ಮೇಕೆದಾಟು ಯೋಜನೆ: ಕರ್ನಾಟಕ, ತಮಿಳುನಾಡು ಇಚ್ಛೆಪಟ್ಟರೆ ಪ್ರವೇಶಕ್ಕೆ ಕೇಂದ್ರ ಸಿದ್ಧ- ಸಚಿವ ಶೇಖಾವತ್

shekhavath
Published on

ಬೆಂಗಳೂರು: ಮೇಕೆದಾಟು ಯೋಜನೆ ಜಾರಿ ವಿಚಾರವನ್ನು ಎರಡು ರಾಜ್ಯಗಳು ಪರಸ್ಪರ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವುದು ಸೂಕ್ತ ಎಂದು ಕೇಂದ್ರ ಜಲ ಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಹೇಳಿದ್ದಾರೆ.

ಈ ವಿವಾದ ಸಿಡಬ್ಲ್ಯುಸಿ ಹಾಗೂ ಸುಪ್ರೀಂಕೋರ್ಟ್​ನಲ್ಲಿದೆ. ಈ ಹಿನ್ನೆಲೆಯಲ್ಲಿ ಇದರ ಬಗ್ಗೆ ಮಾತನಾಡುವುದು ಸೂಕ್ತವಲ್ಲ. ಎರಡು ರಾಜ್ಯಗಳು ಮಾತುಕತೆಗೆ ಆಸಕ್ತಿ ವ್ಯಕ್ತಪಡಿಸಿದರೆ ಕೇಂದ್ರ ಮಧ್ಯಪ್ರವೇಶಕ್ಕೆ ಸಿದ್ಧವಿದೆ ಎಂದು ಅವರು ಹೇಳಿದರು.

ಕೆನ್ - ಬೆತ್ವಾ ನದಿಗಳ ಜೋಡಣೆ ವಿಚಾರವಾಗಿ ಉತ್ತರ ಪ್ರದೇಶ ಹಾಗೂ ಮಧ್ಯ ಪ್ರದೇಶದ ನಡುವೆ ಸಮಸ್ಯೆ ಇತ್ತು. ಈ ಸಮಸ್ಯೆಯಿಂದ ದೀರ್ಘಾವಧಿ ನನೆಗುದಿಗೆ ಬಿದ್ದಿತ್ತು. ಉಭಯ ರಾಜ್ಯಗಳು ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಂಡಿತ್ತು. ಇದರಿಂದ ಬರ ಪೀಡಿತ ಬುಂದೇಲ್ ಖಂಡ ಪ್ರದೇಶದ ನೀರಿನ‌ ದಾಹ ತಣಿಸಲು ನದಿ‌ ಜೋಡಣೆ ನೆರವಾಯಿತು. ಇದೇ ಮಾದರಿಯನ್ನು ತಮಿಳುನಾಡು ಹಾಗೂ ಕರ್ನಾಟಕ ಅನುಸರಿಸರೆ ಸಮಸ್ಯೆ ಬಗೆಹರಿಸಬಹುದು ಎಂದು ಸಚಿವರು ಅಭಿಪ್ರಾಯ ಪಟ್ಟರು.

55 ವರ್ಷ ಕಾಂಗ್ರೆಸ್ ಅಧಿಕಾರದಲ್ಲಿ ಇತ್ತು‌. ಆದರೆ ಉತ್ತಮವಾಗಿ ಕೆಲಸ ಮಾಡಿದ್ದರೆ ಈ ಸಮಸ್ಯೆ ಉದ್ಭವವಾಗುತ್ತಿರಲಿಲ್ಲ. ಈ ಕಾರಣಕ್ಕಾಗಿ ಕಾಂಗ್ರೆಸ್ ಗೆ ಈ ವಿಚಾರವಾಗಿ ಹೋರಾಟ ಮಾಡುವ ನೈತಿಕತೆ‌ ಇಲ್ಲ. ಬಿಜೆಪಿಯಿಂದ ಮಾತ್ರ ಈ ಸಮಸ್ಯೆಗೆ ಪರಿಹಾರ ಸಾಧ್ಯ ಎಂದು ಅವರು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net