More

    ಮುಷ್ಕರ ನಿರತರಿಗೆ ‘ಬುದ್ಧಿ ಕಲಿಸುವೆ’ ಎಂದ ಸರ್ಕಾರ- ಹಾಲಿಗಳು ಬರದಿದ್ದರೆ ಮಾಜಿಗಳಿಂದ ಸೇವೆ: ಲಿಸ್ಟ್​ ರೆಡಿ

    ಬೆಂಗಳೂರು: ಸರ್ಕಾರ ಎಷ್ಟೆಲ್ಲಾ ಮನವಿ ಮಾಡಿಕೊಂಡರೂ ಸಾರಿಗೆ ನೌಕರರು ತಮ್ಮ ಪಟ್ಟುಬಿಡುತ್ತಿಲ್ಲ. ಈ ಕಾರಣದಿಂದ ಅವರಿಗೆ ಬುದ್ಧಿ ಕಲಿಸುವ ಅನಿವಾರ್ಯತೆ ಎದುರಾಗಿದೆ ಎಂದಿರುವ ಸರ್ಕಾರ, ಹೊಸ ಯೋಜನೆಯೊಂದನ್ನು ರೂಪಿಸಿದೆ.

    ಸಾರಿಗೆ ನೌಕರರ ಮುಷ್ಕರಕ್ಕೆ ಸೆಡ್ಡು ಹೊಡೆಯಲು ಸರ್ಕಾರ ಮಾಡಿರುವ ಪ್ಲ್ಯಾನ್ ಇದಾಗಿದೆ. ಈ ಮೊದಲು ಸರ್ಕಾರಿ ಬಸ್​ಗಳ ಬದಲು ಖಾಸಗಿ ಬಸ್​ಗಳ ನೆರವನ್ನು ಸರ್ಕಾರ ಪಡೆದಿದೆ. ಇದಾಗಲೇ ಹಲವಾರು ರೂಟ್​ಗಳಲ್ಲಿ ಖಾಸಗಿ ಬಸ್​ಗಳನ್ನು ಬಿಡಲಾಗಿದೆ.

    ಕೆಲವು ಕಡೆಗಳಲ್ಲಿ ಸರ್ಕಾರದ ಸೂಚನೆಗೆ ಕಿಮ್ಮತ್ತು ಕೊಡದೇ ಕೆಲವು ಖಾಸಗಿ ಬಸ್​ಗಳ ಮಾಲೀಕರು ದರವನ್ನು ದುಪ್ಟಟ್ಟು ಪಡೆಯುವುದನ್ನು ನಿಲ್ಲಿಸಿಲ್ಲ. ಅನಿವಾರ್ಯವಾಗಿ ಜನರು ಹೆಚ್ಚುವರಿ ಶುಲ್ಕ ಕೊಟ್ಟು ತೆರಳಲೇಬೇಕಾಗಿದೆ. ಇದೀಗ ಸರ್ಕಾರ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಸಾರಿಗೆ ಇಲಾಖೆಯ ನಿವೃತ್ತ ನೌಕರರನ್ನು ಕರೆತಂದು ಬಸ್ ಸೇವೆ ನೀಡಲು ಚಿಂತನೆ ನಡೆಸಿರುವುದಾಗಿ ತಿಳಿದುಬಂದಿದೆ.

    ವೇತನ ಪರಿಷ್ಕರಣೆ ಕುರಿತಂತೆ ಸಾರಿಗೆ ನೌಕರರ ಮುಷ್ಕರ 2ನೇ ದಿನಕ್ಕೆ ಕಾಲಿಟ್ಟಿದೆ. ಗುರುವಾರವೂ ಖಾಸಗಿ ಬಸ್ ಗಳು ರಾಜ್ಯದೆಲ್ಲೆಡೆ ಸೇವೆ ನೀಡುತ್ತಿವೆ. ಅದರ ಜತೆಗೆ ಇದೀಗ ಕಳೆದ ಎರಡು ವರ್ಷಗಳಲ್ಲಿ ನಿವೃತ್ತರಾದ ಚಾಲಕರನ್ನು ಕರೆತಂದು ಬಸ್ ಚಲಾಯಿಸುವಂತೆ ಮಾಡಲು ಚರ್ಚೆ ನಡೆದಿದ್ದು, ಇದಕ್ಕೆ ಸಂಬಂಧಿಸಿದಂತೆ ನಿವೃತ್ತ ಚಾಲಕರ ಪಟ್ಟಿಯನ್ನು ಸಾರಿಗೆ ಇಲಾಖೆ ಸಿದ್ಧ ಪಡಿಸುತ್ತಿರುವುದಾಗಿ ತಿಳಿದುಬಂದಿದೆ.

    ಚೆಕ್​ಬೌನ್ಸ್​ ಪ್ರಕರಣ: ಖ್ಯಾತ ನಟಿ ರಾಧಿಕಾ ದಂಪತಿಗೆ ಒಂದು ವರ್ಷ ಕಠಿಣ ಜೈಲು ಶಿಕ್ಷೆ

    ಕರೊನಾ ಅಲೆ: ಸರ್ಕಾರಿ ಕಚೇರಿಗಳು ವಾರಕ್ಕೆ ಎರಡು ದಿನ ಬಂದ್​- ಇಲ್ಲಿ ಇನ್ಮುಂದೆ ವಾರಕ್ಕೆ ಐದೇ ದಿನ ಕೆಲಸ

    ಎರಡನೆಯ ಮದುವೆಯಾಗಿದ್ದೇ ತಪ್ಪಾಯ್ತಾ? ಗಂಡನ ಪ್ರೀತಿಗಾಗಿ ಹಂಬಲಿಸುತ್ತಿರುವ ನನಗೇಕೇ ಈ ಹಿಂಸೆ ಮೇಡಂ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts