More

    ಕಾಲುಬಾಯಿ ರೋಗ ಲಸಿಕಾಕರಣ 26ರಿಂದ   -ಯಾವ ಜಾನುವಾರು ವಂಚಿತವಾಗದಿರಲಿ -ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಸೂಚನೆ 

    ದಾವಣಗೆರೆ: ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿ ಜಿಲ್ಲಾದ್ಯಂತ ಸೆ.26ರಿಂದ ಅಕ್ಟೋಬರ್ 25ರ ವರೆಗೆ ನಾಲ್ಕನೇ ಸುತ್ತಿನ ಕಾಲುಬಾಯಿ ರೋಗ ಲಸಿಕಾ ಕಾರ್ಯಕ್ರಮ ಆಯೋಜಿಸಲಾಗಿದೆ. ಯಾವುದೇ ಜಾನುವಾರು ಲಸಿಕೆಯಿಂದ ವಂಚಿತವಾಗದಂತೆ ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್ ಹೇಳಿದರು.
    ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಲಸಿಕಾ ಅಭಿಯಾನದ ಪೂರ್ವ ಸಿದ್ಧ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಲಸಿಕೆ ಬಹಳ ಪ್ರಮುಖವಾಗಿದೆ. ಕಾಲಮಿತಿಯಲ್ಲಿ ಎಲ್ಲಾ ಜಾನುವಾರುಗಳಿಗೆ ಲಸಿಕೆ ಲಭ್ಯವಾಗುವುದರಿಂದ ರೋಗಗಳನ್ನು ನಿಯಂತ್ರಣದಲ್ಲಿ ಇರಿಸಬಹುದು ಎಂದರು.
    ನೊಂದಾಯಿತ ಮತ್ತು ನೊಂದಾಯಿತವಲ್ಲದ ಜಾನುವಾರುಗಳಿಗೂ ಲಸಿಕೆ ಹಾಕಬೇಕು. ವಶಪಡಿಸಿಕೊಂಡಿರುವ, ಅನಧಿಕೃತ ಸಾಗಣೆಯ ರಾಸುಳೂ ಇದರಿಂದ ವಂಚಿತವಾಗದಂತೆ ಎಚ್ಚರವಹಿಸಬೇಕು. ಲಸಿಕಾಕರಣ ಬಗ್ಗೆ ರೈತರಿಗೆ ವಿಶ್ವಾಸ ಮೂಡಿಸುವಂತೆಯೂ ಸೂಚನೆ ನೀಡಿದರು.
    ಜಾನುವಾರು ಸಂಖ್ಯೆ ಹೆಚ್ಚಳಕ್ಕೆ ಕ್ರಮ ವಹಿಸಿ;
    ಜಿಲ್ಲೆಯಲ್ಲಿ 19 ಲಕ್ಷ ಜನಸಂಖ್ಯೆ ಇದೆ. ಹಸು, ಎಮ್ಮೆ, ಕುರಿ, ಮೇಕೆ ಸೇರಿ ಜಾನುವಾರುಗಳ ಸಂಖ್ಯೆ ಸುಮಾರು 7 ಲಕ್ಷದಷ್ಟಿದೆ. ಈ ಸಂಖ್ಯೆ ಹೆಚ್ಚಾದಷ್ಟು ಮಣ್ಣಿನ ಫಲವತ್ತತೆ ಹೆಚ್ಚಿ ಜನರ ಆರೋಗ್ಯವೂ ಉತ್ತಮವಾಗಿರಲಿದೆ. ಜನಸಂಖ್ಯೆಗಿಂತಲೂ ಜಾನುವಾರುಗಳ ಸಂಖ್ಯೆ ಹೆಚ್ಚಿದಲ್ಲಿ ಸ್ವಾಸ್ಥೃ ಸಮಾಜ ಕಾಣಬಹುದು.
    ಜಾನುವಾರು ಸಾಕಾಣಿಕೆ ಹೆಚ್ಚಿದಂತೆ ಜನರ ಆದಾಯ ಮಟ್ಟವು ಏರಿಕೆಯಾಗಲಿದೆ. ಹೀಗಾಗಿ ಜನರು ಕುರಿ, ಮೇಕೆ ಸಾಕಣೆ, ಹಸು, ಎಮ್ಮೆ ಸಾಕಾಣಿಕೆ, ಹೈನುಗಾರಿಕೆಗೆ ಒತ್ತು ನೀಡಿದಲ್ಲಿ ಜಿಲ್ಲೆಯ ಆರ್ಥಿಕಾಭಿವೃದ್ಧಿಗೆ ಕೈಜೋಡಿಸಿದಂತಾಗಲಿದೆ ಎಂದು ಹೇಳಿದರು.
    ಗಂಜಲು ಮತ್ತು ಸಗಣಿಯಿಂದ ಯೂರಿಯಾ ರೀತಿ ಗೊಬ್ಬರ ತಯಾರಿಸಿ ರೈತರಿಗೆ ನೀಡುವ ನಿಟ್ಟಿನಲ್ಲಿ ಸಂಶೋಧನೆ ಮಾಡಬೇಕು. ಇದರಿಂದ ರೈತರಿಗೆ ಹೆಚ್ಚು ಅನುಕೂಲವಾಗಲಿದೆ. ಇಂಥ ಗೊಬ್ಬರವನ್ನು ರೈತರು ಸುಲಭವಾಗಿ ಜಮೀನುಗಳಲ್ಲಿ ಹಾಕುವಂತೆ ಆದಲ್ಲಿ ಹೆಚ್ಚು ಜನಪ್ರಿಯವಾಗಲಿದೆ ಎಂದರು.
    ಸಭೆಯಲ್ಲಿ ಕಾಲುಬಾಯಿ ರೋಗದ ಕುರಿತಂತೆ ಮಾಹಿತಿಯುಳ್ಳ ಭಿತ್ತಿಪತ್ರ ಮತ್ತು ಕರಪತ್ರವನ್ನು ಬಿಡುಗಡೆ ಮಾಡಲಾಯಿತು. ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕ ಡಾ. ಚಂದ್ರಶೇಖರ್ ಸುಂಕದ್, ಪಾಲಿ ಕ್ಲಿನಿಕ್ ಉಪನಿರ್ದೇಶಕ ಡಾ.ವೀರೇಶ್, ಕೆಎಂಎಫ್ ನಿರ್ದೇಶಕ ಡಾ.ಎಸ್.ಎಂ.ಮೂರ್ತಿ, ಚನ್ನಗಿರಿ ಪಶುವೈದ್ಯಾಧಿಕಾರಿ ಡಾ. ಅಶೋಕ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts