್ಕೆ ತೆರಳಲಿದ್ದಾರೆ.

ಇಲ್ಲಿದೆ ನೋಡಿ ಟ್ಯಾಟೂ ಸ್ವಾಮೀಜಿಯವರ ವಿಡಿಯೋ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net