More

    VIDEO: ಯೂಕ್ರೇನ್​ನಿಂದ ತಪ್ಪಿಸಿಕೊಳ್ತಿರುವಾಗ ಗುಂಡು ಭುಜ ಹೊಕ್ಕಿತು, ಕಾಲು ಮುರಿದಿದೆ- ವಿದ್ಯಾರ್ಥಿಯ ವಿಡಿಯೋ ವೈರಲ್

    ಕೀವ್: ಯೂಕ್ರೇನ್​ನಿಂದ ಗಡಿ ತಲುಪಿರುವ ಭಾರತೀಯ ವಿದ್ಯಾರ್ಥಿಗಳನ್ನು ನೆರೆಯ ದೇಶಗಳ ಮೂಲಕ ‘ಆಪರೇಷನ್ ಗಂಗಾ’ ಯೋಜನೆಯ ಮೂಲಕ ಭಾರತಕ್ಕೆ ಕರೆತರಲಾಗುತ್ತಿದೆ. ಯೂಕ್ರೇನ್​ನಲ್ಲಿ 20,000 ಭಾರತೀಯರಿದ್ದರು. ಈ ಪೈಕಿ 17,000 ಜನ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರವಾಗಿದ್ದಾರೆ. 6,000 ಜನ ತವರಿಗೆ ಮರಳಿದ್ದು, 1,700 ಜನ ಉಕ್ರೇನ್ ತೊರೆಯಲು ಕಾಯುತ್ತಿದ್ದಾರೆ ಎನ್ನಲಾಗಿದೆ. ಇದರ ನಡುವೆಯೇ ಕನ್ನಡಿಗ ನವೀನ್ ಗುಂಡೇಟಿಗೆ ಪ್ರಾಣ ಕಳೆದುಕೊಂಡಿದ್ದು, ಇದೀಗ ದೆಹಲಿಯ ವಿದ್ಯಾರ್ಥಿ ಹರ್ಜೋತ್ ಸಿಂಗ್​ಗೆ ಗುಂಡು ತಗುಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

    ದೆಹಲಿ ಬಳಿಯ ಛತ್ತರ್‌ಪುರದ ವಿದ್ಯಾರ್ಥಿಯಾಗಿರುವ ಹರ್ಜೋತ್​, ಎನ್​ಡಿಟಿವಿ ಜತೆ ಭಯಾನಕ ಅನುಭವವನ್ನು ವಿದ್ಯಾರ್ಥಿ ಹಂಚಿಕೊಂಡಿದ್ದಾನೆ. ಕೀವ್‌ನಿಂದ (ಯೂಕ್ರೇನ್​ ರಾಜಧಾನಿ) ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೆ. ಆಗ ಅಲ್ಲಿ ಗುಂಡಿನ ದಾಳಿ ಆಗುತ್ತಿತ್ತು. ಒಂದು ಗುಂಡು ನನ್ನ ಭುಜ ಹೊಕ್ಕಿತು. ಅಲ್ಲಿಯೇ ಬಿದ್ದುಬಿಟ್ಟೆ. ಆಸ್ಪತ್ರೆಗೆ ಕರತರಲಾಯಿತು. ಗುಂಡನ್ನು ಹೊರಕ್ಕೆ ತೆಗೆದಿದ್ದಾರೆ. ಆದರೆ ತಪ್ಪಿಸಿಕೊಳ್ಳುವ ರಭಸದಲ್ಲಿ ನನ್ನ ಒಂದು ಕಾಲು ಮುರಿದು ಹೋಗಿದೆ ಎಂದಿದ್ದಾನೆ.

    ‘ನಾನು ಅಧಿಕಾರಿಗಳಿಗೆ ಕರೆ ಮಾಡುತ್ತಲೇ ಇದ್ದೆ. ನಾನು ಎಲ್ವಿವ್‌ಗೆ ಹೋಗಬೇಕಿತ್ತು. ಅಲ್ಲಿಗೆ ಹೋಗಿದ್ದರೆ ಭಾರತಕ್ಕೆ ಬರಲು ಅನುಕೂಲ ಆಗಿತ್ತು. ಆದರೆ ಎಲ್ವಿವ್​ಗೆ ಹೋಗುವ ಸಂದರ್ಭದಲ್ಲಿ ಈ ಭಯಾನಕ ಘಟನೆ ನಡೆದಿದೆ. ನನ್ನಂತೆಯೇ ತಮ್ಮಂತೆ ಹಲವು ಜನರು ಕೀವ್​ನಲ್ಲಿ ಸಿಕ್ಕಿಬಿದ್ದಿದ್ದಾರೆ ಎಂದು ವಿದ್ಯಾರ್ಥಿ ಹೇಳಿದ್ದಾನೆ.

    ‘ನಾನು ರಾಯಭಾರ ಕಚೇರಿಯ ಅಧಿಕಾರಿಗಳನ್ನು ಸಂಪರ್ಕಿಸಿದೆ. ನನ್ನನ್ನು ಎಲ್ವಿವ್‌ಗೆ ಕರೆದೊಯ್ಯಲು ಅವರು ಸೌಲಭ್ಯವನ್ನು ಒದಗಿಸಬಹುದೇ ಎಂದು ಕೇಳಿದೆ. ಆದರೆ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಅನೇಕರು ತಮ್ಮ ಮನೆಗಳಲ್ಲಿ ಬಂಧಿಯಾಗಿದ್ದಾರೆ. ಏನಾಗುತ್ತಿದೆ ಎಂಬುದು ಅವರಿಗೆ ತಿಳಿದಿಲ್ಲ. ನಾನು ನಿರಂತರವಾಗಿ ರಾಯಭಾರ ಕಚೇರಿಯೊಂದಿಗೆ ಮಾತನಾಡಲು ಪ್ರಯತ್ನಿಸಿದ್ದೆ. ಅವರು ಸಂಪರ್ಕಕ್ಕೆ ಸಿಕ್ಕಾಗ, ನೀವು ನಮಗಿಂತ ಮೊದಲೇ ಕೀವ್ ಬಿಟ್ಟು ಹೊರಟಿದ್ದೀರಿ. ನೀವು ಇಲ್ಲಿಯೇ ಇದ್ದು ನಮ್ಮಂತ ವಿದ್ಯಾರ್ಥಿಗಳಿಗೆ ಸಹಾಯ ಮಾಡಬೇಕಾಗಿದೆ ಎಂದು ಕೇಳಿಕೊಂಡಿದ್ದೆ’ ಎಂದು ಹರ್ಜೋತ್ ಸಿಂಗ್​ ಹೇಳಿದ್ದಾನೆ.

    ಇಲ್ಲಿದೆ ನೋಡಿ ವಿದ್ಯಾರ್ಥಿ ಹೇಳಿದ ವಿಡಿಯೋ:

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts