More

    ವಿಜ್ಞಾನ, ವೈದ್ಯಲೋಕವನ್ನೇ ದಂಗುಬಡಿಸಿರೋ ಬಾಲಕ: ಮೊಬೈಲ್‌ ಮುಟ್ಟಿದರೆ ಸಾಕು ಡಾಟಾ ಖಾಲಿ!

    ಅಲಿಗಢ (ಉತ್ತರ ಪ್ರದೇಶ): ಈಗಿನ ಮಕ್ಕಳ ಕೈಯಲ್ಲಿ ಮೊಬೈಲ್‌ ಕೊಟ್ಟರೆ ಅವರು ವಿಡಿಯೋ ನೋಡಿಯೋ ಇಲ್ಲಾ ಮೆಸೇಜ್ ಮಾಡುತ್ತಲೋ ಅದರೊಳಗೆ ಇರುವ ಡಾಟಾ ಖಾಲಿ ಮಾಡುವುದು ಹೊಸ ವಿಷಯವೇ ಅಲ್ಲ. ಆದರೆ ಇಲ್ಲೊಬ್ಬ ಬಾಲಕ, ಏನೂ ಮಾಡದಿದ್ದರೂ ಮೊಬೈಲ್‌ ಅವನ ಕೈಗೆ ಬರುತ್ತಿದ್ದಂತೆಯೇ ಡಾಟಾ ಖಾಲಿ ಆಗುತ್ತಿದೆ!

    ಇದು ವಿಜ್ಞಾನ ಲೋಕಕ್ಕೇ ಸವಾಲಾಗಿದೆ. ಏಕೆಂದರೆ ಇದ್ಯಾವ ಪವಾಡವೋ ಗೊತ್ತಿಲ್ಲ. ಈತನ ದೇಹದಲ್ಲಿನ ಕೆಲ ವಿಕಿರಣದಿಂದ ಈ ರೀತಿಯಾಗುತ್ತಿದೆ ಅನ್ನುತ್ತಿದೆಯಾದರೂ ಏಕೆ ಹೀಗೆ ಎಂದು ತಿಳಿಯುತ್ತಿಲ್ಲ. ಇದನ್ನು ಪರೀಕ್ಷೆ ಮಾಡಲು ಬಂದವರೆಲ್ಲರೂ ಸೋತುಹೋಗಿದ್ದಾರೆ.

    ಇಂಥದ್ದೊಂದು ವಿಚಿತ್ರ ಸಮಸ್ಯೆಗೆ ಸಿಲುಕಿರುವವನು 14 ವರ್ಷದ ಅಸ್ತಿತ್ವ ಅಗರ್‌ವಾಲ್‌ ಎಂಬ ಬಾಲಕ. ಮೇ 2ನೇ ತಾರೀಖು ಇಂಥದ್ದೊಂದು ಘಟನೆ ಕುಟುಂಬದವನಿಗೆ ತಿಳಿದಿದೆ. ಅದಕ್ಕೂ ಮುಂಚೆ ಹೀಗೆ ಆಗುತ್ತಿರಲಿಲ್ಲ ಎನ್ನುವುದು ಕುಟುಂಬದವರ ವಾದ. ಮೊದಲಿಗೆ ಈತನ ಕೈಯಲ್ಲಿ ಫೋನ್‌ ಕೊಟ್ಟಾಗ ಡೇಟಾ ಇದ್ದಕ್ಕಿದ್ದಂತೆಯೇ ಖಾಲಿಯಾಗಿತ್ತು. ಮೊಬೈಲ್‌ ಯಾರೋ ಹ್ಯಾಕ್​ ಮಾಡಿದ್ದಾರೆ ಎಂದುಕೊಂಡು ದೂರು ಕೂಡ ದಾಖಲು ಮಾಡಿದ್ದರು. ಆದರೆ ಯಾವುದೇ ಸಮಸ್ಯೆ ಕಂಡುಬರಲಿಲ್ಲ. ಅಲ್ಲಿಂದ ದಿನವೂ ಹೀಗೆ ಆಗಲು ಶುರುವಾಯಿತು. ನಂತರ ಅವರಿಗೆ ಗೊತ್ತಾದದ್ದು ಯಾವ ಮೊಬೈಲ್‌ ಕೊಟ್ಟರೂ ಹೀಗೆಯೇ ಆಗುತ್ತದೆ ಎಂದು!

    ಈತನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಯಿತು. ಆದರೆ ದೇಹದಲ್ಲಿ ಯಾವುದೇ ಮಾನಸಿಕ ಅಥವಾ ದೈಹಿಕ ಸಮಸ್ಯೆ ಕಾಣಿಸಲಿಲ್ಲ. ಆದರೆ ಎಂಟು ದಿನಗಳ ಹಿಂದೆ, ತೀವ್ರ ತಲೆನೋವು ಮತ್ತು ವಾಂತಿಯಿಂದಾಗಿ ಆತನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆಗ ಪರೀಕ್ಷೆ ಮಾಡಿದಾಗಲೂ ಅಂಥದ್ದೇನು ಸಮಸ್ಯೆ ಕಂಡುಬರಲಿಲ್ಲ ನಂತರ ಹಿರಿಯ ನರವಿಜ್ಞಾನಿ ಡಾ.ಸಂದೀಪ್ ಅವರ ಬಳಿ ತೋರಿಸಲಾಯಿತು. ಅವರು ಕೂಡ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇಂಥ ಪ್ರಕರಣ ಇದೇ ಮೊದಲ ಬಾರಿ ನಾನು ನೋಡಿದ್ದೇನೆ. ಎಲ್ಲಾ ರೀತಿಯಲ್ಲಿ ಪರೀಕ್ಷಿಸಲಾಗಿದೆ. ಸದ್ಯ ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಸಿ ಮಾಹಿತಿ ಸಂಗ್ರಹಿಸುತ್ತೇವೆ. ಆದರೆ ಈ ವಿಷಯ ಮಾತ್ರ ಸದ್ಯ ಒಗಟಾಗಿ ಉಳಿದಿದೆ ಎನ್ನುತ್ತಾರೆ.

    ಎಟಿಎಂ ಕಾರ್ಡ್‌ ನೆಪದಲ್ಲಿ ಲಕ್ಷಾಂತರ ರೂ. ವಂಚಿಸಿದ ‘ಬ್ಯಾಂಕ್‌ ಮ್ಯಾನೇಜರ್‌’- ಹಣ ಕಳಕೊಂಡ ಗುಜರಿ ವ್ಯಾಪಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts