ರಾಕ್ಷಸರಾದ ಗಂಡ- ಅತ್ತೆಯ ಚಿತ್ರಹಿಂಸೆ ಎಳೆಎಳೆಯಾಗಿ ಬಿಚ್ಚಿಟ್ಟು ವಿಡಿಯೋ ಮಾಡಿ ಗೃಹಿಣಿ ಆತ್ಮಹತ್ಯೆ...!

suicide
Published on

ಬೆಂಗಳೂರು: ವರದಕ್ಷಿಣೆ ತರುವಂತೆ ದಿನನಿತ್ಯವೂ ಪೀಡಿಸುತ್ತಿದ್ದ ಪತಿ ಮತ್ತು ಅತ್ತೆ ಮನೆಯ ಕುಟುಂಬದ ಸದಸ್ಯರಿಂದ ಬೇಸತ್ತು ಗೃಹಿಣಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಸಾಯುವ ಮುನ್ನ ಸೆಲ್ಫಿ ಮಾಡಿರುವ 26 ವರ್ಷದ ದೀಪಿಕಾ ಆತ್ಮಹತ್ಯೆಗೆ ಶರಣಾಗಿದ್ದಾರೆ.

ನಿತ್ಯ ಮನಬಂದಂತೆ ಹೊಡೆದು ಪತಿ ಪೀಡಿಸುತ್ತಿದ್ದ ಜತೆಗೆ ಗಂಡ-ಅತ್ತೆ ರಾಕ್ಷಸ ರೂಪ ತೋರಿದ್ದರು. ಇದರಿಂದ ಮನನೊಂದು ದೀಪಿಕಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಯುವ ಮುನ್ನ ಸೆಲ್ಫಿ ಮಾಡಿಟ್ಟಿರುವ ದೀಪಿಕಾ ಪತಿ ಜೈಕುಮಾರ್ ಹಾಗೂ ಅತ್ತೆ ಮಾಡುತ್ತಿರುವ ಚಿತ್ರ ಹಿಂಸೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ದೀಪಿಕಾರಿಗೆ ತಂದೆ ತಾಯಿ ಇರಲಿಲ್ಲ. ಪತಿ-ಅತ್ತೆ ಕಿರುಕುಳಕ್ಕೆ ಬೇಸತ್ತು ಅಣ್ಣನ ಮನೆಗೆ ಹೋಗಿದ್ದರು. ತರಿಕೆರೆಯಲ್ಲಿದ್ದ ಅಣ್ಣನ ಮನೆಯಿಂದ ನಾಲ್ಕು ವರ್ಷ ಮಗುವಿನ ಜತೆ ಮೂರು ದಿನಗಳ ಹಿಂದೆ ಹೋಗಿದ್ದರು.

ಆದರೆ ಬೆಳಗಾಗುವಷ್ಟರಲ್ಲಿಯೇ ಮಗು ಸತ್ತು ಹೋಗಿತ್ತು. ಈ ಬಗ್ಗೆ ಪೊಲೀಸರಿಗೆ ದೂರು ನೀಡಲು ಹೋಗಿದ್ದರು ದೀಪಿಕಾ. ಆದರೆ ಮಾರ್ಗಮಧ್ಯೆಯೇ ಅವರು ಎಲ್ಲೋ ಹೋಗಿಬಿಟ್ಟರು. ತಂಗಿ ಕಾಣೆಯಾಗಿರುವ ಬಗ್ಗೆ ಅಣ್ಣ ಪ್ರದೀಪ್‌ ಪೊಲೀಸರಿಗೆ ದೂರು ಕೊಟ್ಟಿದ್ದರು. ಪೊಲೀಸರು ಹುಡುಕಾಟ ನಡೆಸಿದಾಗ ದೀಪಿಕಾ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಮದುವೆಯಾದಾಗಿನಿಂದಲೂ ಹಿಂಸೆ ಅನುಭವಿಸುತ್ತಿದ್ದೇನೆ. ಯಾವಾಗ್ಲೂ ದುಡ್ಡು ದುಡ್ಡು ಎಂದು ಚಿತ್ರಹಿಂಸೆ ಕೊಡುತ್ತಿದ್ದಾನೆ. ಒಂದು ತುತ್ತು ಅನ್ನಕ್ಕೂ ಪರದಾಡಿಸುತ್ತಿದ್ದ, ಮಗುವನ್ನೂ ಎತ್ತಿ ಎತ್ತಿ ಬೀಸಾಕುತ್ತಿದ್ದ. ನನಗೆ ಅಪ್ಪ- ಅಮ್ಮ ಇಲ್ಲ. ನಾನು ಎಲ್ಲಿ ಹೋಗಲಿ? ಎಷ್ಟಾದರೂ ಟಾರ್ಚರ್‌ ಕೊಡಲಿ ಎಂದು ಸುಮ್ಮನಾಗುತ್ತಿದ್ದೆ. ಆದರೆ ಮಗುವಿಗೆ ಚಿತ್ರಹಿಂಸೆ ಕೊಡುವುದನ್ನು ನಾನು ನೋಡಲಾರೆ. ಅದಕ್ಕಾಗಿ ತವರು ಮನೆಗೆ ಬಂದೆ. ಆದರೆ ಅವರಿಗೂ ತೊಂದರೆಯಾಯಿತು. ಅವರದ್ದು ಏನೂ ತಪ್ಪಿಲ್ಲ. ಈಗ ಮಗುವನ್ನೂ ಕಳೆದುಕೊಂಡಿದ್ದೇನೆ. ನನ್ನ ಗಂಡನಿಗೆ ಸರಿಯಾದ ಶಿಕ್ಷೆ ಆಗಬೇಕು. ಇಷ್ಟೇ ನಾನು ಹೇಳುವುದು... ಎಂದು ವಿಡಿಯೋದಲ್ಲಿ ದೀಪಿಕಾ ಹೇಳಿದ್ದಾರೆ.

ದೀಪಿಕಾ ಮಾಡಿರುವ ನೋವಿನ ವಿಡಿಯೋ ಇಲ್ಲಿದೆ ನೋಡಿ...

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net