

ಚಾಮರಾಜನಗರ: ರಂಜಾನ್ ಹಬ್ಬದ ದಿನವೇ ಎರಡು ಮುಸ್ಲಿಂ ಗುಂಪುಗಳ ನಡುವೆ ಘರ್ಷಣೆ ಉಂಟಾದ ಘಟನೆ ಚಾಮರಾಜನಗರದಲ್ಲಿ ಕೊಳ್ಳೇಗಾಲ ಪಟ್ಟಣದ ಸಾಮಂದಗೇರಿಯಲ್ಲಿ ನಡೆದಿದೆ.
ಹಾಲಿ ಹಾಗೂ ಮಾಜಿ ನಗರಸಭಾ ಸದಸ್ಯರ ಬೆಂಬಲಿಗರ ನಡುವೆ ಮಾರಾಮಾರಿಯಾಗಿದ್ದು, ಎರಡು ಕಡೆಯ 12 ಜನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ನಗರಸಭಾ ಹಾಲಿ ಸದಸ್ಯ ನಾಸೀರ್ ಷರೀಫ್ (ಬಬ್ಲು) ಹಾಗೂ ಮಾಜಿ ಸದಸ್ಯ ಕಿಜರ್ ಬೆಂಬಲಿಗರ ನಡುವೆ ಬಡಿದಾಟ ನಡೆದಿದೆ. ಮಸೀದಿಯಲ್ಲಿ ಪ್ರಾರ್ಥನೆ ಮುಗಿಸಿ ಬರುವ ವೇಳೆ ಎರಡು ಗುಂಪುಗಳ ನಡುವೆ ಕಾದಾಟ ಶುರುವಾಗಿದೆ.
ಕಿಜರ್ ಹಾಗೂ ನಾಸೀರ್ ಷರೀಫ್ ಬಡಿದಾಟದಲ್ಲಿ ಪೆಟ್ಟು ತಿಂದು ಆಸ್ಪತ್ರೆಗೆ ಸೇರಿದ್ದಾರೆ. ಈ ಸಂದರ್ಭದಲ್ಲಿ ಕಿಜರ್ ಬೆಂಬಲಿಗರು ಧರಣಿ ಕುಳಿತಿರುವ ಘಟನೆ ನಡೆದಿದೆ. ಧರಣಿ ಕೈಬಿಡುವಂತೆ ಪೊಲೀಸರು ಮನವೊಲಿಸಿದರು. ಮುಸ್ಲಿಂ ಬಡಾವಣೆಗಳಲ್ಲಿ ಪೋಲಿಸರು ಕಟ್ಟೆಚ್ಚರ ವಹಿಸಿದ್ದಾರೆ.