

ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಿನ್ನೆಯಿಂದ ಸಾರಿಗೆ ಇಲಾಖೆ ನೌಕರರು ಮುಷ್ಕರ ಶುರು ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರ ಜನಸಾಮಾನ್ಯರಿಗೆ ತೊಂದರೆ ಆಗಬಾರದು ಎನ್ನುವ ಕಾರಣಕ್ಕೆ ಖಾಸಗಿ ಬಸ್ಗಳ ವ್ಯವಸ್ಥೆಯನ್ನು ಮಾಡಿದೆ. ಖಾಸಗಿ ಬಸ್ಗಳು ಯಾವುದೇ ಕಾರಣಕ್ಕೂ ಹೆಚ್ಚುವರಿ ಶುಲ್ಕ ವಸೂಲಿ ಮಾಡಬಾರದು ಎಂದು ಸರ್ಕಾರ ಎಚ್ಚರಿಕೆಯನ್ನೂ ನೀಡಿದೆ.
ಆದರೆ ಇದರ ಹೊರತಾಗಿಯೂ ಹೆಚ್ಚುವರಿ ಶುಲ್ಕವನ್ನು ವಸೂಲು ಮಾಡುತ್ತಿರುವ ಆರೋಪಗಳು ಅಲ್ಲಲ್ಲಿ ಕೇಳಿಬಂದಿವೆ. ಇದರಿಂದ ಜನಸಾಮಾನ್ಯರು ಖಾಸಗಿ ಬಸ್ಗಳಿಗೆ ಹೋಗಲು ಹೆದರುವ ಸ್ಥಿತಿ ನಿರ್ಮಾಣವಾಗಿದೆ.
ಇದೀಗ ಜನರ ಹಿತದೃಷ್ಟಿಯಿಂದ ಸರ್ಕಾರವೇ ದರವನ್ನು ನಿಗದಿ ಮಾಡಿದೆ. ಕೆಎಸ್ಆರ್ಟಿಸಿಯ ಸಾಮಾನ್ಯ ಬಸ್ ದರವನ್ನು ಈ ಖಾಸಗಿ ಬಸ್ಗಳಿಗೂ ನಿಗದಿ ಮಾಡಲಾಗಿದೆ.
ಬೆಂಗಳೂರಿನಿಂದ ವಿವಿಧ ಜಿಲ್ಲಾ ಕೇಂದ್ರಗಳಿಗೆ ತೆರಳುವ ಬಸ್ಗಳಿಗೆ ಈ ರೀತಿ ದರವನ್ನು ಸರ್ಕಾರ ನಿಗದಿ ಮಾಡಿದೆ. ಇಲ್ಲಿದೆ ನೋಡಿ ವಿವರ....
ಬೆಂಗಳೂರು ಟು ಹಾಸನ 209
ಬೆಂಗಳೂರು ಟು ಚಿಕ್ಕಮಗಳೂರು 280
ಬೆಂಗಳೂರು ಟು ಶಿವಮೊಗ್ಗ 298
ಬೆಂಗಳೂರು ಟು ದಾವಣಗೆರೆ 312
ಬೆಂಗಳೂರು ಟು ಚಿತ್ರದುರ್ಗ 237
ಬೆಂಗಳೂರು ಟು ಹೊಸ ದುರ್ಗ 173
ಬೆಂಗಳೂರು ಟು ಪಾವಗಡ 164
ಬೆಂಗಳೂರು ಟು ಮಧುಗಿರಿ 111
ಬೆಂಗಳೂರು ಟು ಕೊರಟಗೆರೆ 96
ಬೆಂಗಳೂರು ಟು ಗೌರಿಬಿದನೂರ 88
ಬೆಂಗಳೂರು ಟು ಚಿಕ್ಕಬಳ್ಳಾಪುರ 69
ಬೆಂಗಳೂರು ಟು ಬಾಗೆಪಲ್ಲಿ 117
ಬೆಂಗಳೂರು ಟು ಕೋಲಾರ 76
ಬೆಂಗಳೂರು ಟು ಮೂಳಬಾಗಿಲು 105
ಬೆಂಗಳೂರು ಟು ಚಿಂತಾಮಣಿ 86
ಬೆಂಗಳೂರು ಟು ತುಮಕೂರು 80
ಬೆಂಗಳೂರು ಟು ಕೆಜಿಎಫ್ 110
ಬೆಂಗಳೂರು ಟು ಚಳ್ಳಕೆರೆ 230
ಬೆಂಗಳೂರು ಟು ಬಳ್ಳಾರಿ 360
ಬೆಂಗಳೂರು ಟು ಸಿರಾ 145
ಬೆಂಗಳೂರು ಟು ಹಿರಿಯೂರು 195
ಬೆಂಗಳೂರು ಟು ಧರ್ಮಸ್ಥಳ 343
ಬೆಂಗಳೂರು ಟು ಉಡುಪಿ 470
ಬೆಂಗಳೂರು ಟು ಕುಂದಾಪುರ 519
ಬೆಂಗಳೂರು ಟು ಪುತ್ತೂರು 470
ಬೆಂಗಳೂರು ಟು ಮಡಿಕೇರಿ 326
ಬೆಂಗಳೂರು ಟು ವಿಜಯಪುರ 678
ಬೆಂಗಳೂರು ಟು ಮಂಗಳೂರು 401
ಬೆಂಗಳೂರು ಟು ಕೊಪ್ಪಳ 462
ಬೆಂಗಳೂರು ಟು ಹೊಸಪೇಟೆ 399
ಬೆಂಗಳೂರು ಟು ಕಲಬುರಗಿ 691
ಬೆಂಗಳೂರು ಟು ಹುಬ್ಬಳ್ಳಿ 489