ನಟಿ ಅನುಷ್ಕಾ ಶೆಟ್ಟಿ ಅಣ್ಣನ ಕೊಲೆಗೆ ಸಂಚು​? ಮುನ್ನೆಲೆಗೆ ಬಂದ ಮುತ್ತಪ್ಪ ರೈ! ದಾಖಲಾಯ್ತು ದೂರು

anushka
ಮನ್ಮಿತ್ ರೈ, ಗುಣರಂಜನ್ ಶೆಟ್ಟಿ, ಅನುಷ್ಕಾ
Published on

ಬೆಂಗಳೂರು: ಖ್ಯಾತ ಬಹುಭಾಷಾ ನಟಿ ಅನುಷ್ಕಾ ಶೆಟ್ಟಿ ಅವರ ಸಹೋದರ ಗುಣರಂಜನ್ ಶೆಟ್ಟಿ ಅವರ ಕೊಲೆಗೆ ಸಂಚು ರೂಪಿಸಲಾಗಿತ್ತು ಎನ್ನುವ ಶಾಕಿಂಗ್ ವಿಚಾರ ಬಹಿರಂಗವಾಗಿದೆ. ಈ ಸಂಬಂಧ ಜಯಕರ್ನಾಟಕ ಸಂಘಟನೆ ಸದಸ್ಯರು ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ದೂರು ನೀಡಿದ್ದಾರೆ. ಗುಣರಂಜನ್ ಶೆಟ್ಟಿ ಅವರು ಜಯಕರ್ನಾಟಕ ಸಂಘಟನೆಯ ಕಾರ್ಯಕರ್ತರಾಗಿದ್ದಾರೆ.

ಗುಣರಂಜನ್ ಶೆಟ್ಟಿ ಮತ್ತು ಇನ್ನೋರ್ವ ಕಾರ್ಯಕರ್ತ ಮನ್ಮಿತ್ ರೈ ಇಬ್ಬರೂ ಮುತ್ತಪ್ಪ ರೈ ಜತೆ ಇದ್ದರು. ಮುತ್ತಪ್ಪ ರೈ ನಿಧನದ ಬಳಿಕ ಮನ್ಮಿತ್ ರೈ ದೂರ ಆಗಿದ್ದರು. ಇದೀಗ ಗುಣರಂಜನ್ ಶೆಟ್ಟಿ ಅವರ ಹತ್ಯೆಗೆ ಸ್ಕೆಚ್ ಹಾಕಿದ್ದರು ಎನ್ನುವ ಆರೋಪ ಕೇಳಿಬಂದಿದೆ.

ಈ ಮೂಲಕ ಜಯ ಕರ್ನಾಟಕ ಸಂಘಟನೆಯ ಸಂಸ್ಥಾಪಕ ದಿವಂಗತ ಮುತ್ತಪ್ಪ ರೈ ಅಪ್ತ ಬಳಗದಲ್ಲಿ ಮತ್ತೆ ಕೋಲ್ಡ್ ವಾರ್ ಆರಂಭವಾಗಿದೆಯೇ ಎಂಬ ಬಗ್ಗೆ ಸಂದೇಹ ಶುರುವಾಗಿದೆ. ಏಕಂದರೆ ಈ ಹಿಂದೆ ಕೂಡ ಮುತ್ತಪ್ಪ ರೈ ಅಪ್ತ ಬಳಗದ ಗಲಾಟೆ ಸದ್ದು ಮಾಡಿತ್ತು.

ಕೊಲೆ ಆರೋಪವನ್ನು ಮನ್ಮಿತ್ ರೈ ತಳ್ಳಿ ಹಾಕಿದ್ದಾರೆ. ನಾನು ವಿದೇಶದಲ್ಲಿ ಇದ್ದು, ಬಿಜಿನೆಸ್​ ವಿಚಾರಕ್ಕೆಂದು ಬಂದಿದ್ದೇನೆ. ನನಗೂ ಇದಕ್ಕೂ ಸಂಬಂಧವಿಲ್ಲ ಎಂದು ಮನ್ಮಿತ್​ ಅವರು ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ. ನನ್ನ ಮೇಲೆ ಬಂದಿರುವ ಆರೋಪಗಳು ಎಷ್ಟು ಸತ್ಯ ಎಂಬ ಬಗ್ಗೆ ಪೊಲೀಸ್ ತನಿಖೆಯಿಂದ ತಿಳಿದುಬರಲಿದೆ. ವಿನಾಕಾರಣ ನನ್ನ ಹೆಸರನ್ನು ಏತಕ್ಕೆ ತರುತ್ತಿದ್ದಾರೆ ಎನ್ನುವುದು ತಿಳಿಯುತ್ತಿಲ್ಲ. ನನ್ನ ಮೇಲೆ ಇದುವರೆಗೆ ಯಾವುದೇ ಕ್ರಿಮಿನಲ್​ ಕೇಸುಗಳು ಇಲ್ಲ, ಎಫ್​ಐಆರ್​ ಕೂಡ ದಾಖಲಾಗಿಲ್ಲ. ವಿನಾಕಾರಣ ನನ್ನ ಹೆಸರಿಗೆ ಮಸಿ ಬಳೆಯುತ್ತಿದ್ದಾರೆ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net