‘ಯಾವುದ್ರೀ ಲವ್‌, ಯಾವುದ್ರೀ ಜಿಹಾದ್‌? ಹುಚ್ಮುಂಡೆ ಮದುವೇಲಿ... ಅನ್ನೋ ಹಾಗೆ ಕಿರುಚಾಡುದ್ಯಾಕೆ?’

ibrahim
Published on

ಬೆಂಗಳೂರು: ಇಡೀ ದೇಶಾದ್ಯಂತ ಲವ್‌ ಜಿಹಾದ್‌ ಭಾರಿ ಸದ್ದು ಮಾಡುತ್ತಿದೆ. ಇದರಿಂದಾಗಿ ಮತಾಂತರ ನಿಷೇಧ ಕಾಯ್ದೆಗೆ ಒತ್ತಾಯ ಹೆಚ್ಚುತ್ತಿದೆ. ಪ್ರೀತಿ-ಪ್ರೇಮದ ಹೆಸರಿನಲ್ಲಿ ಹಿಂದೂ ಹೆಣ್ಣುಮಕ್ಕಳನ್ನು ಬಲೆಗೆ ಬೀಳಿಸಿ ನಂತರ ಅವರನ್ನು ಮತಾಂತರಗೊಳಿಸಿ ನೀಡಬಾರದ ಚಿತ್ರಹಿಂಸೆ ನೀಡಿರುವ ಸಾಕಷ್ಟು ಉದಾಹರಣೆಗಳು ಬೆಳಕಿಗೆ ಬಂದಿವೆ.

ಈ ಮಧ್ಯೆಯೇ ಶಾಸಕ ಸಿ.ಎಂ.ಇಬ್ರಾಹಿಂ ಮತಾಂತರ, ಲವ್‌ ಜಿಹಾದ್‌ ಇಲ್ಲವೇ ಇಲ್ಲ ಎಂಬಂತೆ ಮಾತನಾಡಿ, ಮತಾಂತರ ನಿಷೇಧ ಕಾಯ್ದೆಯ ವಿರುದ್ಧ ಕಿಡಿ ಕಾರಿದ್ದಾರೆ. ಮದುವೆಯಾಗೋರು ಲವ್ ಇಲ್ದೇನೇ ಮದುವೆ ಆಗ್ತಾರಾ? ಯಾವುದ್ರೀ ಲವ್, ಯಾವುದ್ರೀ ಜಿಹಾದ್? ಎಂದು ಪ್ರಶ್ನಿಸಿದ್ದಾರೆ.

ದೇಶದಲ್ಲಿ ಏನೇನೋ ಸಮಸ್ಯೆಗಳಿವೆ, ಅದನ್ನು ಬಿಟ್ಟು ಲವ್‌ ಜಿಹಾದ್‌, ಮತಾಂತ ನಿಷೇಧ ಕಾಯ್ದೆ ಅಂತ ಅದರ ಬೆನ್ನಹಿಂದೆ ಬಿದ್ದಿದ್ದಾರೆ. ಊಟದ ಸಮಸ್ಯೆ, ಕೋವಿಡ್ ಸಮಸ್ಯೆ ಎಲ್ಲಾ ಮೊದಲು ಬಗೆಹರಿಸಲಿ. ನಿರುದ್ಯೋಗ ಸಮಸ್ಯೆ ಇದೆ, ರೈತರ ಸಮಸ್ಯೆ ಇದೆ. ಇದರ ಬಗ್ಗೆ ಮಾತನಾಡಲಿ ಮೊದಲು ಹುಚ್ಮುಂಡೆ ಮದುವೇಲಿ ವಾಲಗದೋರು ಬಡಿದಿದ್ರು ಅನ್ನೋ ಹಾಗಿದೆ ಬಿಜೆಪಿ ಸ್ಥಿತಿ. ಹೀಗೆ ಕೂಗಾಡೋದೇಕೆ? ಎಲ್ಲವನ್ನೂ ಬಿಟ್ಟು ಈ ಕಾಯ್ದೆಯ ಹಿಂದೆ ಬಿದ್ದಿರೋದು ನೋಡಿದ್ರೆ ಈ ಗಾದೆಮಾತು ನೆನಪಾಗುತ್ತದೆ.

ಗೂಳಿಹಟ್ಟಿ ಶೇಖರ್ ಅವರ ತಾಯಿ ಮತಾಂತರ ಆದ ಬಗ್ಗೆ ಕೇಳಿದ ಪ್ರಶ್ನೆಗೆ, ಕ್ರೈಸ್ತ ಸಮುದಾಯದಲ್ಲಿ ಮತಾಂತರ ಆಗಿದೆ. ಇಂಥ ಕೇಸ್ ಇದ್ರೆ ಕ್ರಮ ತಗೊಳ್ಳಲಿ. ಅವರ ತಾಯಿ ದೂರು ಕೊಟ್ಟರೆ ತನಿಖೆಯೂ ನಡೆಯಲಿ, ಬೇಡ ಅಂದೋರ್ಯಾರು. ಅದನ್ನು ಬಿಟ್ಟು ಲವ್‌ ಜಿಹಾದ್‌ ಹಿಂದೆ ಬಿದ್ದಿದ್ದೇಕೆ ಎಂದು ಪ್ರಶ್ನಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net