ಸಿಡಿ ನಕಲಿ ಆದ್ಮೇಲೆ ಹೆಸರ‍್ಯಾಕೆ ಹೊರಬಂತು? ಜಾರಕಿಹೊಳಿ ವಿರುದ್ಧ ಕೈ ಕಾರ್ಯಕರ್ತರ ಪ್ರತಿಭಟನೆ

protest
Published on

ಬೆಂಗಳೂರು: ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ದೂರಿನ ಅನ್ವಯ ಕೂಡಲೇ ರಮೇಶ್ ಜಾರಕಿಹೊಳಿಯನ್ನು ಬಂಧಿಸಬೇಕೆಂದು ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರು ಭಾನುವಾರ ಪ್ರತಿಭಟನೆ ನಡೆಸಿದರು.

ಜಾರಕಿಹೊಳಿ ವಿರುದ್ಧ ಪ್ರಕರಣ ದಾಖಲಾಗಿದ್ದರೂ ಈ ವರೆಗೂ ಪೊಲೀಸರು ಬಂಧಿಸುವ ಪ್ರಯತ್ನ ನಡೆಸಿಲ್ಲ ಹಾಗೂ ವಿಚಾರಣೆಗೂ ಒಳಪಡಿಸಿಲ್ಲ. ಆದ್ದರಿಂದ ನ್ಯಾಯ ಸಿಗುವ ಸಾಧ್ಯತೆ ಕಡಿಮೆ ಇರುವುದರಿಂದ ಮಹಿಳೆಗೆ ಸೂಕ್ತ ರಕ್ಷಣೆ ಸಿಗುತ್ತಿಲ್ಲ ಎಂದು ಧರಣಿ ನಿರತರು ಆರೋಪಿಸಿದರು.

ಮಾಧ್ಯಮಗಳ ಮುಂದೆ ವೀರಾವೇಶವಾಗಿ ಮಾತನಾಡಿರುವ ರಮೇಶ್ ಜಾರಕಿಹೊಳಿ ನಕಲಿ ಸೀಡಿ ಎಂದ ಮೇಲೆ ಯುವತಿಯನ್ನ ಹೆಸರನ್ನು ಪ್ರಸ್ತಾಪಿಸುವ ಅವಶ್ಯಕತೆ ಏಕೆ ಬಂತು ಎಂದು ಪ್ರಶ್ನಿಸಿದರು.

ಸರ್ಕಾರ ಈ ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸುತ್ತಿದೆ ಹಾಗೂ ಪಕ್ಷದ ನಾಯಕರು ರಾಜಕೀಯಗೊಳಿಸಲು ಯತ್ನಿಸಿದೆ ಎಂದು ಆಪಾದಿಸಿದರು.

ಬೆಂಗಳೂರು ನಗರ ಕಾಂಗ್ರೆಸ್ ಪ್ರಚಾರ ಸಮಿತಿ ಪ್ರಮುಖರಾದ ಎಸ್. ಮನೋಹರ್, ಜಿ. ಜನಾರ್ದನ್, ಪ್ರಕಾಶ, ಆದಿತ್ಯ, ಉಮೇಶ್, ಚಂದ್ರಶೇಖರ್, ಪುಟ್ಟರಾಜು, ಶಶಿಭೂಷಣ್ ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net