More

    ‘ಗೋಡೆ ತೆಳ್ಳಗಿದ್ದು, ಸೆಕ್ಸ್‌ ಮಾಡುವಾಗ ಪ್ಲೀಸ್‌ ಸೌಂಡ್‌ ಮಾಡಬೇಡಿ, ಅಕ್ಕಪಕ್ಕದವರಿಗೆ ಒಂಥರಾ ಆಗುತ್ತೆ’

    ಲಂಡನ್‌: “ನಮ್ಮದು ಅಪಾರ್ಟ್‌ಮೆಂಟ್‌ ಎನ್ನುವುದು ನೆನಪಿರಲಿ. ನಿಮ್ಮ ಅಕ್ಕಪಕ್ಕದಲ್ಲಿ ಸಾಕಷ್ಟು ಮನೆಗಳಿವೆ. ಮನೆಯ ಗೋಡೆಗಳು ತೆಳ್ಳಗಿವೆ. ನೀವು ಸೆಕ್ಸ್‌ ಮಾಡುವಾಗ ಸೌಂಡ್‌ ಮಾಡಿದರೆ ಅದು ಅಕ್ಕ‍ ಪಕ್ಕದವರಿಗೂ ಕೇಳಿಸುತ್ತದೆ ಎನ್ನುವುದು ನೆನಪಿರಲಿ, ಪ್ಲೀಸ್‌ ಹೀಗೆ ಸೌಂಡ್‌ ಮಾಡಬೇಡಿ…”

    ಈ ರೀತಿಯ ಪತ್ರವೊಂದನ್ನು ಲಂಡನ್‌ ನಿವಾಸಿಯಾಗಿರುವ ಸ್ಟಿಫನ್​ ಕನ್ನಿಂಗ್​ಹ್ಯಾಮ್​ ಎಂಬಾತನಿಗೆ ನೆರೆಮನೆಯವನೊಬ್ಬ ಬರೆದಿದ್ದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‌ ಆಗಿದೆ.

    ಕೈಯಲ್ಲಿ ಹಾಳೆಯ ಮೇಲೆ ಬರೆದಿರುವ ಪತ್ರವೊಂದನ್ನು ಖುದ್ದು ಸ್ಟಿಫನ್‌ ಟ್ವಿಟರ್‌ನಲ್ಲಿ ಶೇರ್‌ ಮಾಡಿಕೊಂಡಿದ್ದು, ತಮ್ಮ ನೆರೆಮನೆಯವರು ಈ ರೀತಿ ಪತ್ರ ಬರೆದಿದ್ದು, ಇದನ್ನು ಹೇಳಲು ನನಗೆ ಮುಜುಗರ ಆಗುತ್ತದೆ ಎಂದಿದ್ದಾರೆ. ನನ್ನ ನೆರೆಮನೆಯಾತ ಬಹಳ ಸೌಜನ್ಯದಿಂದಲೇ ದೂರು ಹೇಳಿದ್ದಾರೆ. ’ಆತ್ಮೀಯ ನೆರೆಮನೆಯವರೆ, ಈ ಕಟ್ಟಡದ ಗೋಡೆಗಳು ತೆಳ್ಳಗಿರುವ ಕಾರಣ, ಶಬ್ದವು ಒಂದು ಮನೆಯಿಂದ ಇನ್ನೊಂದು ಮನೆಗೆ ಕೇಳಿಸುತ್ತಿದೆ ಎಂಬ ಬಗ್ಗೆ ನಿಮಗೆ ನೆನಪಿಸಲು ಈ ಪತ್ರ ಬರೆಯುತ್ತಿದ್ದೇನೆ’ ಎಂದು ಪತ್ರದಲ್ಲಿ ಇರುವ ವಿಷಯವನ್ನು ಸ್ಟಿಫನ್‌ ಹಂಚಿಕೊಂಡಿದ್ದಾರೆ.

     

    ನೆರೆಹೊರೆಯವರನ್ನು ಗೌರವದಿಂದ ಕಾಣಬೇಕು ಎಂಬುದನ್ನು ನೀವು ಒಪ್ಪುತ್ತೀರಿ ಎಂದು ನಾನು ನಂಬಿದ್ದೇನೆ. ನಿಮ್ಮ ಖಾಸಗಿ ವಿಚಾರಗಳನ್ನು ನಾವು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುವುದಿಲ್ಲ. ಆದ್ದರಿಂದ ಪ್ಲೀಸ್‌ ಸೆಕ್ಸ್‌ ಮಾಡುವಾದ ಶಬ್ದ ಕಡಿಮೆ ಮಾಡಿ. ನೀವು ಶಬ್ದ ಮಾಡಿದರೆ ಅದು ನೆರೆಮನೆಯವರಿಗೆ ಕೇಳಿಸುತ್ತದೆ ಎನ್ನುವುದು ನೆನಪಿನಲ್ಲಿ ಇರಲಿ. ಇದನ್ನು ದಯವಿಟ್ಟು ಅರ್ಥ ಮಾಡಿಕೊಳ್ಳಿ. ನೀವು ಹೀಗೆ ಶಬ್ದ ಮಾಡಿದರೆ ನೆರೆಹೊರೆಯವರಿಗೆ ಒಂದು ರೀತಿ ಮುಜುಗರ ಆಗುತ್ತದೆ. ಇದನ್ನು ಅರ್ಥ ಮಾಡಿಕೊಂಡಿರುವುದಕ್ಕೆ ಧನ್ಯವಾದ’ ಎಂದು ಪತ್ರದಲ್ಲಿ ಇದೆ.

    ಈ ಬಗ್ಗೆ ವಿವರಣೆ ನೀಡಿರುವ ಸ್ಟಿಫನ್‌, ನಾನು ಬೆಳಗ್ಗೆ ಬಾಗಿಲು ತೆರೆದಾಗ ಈ ಪತ್ರ ಸಿಕ್ಕಿದೆ. ನಾನು ನಿತ್ಯ ಬೆಳಗ್ಗೆ 8.30ರ ಸುಮಾರಿಗೆ ಏಳುತ್ತೇನೆ. ಇದರ ಬಗ್ಗೆ ಗೊತ್ತಿದ್ದರಿಂದ ಏಳುವ ಮೊದಲೇ ಪತ್ರವನ್ನ ಇಟ್ಟು ಹೋಗಿದ್ದಾರೆ. ಈ ಪತ್ರವನ್ನ ಓದುತ್ತಾ ನನಗೆ ನಾಚಿಕೆ ಎನಿಸಲು ಶುರುವಾಗಿತ್ತು ಎಂದು ಹೇಳಿಕೊಂಡು ಟ್ವಿಟರ್‌ನಲ್ಲಿ ಶೇರ್‌ ಮಾಡಿದ್ದಾರೆ. ಈ ಟ್ವೀಟ್‌ಗೆ ಕಮೆಂಟ್‌ಗಳ ಸುರಿಮಳೆಯೇ ಬರುತ್ತಿದೆ.

    ಎಮರ್ಜೆನ್ಸಿ ಇದೆ, ಅರ್ಜೆಂಟಾಗಿ ಸೆಕ್ಸ್‌ಗೆ ಹೋಗ್ಬೇಕು, ಇ- ಪಾಸ್‌ ಕೊಡಿ ಎಂದು ಅರ್ಜಿ: ಮುಂದಾದದ್ದೇ ರೋಚಕ…

    ಅವನ ದೇಹ ಬೇಕು, ನೀನು ಗಂಡ ಆಗಿರ್ಬೇಕು ಅಂತಾಳೆ- ವರದಕ್ಷಿಣೆ ಕೇಸ್‌ ಧಮ್ಕಿ ಹಾಕ್ತಾಳೆ: ಏನು ಮಾಡಲಿ?

    ಅಜ್ಜಿಯ ಬೌಲಿಂಗ್‌ ಏಟಿಗೆ ಎಲ್ಲವೂ ಕ್ಲೀನ್‌ಬೌಲ್ಡ್‌- ವಿಡಿಯೋ ನೋಡಿ ನೆಟ್ಟಿಗರಿಂದ ಶ್ಲಾಘನೆಗಳ ಸುರಿಮಳೆ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts