ಬಿಗ್​ಬಾಸ್​ನಲ್ಲಿ ಸ್ನಾನದ ಗುಟ್ಟು ಹೇಳಿದ ಸೋನು ಗೌಡ! ಈಕೆಯ ಮೂಡ್​ ಕೇಳಿ ಎಲ್ಲರೂ ದಂಗು...

sonu
Published on

ಬೆಂಗಳೂರು: ಬಿಗ್​ಬಾಸ್​ ಓಟಿಟಿ ರಿಯಾಲಿಟಿ ಷೋ ಕ್ಷಣಕ್ಷಣಕ್ಕೂ ನೋಡುಗರಿಗೆ ಕುತೂಹಲ ಮೂಡಿಸುತ್ತಿದೆ. ಒಂದು ವಾರದ ಚರ್ಚೆ ವಾರಾಂತ್ಯದಲ್ಲಿ ಸುದೀಪ್​ ನಡೆಸುತ್ತಾರೆ. ಈ ಸಂದರ್ಭದಲ್ಲಿ ಆಯಾ ವಾರದ ಕೆಲವೊಂದು ಕುತೂಹಲ ಘಟನೆಗಳು ಜನರ ಮುಂದೆ ಬರುತ್ತವೆ. ಅದೇ ರೀತಿ ಈ ವಾರದ ಚರ್ಚೆಯಲ್ಲಿ ಮುಖ್ಯವಾಗಿ ಮುನ್ನೆಲೆಗೆ ಬಂದದ್ದು ಭಾರಿ ಟ್ರೋಲ್​ ಮೂಲಕವೇ ಜನಪ್ರಿಯತೆ ಗಳಿಸುತ್ತಿರುವ ಸೋನು ಶ್ರೀನಿವಾಸ ಗೌಡ.

ಮೊದಲಿಗೆ ಸುದೀಪ್​, ಮನೆಯನ್ನು ಕೊಳಕಾಗಿ ಇಟ್ಟುಕೊಳ್ಳುವವರು ಯಾರು, ತಮ್ಮ ವಸ್ತುಗಳಲ್ಲಿ ಚೆಲ್ಲಾಪಿಲ್ಲಿ ಮಾಡಿ ಗಲೀಜು ಮಾಡೋದು ಯಾರು ಎಂದು ಸ್ಪರ್ಧಿಗಳಿಗೆ ಕೇಳಿದ್ದಾರೆ. ಈ ಸಂದರ್ಭದಲ್ಲಿ ಒಬ್ಬೊಬ್ಬರು ಒಬ್ಬೊಬ್ಬರ ಹೆಸರು ಹೇಳಿದ್ದಾರೆ. ಆಗ ಸ್ನಾನದ ವಿಷಯವೂ ಬಂದಾಗ, ಸೋನು ಗೌಡ ಅವರ ಸ್ನಾನದ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ ಇನ್ನೊಬ್ಬ ಸ್ಪರ್ಧಿ ಸಾನ್ಯಾ ಅಯ್ಯರ್​.

ಸೋನು ಗೌಡ ಪ್ರತಿದಿನ ಸ್ನಾನ ಮಾಡುವುದಿಲ್ಲ ಎಂದು ಸಾನ್ಯಾ ಸುದೀಪ್​ ಅವರಿಗೆ ಹೇಳಿದ್ದಾರೆ. ಆಗ ಸುದೀಪ್​ ಇದು ನಿಜವೇ ಎಂದು ಕೇಳಿದಾಗ ಸೋನು ಗೌಡ, ಹೌದು ನನಗೆ ಮೂಡ್​ ಬಂದ್ರೆ ಮಾತ್ರ ಸ್ನಾನ ಮಾಡುತ್ತೇನೆ. ಇವತ್ತು ಸ್ನಾನ ಮಾಡಲಿಲ್ಲ ಎಂದಿದ್ದಾರೆ. ನನಗೆ ಸ್ನಾನ ಮಾಡಬೇಕು ಎಂದರೆ ಮೂಡ್​ ಬರಬೇಕು. ಅದಕ್ಕಾಗಿ ಮೂರು-ಮೂರು ದಿನ ಸ್ನಾನ ಮಾಡದೆಯೂ ಇರಬಲ್ಲೆ. ಸ್ನಾನದ ವಿಷಯದಲ್ಲಿ ಡ್ರಾಮಾ ಮಾಡಲಾರೆ ಎಂದಿದ್ದಾರೆ.

ಸ್ನಾನದ ಬಗ್ಗೆ ಹಲವರು ಡ್ರಾಮಾ ಮಾಡುತ್ತಾರೆ ಎಂದೂ ಇದೇ ವೇಳೆ ಸೋನು ಹೇಳಿದ್ದಾರೆ. ಬಿಗ್​ಬಾಸ್​ ಮನೆಯಲ್ಲಿ ಎಷ್ಟೋ ಜನರು ಸ್ನಾನದ ವಿಚಾರದಲ್ಲಿ ಡ್ರಾಮಾ ಮಾಡುತ್ತಾರೆ. ಪ್ರತಿ ದಿನ ಸ್ನಾನ ಮಾಡೋ ಥರ ಡ್ರಾಮಾ ಮಾಡ್ತಾರೆ. ನಾನು ಹಾಗೆ ಮಾಡಲ್ಲ. ಮೂಡ್​ ಇಲ್ಲ ಅಂದ್ರೆ ಸ್ನಾನನೇ ಮಾಡಲ್ಲ ಎಂದರು. ಇದನ್ನು ಕೇಳಿ ಎಲ್ಲರೂ ಹುಬ್ಬೇರಿಸಿದರು.

ಒಂದಿಲ್ಲೊಂದು ವಿಷಯದಲ್ಲಿ ಟ್ರೋಲ್​ ಆಗ್ತಿರೋ, ಆ ಟ್ರೋಲ್​ನಿಂದಲೇ ಭಾರಿ ಖುಷಿ ಪಡ್ತಿರೋ ಸೋನು ಗೌಡ ಅವರನ್ನು ಟ್ರೋಲ್​ ಮಾಡಲು ಟ್ರೋಲಿಗರಿಗೆ ಈಗ ಸ್ನಾನದ ವಿಷಯವೂ ಸಿಕ್ಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net