ತಾಯಿಯ ಅಕ್ರಮ ಸಂಬಂಧ: ಪ್ರೇಮಿಯ ಮರ್ಮಾಂಗ ಬ್ಲೇಡ್​ನಿಂದ ಕತ್ತರಿಸಿದ ಮಗಳು!

illegal
Published on

ಗುಂಟೂರು (ಆಂಧ್ರಪ್ರದೇಶ): ತಾಯಿ ಪರಪುರುಷನ ಜತೆ ಅಕ್ರಮ ಸಂಬಂಧ ಹೊಂದಿರುವುದನ್ನು ನೋಡಿ ಸಹಿಸಿಕೊಳ್ಳಲು ಆಗದ ಮಗಳೊಬ್ಬಳು ತಾಯಿಯ ಪ್ರೇಮಿಯ ಮರ್ಮಾಂಗವನ್ನೇ ಕಟ್​ ಮಾಡಿರುವ ಘಟನೆ ಆಂಧ್ರಪ್ರದೇಶದ ಬಪಟ್ಲಾ ಜಿಲ್ಲೆಯ ತುಮ್ಮಲಪಾಲಂನಲ್ಲಿ ನಡೆದಿದೆ.

ರಾಮಚಂದ್ರ ರೆಡ್ಡಿ ಎಂಬಾತ ತನ್ನ ಮರ್ಮಾಂಗವನ್ನು ಕಳೆದುಕೊಂಡು ಹಿಂಸೆ ಅನುಭವಿಸುವಂತಾಗಿದೆ. ರೆಡ್ಡಿ ಎರಡು ವರ್ಷಗಳ ಹಿಂದೆ ಗುಂಟೂರು ಜಿಲ್ಲೆ ತೆನಾಲಿಯಲ್ಲಿ ತಂಗಿದ್ದ ವೇಳೆ ಇಲ್ಲಿಯಬ ಐತಾನಗರದ ಮಹಿಳೆಯ ಪರಿಚಯವಾಗಿತ್ತು. ರೈಲ್ವೆ ನಿಲ್ದಾಣದಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಈತನಿಗೆ ಮಹಿಳೆಯ ಪರಿಚಯವಾಗಿತ್ತು. ಪರಿಚಯವು ಪ್ರೇಮಕ್ಕೆ ತಿರುಗಿ ಇಬ್ಬರ ನಡುವೆ ದೈಹಿಕ ಸಂಪರ್ಕ ಏರ್ಪಟ್ಟಿತ್ತು. ಇಬ್ಬರೂ ಮದ್ಯ ಸೇವಿಸುತ್ತಿದ್ದರು ಎನ್ನಲಾಗಿದೆ.

ಅದಾಗಲೇ ಮದುವೆಯಾಗಿ ಮಗಳನ್ನು ಹೊಂದಿದ್ದಳು ಮಹಿಳೆ. ಮಗಳಿಗೆ ತನ್ನ ತಾಯಿ ಈ ರೀತಿ ಅಕ್ರಮ ಸಂಬಂಧ ಹೊಂದಿರುವುದು ಇಷ್ಟವಿರಲಿಲ್ಲ. ಪದೇ ಪದೇ ಈ ವಿಷಯವಾಗಿ ತಾಯಿ-ಮಗಳ ಜತೆ ಜಗಳವಾಗುತ್ತಿತ್ತು. ಆದರೆ ಸಮಸ್ಯೆ ಮಾತ್ರ ಬಗೆಹರಿದಿರಲಿಲ್ಲ.

ನಿನ್ನೆ ರಾತ್ರಿ ಮಹಿಳೆ ಮತ್ತು ಪ್ರಿಯಕರ ಗಾಢ ನಿದ್ದೆಯಲ್ಲಿ ಇದ್ದಾಗ ಮಗಳು ನಿಧಾನವಾಗಿ ಹೋಗಿ ಆತನ ಮರ್ಮಾಂಗವನ್ನು ಕತ್ತರಿಸಿದ್ದಾಳೆ.ನೋವಿನಿಂದ ಚೀರಿಕೊಂಡ ರೆಡ್ಡಿಯನ್ನು ಸಮೀಪದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಹೆಚ್ಚಿನ ಚಿಕಿತ್ಸೆ ಅಗತ್ಯ ಇದ್ದುದರಿಂದ ಬೇರೊಂದು ಕಡೆ ಸ್ಥಳಾಂತರಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net