

ಬೆಂಗಳೂರು: ರಾಜ್ಯ ಬಿಜೆಪಿ ನಾಯಕತ್ವ ಬದಲಾವಣೆ ಚರ್ಚೆ ಕಾವೇರಿರುವ ಬೆನ್ನಲ್ಲೇ ದಿಢೀರ್ ಎಂದು ನಟಿ ಶ್ರುತಿ ಅವರನ್ನು ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನದಿಂದ ಬದಲಾವಣೆ ಮಾಡಲಾಗಿತ್ತು. ಈ ಜಾಗಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪನವರ ಆಪ್ತರೆಂದೇ ಗುರುತಿಸಿಕೊಂಡಿರುವ ಕಾಪು ಸಿದ್ದಲಿಂಗಸ್ವಾಮಿ ಅವರನ್ನು ನೇಮಕ ಮಾಡಲಾಗಿದೆ.
ಇದು ರಾಜಕೀಲ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಸರಿಯಾಗಿ ಕೆಲಸ ಮಾಡದಿರುವ ಹಾಲಿ ನಿಗಮ-ಮಂಡಳಿ, ಪ್ರಾಧಿಕಾರಗಳಿಗೆ ನೇಮಕಾತಿ ಮಾಡಿರುವವರನ್ನು ವಜಾ ಮಾಡಬೇಕು. ಉಳಿದ 2 ವರ್ಷಗಳ ಅವಧಿಗೆ ಪಕ್ಷದ ಬೇರೆ ಕಾರ್ಯಕರ್ತರಿಗೆ ಅವಕಾಶ ಮಾಡಿಕೊಡಬೇಕು. ಅದಕ್ಕಾಗಿ ಒಂದು ಪಟ್ಟಿಯನ್ನೂ ಮಾಡಬೇಕು ಸಿದ್ಧಪಡಿಸಬೇಕು ಎಂಬ ಚರ್ಚೆ ಕಳೆದ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ನಡೆದಿತ್ತು. ಆದರೆ
ಏಕಾಏಕಿ ಶ್ರುತಿ ಅವರನ್ನು ತೆಗೆದಿರುವುದು ಏಕೆ ಎಂಬ ಬಗ್ಗೆ ಚರ್ಚೆ ಶುರುವಾಗಿದೆ.
ಈ ವಿಷಯ ಭಾರಿ ಚರ್ಚೆ ಆಗುತ್ತಿರುವ ನಡುವೆಯೇ ನಟಿ ಶ್ರುತಿ ಅವರಿಗೆ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಲಾಗಿದೆ. ಈ ಕುರಿತು ಸರ್ಕಾರ ಆದೇಶ ಹೊರಡಿಸಿದೆ.