ಕೋವಿಶೀಲ್ಡ್ ಮೊದಲ ಡೋಸ್‌ ಪಡೆದಿರುವಿರಾ? 12 ವಾರಗಳ ಮೊದಲು ಎರಡನೆಯ ಡೋಸ್‌ ಬೇಡ

covishield
Published on

ಬೆಂಗಳೂರು: ಇದಾಗಲೇ ಕೋವಿಶೀಲ್ಡ್‌ನ ಮೊದಲ ಲಸಿಕೆಯನ್ನು ಪಡೆದುಕೊಂಡಿರುವವರು ಎರಡನೇ ಡೋಸ್‌ ಪಡೆಯಲು ಕನಿಷ್ಠ 12 ವಾರಗಳ ಅಂತರ ಅಗತ್ಯವಿದೆ. ಈ ಮೊದಲು ಆರರಿಂದ ಎಂಟು ವಾರಗಳ ಒಳಗೆ ಡೋಸ್‌ ಪಡೆಯಿರಿ ಎಂದು ಸೂಚಿಸಲಾಗಿತ್ತು. ಇದನ್ನೀಗ ಪರಿಷ್ಕರಣೆ ಮಾಡಲಾಗಿದೆ.

ರಾಷ್ಟ್ರೀಯ ರೋಗನಿರೋಧಕ ತಾಂತ್ರಿಕ ಸಲಹಾ ಸಮಿತಿ (ಎನ್‌ಟಿಎಜಿಐ) ಮತ್ತು ಲಸಿಕೆ ಆಡಳಿತದ ರಾಷ್ಟ್ರೀಯ ತಜ್ಞರ ಸಮಿತಿ (ಎನ್‌ಇಜಿವಿಎಸಿ) ಶಿಫಾರಸಿನ ಆಧಾರದ ಮೇಲೆ ಕೋವಿಶೀಲ್ಡ್ ಲಸಿಕೆಯ ಎರಡನೇ ಡೋಸ್ ನೀಡಿಕೆಯ ಅವಧಿಯನ್ನು ಬದಲಾಯಿಸಲಾಗಿದೆ.

ಆದ್ದರಿಂದ ಕೋವಿಶೀಲ್ಡ್‌ (COVISHIELD ) ಲಸಿಕೆಯ ಮೊದಲ ಡೋಸ್‌ ಪಡೆದುಕೊಂಡವರು ಎರಡನೆಯ ಡೋಸ್‌ ಅನ್ನು 12 ರಿಂದ 16 ವಾರದ ಒಳಗೆ ಪಡೆಯುವಂತೆ ತಿಳಿಸಲಾಗಿದೆ. ಮೊದಲ ಡೋಸ್‌ ಪಡೆದು 12 ವಾರಗಳು ಆಗದಿದ್ದರೆ ಈ ಅವಧಿಯೊಳಗೆ ಎರಡನೆಯ ಡೋಸ್‌ ಪಡೆಯುವಂತಿಲ್ಲ ಎಂದು ತಜ್ಞರು ಹೇಳಿದ್ದಾರೆ.

ಇದು ಪರಿಷ್ಕರಣೆಯ ಅವಧಿಯು ಕೋವಿಶೀಲ್ಡ್‌ ಲಸಿಕೆಗೆ ಮಾತ್ರ ಅನ್ವಯಿಸುತ್ತದೆ ಮತ್ತು ಕೋವ್ಯಾಕ್ಸೀನ್‌ (COVAXIN) ಲಸಿಕೆಗೆ ಅಲ್ಲ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net