ಆಕ್ಸಿಜನ್ ಕಾನ್ಸಂಟ್ರೇಟರ್ ಬೇಕೆಂದು ಇಂಟರ್‌ನೆಟ್‌ ಹುಡುಕಿ ಹಣ ಕಳೆದುಕೊಂಡ ಉದ್ಯೋಗಿ!

ocygen
Published on

ಬೆಂಗಳೂರು: ಖಾಸಗಿ ಕಂಪನಿ ಉದ್ಯೋಗಿಯೊಬ್ಬರು ಆಕ್ಸಿಜನ್ ಕಾನ್ಸಂಟ್ರೇಟರ್ ಖರೀದಿಗಾಗಿ ಅಂತರ್ಜಾಲದ ಮೊರೆ ಹೋಗಿ 30 ಸಾವಿರ ರೂ. ಕಳೆದುಕೊಂಡಿದ್ದಾರೆ.

ಕತ್ರಿಗುಪ್ಪೆ ನಿವಾಸಿ ರಾಜೇಶ್ (40) ಹಣ ಕಳೆದುಕೊಂಡವರು. ರಾಜೇಶ್ ತಾಯಿಗೆ ಮೇ 4ರಂದು ಕರೊನಾ ಪಾಸಿಟಿವ್ ಬಂದಿತ್ತು. ಆಕ್ಸಿಜನ್ ಅಗತ್ಯತೆಯಿದ್ದ ಹಿನ್ನೆಲೆಯಲ್ಲಿ ತಮ್ಮ ಸ್ನೇಹಿತನನ್ನು ವಿಚಾರಿಸಿದ್ದರು. ಸ್ನೇಹಿತ ಅಂತಾರ್ಜಾಲದಲ್ಲಿ ಆಕ್ಸಿಜನ್ ಕಾನ್ಸಂಟ್ರೇಟರ್ ಮಾರಾಟ ಮಾಡುವವರ ನಂಬರ್ ಹುಡುಕಿ ರಾಜೇಶ್‌ಗೆ ಕೊಟ್ಟಿದ್ದರು.

ಈ ನಂಬರ್‌ಗೆ ಕರೆ ಮಾಡಿ ವಿಚಾರಿಸಿದಾಗ ಅಪರಿಚಿತ ವ್ಯಕ್ತಿಯೊಬ್ಬ ನಿಮಗೆ ಆಕ್ಸಿಜನ್ ಕಾನ್ಸಂಟ್ರೇಟರ್‌ನ್ನು ಪಾರ್ಸೆಲ್ ಮೂಲಕ ಕಳುಹಿಸಿ ಕೊಡುವುದಾಗಿ ಹೇಳಿ ದಾಖಲಾತಿ ಪಡೆದಿದ್ದ. ನಂತರ ಕ್ಯೂಆರ್ ಕೋಡ್‌ನ್ನು ರಾಜೇಶ್ ಮೊಬೈಲ್‌ಗೆ ಕಳುಹಿಸಿ ಸ್ಕ್ಯಾನ್‌ ಮಾಡುವಂತೆ ಸೂಚಿಸಿ 30 ಸಾವಿರ ರೂ.ನ್ನು ಮುಂಗಡ ಹಣವೆಂದು ಪಡೆದಿದ್ದ. ಇದಾದ ಬಳಿಕ ಆಕ್ಸಿಜನ್ ಕಾನ್ಸಂಟ್ರೇಟರ್ ಯಂತ್ರವನ್ನು ಕೊಡದೇ, ಹಣವನ್ನೂ ಮರಳಿಸದೇ ವಂಚಿಸಿರುವುದು ಗೊತ್ತಾಗಿದೆ. ದಕ್ಷಿಣ ಸಿಇಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net