ಕೈಕೊಟ್ಟ ಪ್ರೇಯಸಿ: ಸಿಕ್ಕಸಿಕ್ಕ ಕಾರು ಒಡೆದು ಸೇಡು ತೀರಿಸಿಕೊಂಡ ಪಾಗಲ್​ ಪ್ರೇಮಿ!

ಸಿಕ್ಕಸಿಕ್ಕ ಕಾರನ್ನು ಒಡೆದ ಭಗ್ನ ಪ್ರೇಮಿ! - youtube
Published on

ಬೆಂಗಳೂರು: ಲವ್ ಬ್ರೇಕಪ್ ಆದ ಕಾರಣಕ್ಕೆ ಪ್ರೇಮಿಯೊಬ್ಬ ಸಿಟ್ಟಿನಿಂದ ಸಿಕ್ಕ ಸಿಕ್ಕ ಕಾರು ಒಡೆದು ಹಾಕಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಇಲ್ಲಿಯ ಮಹಾಲಕ್ಷ್ಮಿಲೇಔಟ್ ಸತೀಶ್ (26) ಎಂಬಾತ ಈ ಕೃತ್ಯ ಎಸಗಿದ್ದಾನೆ. ತನ್ನ ಪ್ರೇಮ ಭಗ್ನವಾಯಿತು ಎನ್ನುವ ಕಾರಣಕ್ಕೆ ಕುಡಿದುಬಂದ ಸತೀಶ್​ ನಿನ್ನೆ ತಡರಾತ್ರಿ 1-30 ರ ಸುಮಾರಿಗೆ ಹೊರಗೆ ನಿಲ್ಲಿಸಿರುವ ಕಾರುಗಳನ್ನು ಒಡೆದು ಪುಡಿ ಮಾಡಿದ್ದಾನೆ.

ಬಸವೇಶ್ವರ ನಗರ ಹಾಗೂ ಮಹಾಲಕ್ಷ್ಮಿ ಲೇಔಟ್ ಎರಡು ಕಡೆಗಳಲ್ಲಿ ಈತನ ಈ ಕೃತ್ಯ ನಡೆದಿದೆ. ಬಸವೇಶ್ವರನಗರದಲ್ಲಿ ಐದು ಕಾರುಗಳು ಹಾಗೂ ಮಹಾಲಕ್ಷ್ಮಿ ಲೇಔಟ್​ನಲ್ಲಿ ಎರಡು ಕಾರುಗಳ ಕಿಟಕಿ ಗಾಜುಗಳು ಜಖಂಗೊಂಡಿವೆ. ಬಸವೇಶ್ವರ ನಗರ ಪೊಲೀಸರಿಂದ ಆರೋಪಿಯನ್ನು ಬಂಧಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net