More

    ಸಿಎಂ ಅಳಿಯನಿಗೆ ಸಿಕ್ತು ಸ್ಥಾನ- ಕೋವಿಡ್‌, ನಿಫಾ ಕಾಯಿಲೆ ವಿರುದ್ಧ ಹೋರಾಡಿದ್ದ ಸಚಿವೆಗೆ ಕೊಕ್‌!

    ತಿರುವನಂತಪುರ: ಕೆ.ಕೆ.ಶೈಲಜಾ… ಕಳೆದ ವರ್ಷ ಭಾರಿ ಮನ್ನಣೆ ಗಳಿಸಿದ್ದ ಕೇರಳದ ಆರೋಗ್ಯ ಸಚಿವರು ಇವರು. ಕೋವಿಡ್‌ ಹಾಗೂ ನಿಫಾ ಸೋಂಕಿನ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದು ಅಂತಾರಾಷ್ಟ್ರೀಯ ಮಟ್ಟದವರೆಗೆ ಗುರುತಿಸಿಕೊಂಡಿದ್ದ ಈ ಸಚಿವೆಯನ್ನು ಹಾಲಿ ಸಚಿವ ಸಂಪುಟದಲ್ಲಿ ಹೊರಗಿಟ್ಟು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಭಾರಿ ಅಚ್ಚರಿ ಮೂಡಿಸಿದ್ದಾರೆ!

    ಸಿಪಿಎಂ ಹಿರಿಯ ನಾಯಕಿ ಮತ್ತು ಆರೋಗ್ಯ ಸಚಿವೆಯಾಗಿದ್ದ ಕೆ.ಕೆ.ಶೈಲಜಾ ಅವರನ್ನು ಸಂಪುಟದಲ್ಲಿ ಹೊರಕ್ಕಿಟ್ಟಿರುವುದು ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ. ‌ಆದರೆ ಅಚ್ಚರಿಯ ವಿಷಯವೆಂದರೆ, ಈ ಬಾರಿ ಸಂಪುಟದಲ್ಲಿ ಇರುವವರು ಎಲ್ಲರೂ ಹೊಸಬರೇ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಹೊರತುಪಡಿಸಿ ಎಲ್ಲ ಮುಖಗಳೂ ಹೊಸದೇ ಆಗಿದ್ದು, ಶೈಲಜಾ ಅವರನ್ನೂ ಹೊರಕ್ಕೆ ಇಡಲಾಗಿದೆ. ಪಕ್ಷದ ವಿಪ್ ಆಗಿ ಶೈಲಾಜಾ ಆಯ್ಕೆಯಾಗಿದ್ದಾರೆ.

    ಡಿವೈಎಫ್‌ಐ ರಾಷ್ಟ್ರೀಯ ಮುಖಂಡ ಮೊಹಮ್ಮದ್ ರಿಯಾಜ್ ಅವರು ಈ ಬಾರಿಯ ಸಚಿವ ಸಂಪುಟದಲ್ಲಿ ಸ್ಥಾನ ಪಡೆದಿದ್ದು, ಇಬ್ಬರು ಮಹಿಳೆಯರೂ ಸೇರ್ಪಡೆಯಾಗಿದ್ದಾರೆ. ಇರಿಂಜಲಾಕುಡ ಶಾಸಕಿ ಪ್ರಾಧ್ಯಾಪಕಿ ಆರ್. ಬಿಂದು ಮತ್ತು ಅರಣ್ಮುಲ ಶಾಸಕಿ ವೀಣಾ ಜಾರ್ಜ್ ಪಿಣರಾಯಿ ಸಂಪುಟದಲ್ಲಿ ಸ್ಥಾನ ಪಡೆದಿದ್ದು, ಬಿಂದು ಅವರು ಸಿಪಿಎಂ ಕಾರ್ಯದರ್ಶಿ, ಕೇರಳ ಉಸ್ತುವಾರಿ ಎ ವಿಜಯರಾಘವನ್ ಅವರ ಪತ್ನಿ.

    ಇವರನ್ನು ಹೊರತುಪಡಿಸಿದರೆ ಕೇಂದ್ರ ಸಮಿತಿಯ ಸದಸ್ಯರಾದ ಎಂ.ವಿ.ಗೋವಿಂದನ್, ಕೆ.ರಾಧಾಕೃಷ್ಣನ್, ರಾಜ್ಯ ಕಾರ್ಯದರ್ಶಿ ಕೆ.ಎನ್.ಬಾಲಗೋಪಾಲ್, ಪಿ ರಾಜೀವ್ ಜೊತೆಗೆ ಹಿರಿಯ ನಾಯಕರಾದ ವಿ.ಎನ್. ವಾಸವನ್, ಸಾಜಿ ಚೆರಿಯನ್, ವಿ ಶಿವಾಂಕುಟ್ಟಿ, ಮತ್ತು ವಿ ಅಬ್ದುಲ್ ರಹಮಾನ್ ಅವರು ಕೇರಳದ ನೂತನ ಸಚಿವರಾಗಿದ್ದಾರೆ.

    ಮಗ ಎಲ್ಲದಕ್ಕೂ ತಾಯಿಯನ್ನೇ ನಾಮಿನಿ ಮಾಡಿ ಮೃತಪಟ್ಟರೆ ಆತನ ಪತ್ನಿಗೆ ಪಾಲು ಸಿಗಲ್ವಾ?

    ಕೋವಿಡ್‌ನಿಂದ ಅನಾಥವಾಗಿರುವ ಮಗುವನ್ನು ದತ್ತು ಪಡೆಯುವ ಹಂಬಲವೆ? ಹಾಗಿದ್ದರೆ ಇದನ್ನೊಮ್ಮೆ ಓದಿ…

    ಲಾಕ್‌ಡೌನ್‌ ಇಫೆಕ್ಟ್‌: ಸೋಂಕಿತರ ಸಂಖ್ಯೆಯಲ್ಲಾದ ವ್ಯತ್ಯಾಸವೇನು? ಪ್ರಧಾನಿಗೆ ನೀಡಿದರು ಈ ಮಾಹಿತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts