More

    ಕರ್ನಾಟಕದ ಹೊರಗೂ ಕಾಲಿಟ್ಟ ಪಿಎಸ್​ಐ ನೇಮಕಾತಿ ಗೋಲ್​ಮಾಲ್​: ಆರು ರಾಜ್ಯಗಳಲ್ಲಿ ಸಿಬಿಐ ದಾಳಿ

    ನವದೆಹಲಿ: ಕರ್ನಾಟಕದಲ್ಲಷ್ಟೇ ಸದ್ದು ಮಾಡುತ್ತಿರುವ ಪಿಎಸ್​ಐ ನೇಮಕಾತಿ ಅಕ್ರಮ ಇದೀಗ ರಾಜ್ಯದ ಹೊರಗೂ ಕಾಲಿಟ್ಟಿದೆ. ಈ ವಿವಾದಕ್ಕೆ ಸಂಬಂಧಿಸಿದಂತೆ ಸಿಬಿಐ ಕರ್ನಾಟಕ ಸೇರಿದಂತೆ ಜಮ್ಮು-ಕಾಶ್ಮೀರ, ಹರಿಯಾಣ, ಗುಜರಾತ್​, ನವದೆಹಲಿ, ಉತ್ತರ ಪ್ರದೇಶಗಳ ವಿವಿಧ ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸುತ್ತಿದೆ.

    ಈ ಆರು ರಾಜ್ಯಗಳ 33 ಸ್ಥಳಗಳಲ್ಲಿ ಸಿಬಿಐ ಅಧಿಕಾರಿಗಳು ಶೋಧಕಾರ್ಯ ನಡೆಸುತ್ತಿದೆ. ಕರ್ನಾಟಕ ಮಾತ್ರವಲ್ಲದೇ ಇತರೆಡೆಗಳಲ್ಲಿಯೂ ಈ ಹಗರಣ ನಡೆದಿರುವುದಾಗಿ ತಿಳಿದುಬಂದ ಹಿನ್ನೆಲೆಯಲ್ಲಿ, ಕರ್ನಾಟಕದ ಬೆಂಗಳೂರು; ಹರಿಯಾಣದ ಕರ್ನಾಲ್​, ಮಹೇಂದರ್​ಗಢ, ರೇವಾರಿ; ಗುಜರಾತ್​ನ ಗಾಂಧಿನಗರ; ಉತ್ತರಪ್ರದೇಶದ ಗಾಜಿಯಾಬಾದ್​ ಹಾಗೂ ನವದೆಹಲಿಯಲ್ಲಿ ಸಿಬಿಐ ಶೋಧಕಾರ್ಯ ನಡೆದಿದೆ.

    ಲಭ್ಯವಾಗಿರುವ ಮಾಹಿತಿ ಪ್ರಕಾರ, ಜಮ್ಮುವಿನ 14, ಶ್ರೀನಗರದ ಒಂದು, ಹರಿಯಾಣದ 13, ಗಾಂಧಿನಗರದ ಒಂದು ಮತ್ತು ಬೆಂಗಳೂರಿನಲ್ಲಿ ಒಂದು ಸೇರಿದಂತೆ 33 ಸ್ಥಳಗಳಲ್ಲಿ ಸಿಬಿಐ ದಾಳಿ ನಡೆಸುತ್ತಿದೆ ಎಂದು ತಿಳಿದು ಬಂದಿದೆ. ಕಾಶ್ಮೀರ ಸೇವಾ ಆಯೋಗದ ಮಾಜಿ ಪರೀಕ್ಷಾ ನಿಯಂತ್ರಕ ಅಶೋಕ್​ ಕುಮಾರ್​ ಅವರ ನಿವಾಸದ ಮೇಲೂ ದಾಳಿ ನಡೆಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಈ ವರ್ಷದ ಆರಂಭದಲ್ಲಿ ಇನ್​​​ಸ್ಪೆಕ್ಟರ್ ನೇಮಕಾತಿ ನಡೆಸಲಾಗಿತ್ತು. ಅದರ ಫಲಿತಾಂಶ ಜೂನ್​​ 4ರಂದು ಬಹಿರಂಗಗೊಂಡಿತ್ತು. ಇದರಲ್ಲಿ ದೊಡ್ಡ ಮಟ್ಟದ ಅಕ್ರಮ ನಡೆಸಲಾಗಿದೆ ಎಂಬ ಆರೋಪ ಕೇಳಿ ಬಂದಿದ್ದವು. ಹೀಗಾಗಿ, ತನಿಖೆ ನಡೆಸಲು ಸಿಬಿಐಗೆ ಪ್ರಕರಣ ಹಸ್ತಾಂತರ ಮಾಡಲಾಗಿದೆ. ಅಧಿಕಾರಿಗಳು ಮಹತ್ವದ ಶೋಧಕಾರ್ಯ ನಡೆಸುತ್ತಿದ್ದಾರೆ. ಇದರಲ್ಲಿ ಬೆಂಗಳೂರು ಮೂಲದ ಖಾಸಗಿ ಕಂಪೆನಿಗಳ ಅಧಿಕಾರಿಗಳು ಸೇರಿದಂತೆ ಅನೇಕರು ಭಾಗಿಯಾಗಿದ್ದು, ಅಭ್ಯರ್ಥಿಗಳಿಂದ ಹಣ ಪಡೆದುಕೊಂಡಿದ್ದಾರೆಂಬ ಆರೋಪ ಕೇಳಿ ಬಂದಿದೆ. (ಏಜೆನ್ಸೀಸ್​)

    ನಮ್​ ಇಲಾಖೆಯಲ್ಲಿ ಹಲವಾರು ಕಳ್ಳರಿದ್ದಾರೆ, ನಾನೇ ಅವರ ನಾಯಕ! ಸಚಿವನ ಮಾತಿಗೆ ಸಿಎಂ ನಿತೀಶ್​ ಕಕ್ಕಾಬಿಕ್ಕಿ

    ಕಚೇರಿಯಲ್ಲಿ ಎಲ್ರೂ ಮಾಡೋದು ಅದೇ ಕೆಲ್ಸ, ಭೇದಭಾವ ಸಹಿಸಲು ಆಗ್ತಿಲ್ಲ… ಡೆತ್​ನೋಟ್​ ಬರೆದಿಟ್ಟು ಆತ್ಮಹತ್ಯೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts