ದಸರಾಕ್ಕಿಲ್ಲ 15 ದಿನಗಳ ರಜೆ: ಸರ್ಕಾರದಿಂದ ಹೊರಟಿದೆ ಈ ಆದೇಶ- ಪ್ರವಾಸಕ್ಕೆ ಪ್ಲ್ಯಾನ್​ ಮಾಡಿಕೊಂಡಿದ್ರೆ ಹುಷಾರ್​...

dasara
Published on

ಬೆಂಗಳೂರು: ಇನ್ನೇನು ದಸರಾ ಹಬ್ಬಕ್ಕೆ ಕೆಲವೇ ದಿನಗಳು ಬಾಕಿ ಇವೆ. ದಸರಾ ಹಬ್ಬ ಎಂದಾಕ್ಷಣ ಮಕ್ಕಳಿಗೆ ರಜೆಯ ಖುಷಿ. ಕೆಲವು ಅಪ್ಪ-ಅಮ್ಮಂದಿರಿಗೆ ಟೂರ್​ ಪ್ಲ್ಯಾನ್​ ಮಾಡಿಕೊಳ್ಳುವ ಸಮಯ.

ಆದರೆ 15 ದಿನ ರಜೆ ಸಿಗುತ್ತದೆ ಎಂದು ಟೂರ್​ ಪ್ಲ್ಯಾನ್​ ಮಾಡಿಕೊಳ್ಳಲು ಹೊರಟಿರುವಿರಾ? ಹಾಗಿದ್ದರೆ ಈ ಸುದ್ದಿಯನ್ನೊಮ್ಮೆ ನೋಡಿ. ಏಕೆಂದರೆ ಈ ಬಾರಿ ಶಾಲಾ ಮಕ್ಕಳಿಗೆ ದಸರಾ ರಜೆಯನ್ನು ಕಟ್​ ಮಾಡಲಾಗಿದೆ.

ಪ್ರತಿ ವರ್ಷ ದಸರಾ ಹಬ್ಬಕ್ಕೆ 14 ದಿನ ಶಾಲಾ ಮಕ್ಕಳಿಗೆ ಶಿಕ್ಷಣ ಇಲಾಖೆ ರಜೆ ನೀಡುತ್ತಿತ್ತು. ಆದರೆ ಈ ಬಾರಿ ರಜೆಯಲ್ಲಿ ಕಡಿತವಾಗಿದೆ. ಬದಲಿಗೆ ಒಂದು ವಾರ ಮಾತ್ರ ಶಾಲೆಗಳಿಗೆ ರಜೆ ಇರಲಿದೆ. ಇದಕ್ಕೆ ಕಾರಣ, ಕೋವಿಡ್​ನಿಂದಾಗಿ ಶಾಲೆಗಳು ಆರಂಭವಾಗಲು ವಿಳಂಬವಾದ ಹಿನ್ನೆಲೆಯಲ್ಲಿ ಹಲವು ಶಾಲೆಗಳಲ್ಲಿ ಇನ್ನೂ ಸಿಲೇಬಸ್​ಗಳು ಮುಗಿದಿಲ್ಲ.

ಸಿಲೇಬಸ್​ ಮುಗಿಸಿಲ್ಲದ ಬಗ್ಗೆ ಹಲವು ಶಾಲೆಗಳು ಹೇಳಿದ್ದ ಹಿನ್ನೆಲೆಯಲ್ಲಿ, ದಸರಾ ಹಬ್ಬಕ್ಕೆ ರಜೆಗಳು ಕಡಿತ ಮಾಡಿರುವುದಾಗಿ ಶಿಕ್ಷಣ ಇಲಾಖೆ ಹೇಳಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net