ಕರೊನಾ ಭವಿಷ್ಯ ನುಡಿದ ಅವಧೂತ ವಿನಯ್ ಗುರೂಜಿ- ವೈರಸ್‌ಗೆ ನೀಡಿದ್ದಾರೆ ಡೆಡ್‌ಲೈನ್‌!

vinay
Published on

ಚಿಕ್ಕಮಗಳೂರು: ಕರೊನಾ ಎಲ್ಲರ ಪಾಲಿಗೂ ಕರಾಳತೆಯನ್ನು ಸೃಷ್ಟಿಸಿ ಎರಡು ವರ್ಷವಾಗುತ್ತಾ ಬಂದಿದೆ. ಈ ಹೆಮ್ಮಾರಿಯೊಂದಿಗೇ ಬದುಕುವುದನ್ನು ಜನರು ಕಲಿಯುತ್ತಿದ್ದರೂ, ಈ ಪೀಡೆಯಿಂದ ಯಾವಾಗ ಮುಕ್ತಿ ಹೊಂದುತ್ತೇವೆ ಎನ್ನುವುದನ್ನೇ ಎಲ್ಲರೂ ಕಾಯುತ್ತಿದ್ದಾರೆ.

ಈ ನಡುವೆ, ಚಿಕ್ಕಮಗಳೂರಿನ ಗೌರಿಗದ್ದೆ ಗ್ರಾಮದ ಸ್ವರ್ಣಪೀಠಿಕೇಶ್ವರಿ ದತ್ತಾಶ್ರಮದ ಅವಧೂತ ವಿನಯ್ ಗುರೂಜಿ ಭವಿಷ್ಯ ನುಡಿದಿದ್ದಾರೆ. ‘ನನ್ನ ಪ್ರಕಾರ ಮಾರ್ಚ್ ಅಥವಾ ಮೇ ತಿಂಗಳ ಹೊತ್ತಿಗೆ ಕರೊನಾ ಇಡೀ ದೇಶದಿಂದ ದೂರವಾಗಬಹುದು’ ಎಂದಿದ್ದಾರೆ.

ಮುಳ್ಳಯ್ಯನಗಿರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಅವರ ಪ್ರಕಾರ ದೇಶದಲ್ಲಿ ಇನ್ನೂ ಮೂರ್ನಾಲ್ಕು ತಿಂಗಳು ಮಾತ್ರ ಕರೊನಾ ಇರಲಿದೆ. ಮಾರ್ಚ್- ಮೇ ವೇಳೆಗೆ ಕರೊನಾ ನಿಯಂತ್ರಣಕ್ಕೆ ಬರುತ್ತದೆ, ಇದು ದೇಶದಿಂದ ತೊಲಗಲಿದೆ. ಇದಕ್ಕಾಗಿ ಎಲ್ಲರೂ ಒಗ್ಗಟ್ಟಾಗಿ ಸಹಕರಿಸಬೇಕಿದೆ ಎಂದರು.

ಈ ಕುರಿತು ಮಾತನಾಡಿದ ಗುರೂಜಿ, ಡಿಸೆಂಬರ್‌ನಲ್ಲಿ ಕರೊನಾ ಹೆಚ್ಚಳವಾಗಲಿದೆ. ಜನರಿಗೆ ಆತ್ಮಸ್ಥೈರ್ಯ ಮುಖ್ಯ. ಎಲ್ಲವನ್ನೂ ದೇವರು ನೋಡಿಕೊಳ್ತಾನೆ. ಮ್ಯಾಜಿಕ್ ಆಗಲಿ, ಪವಾಡ ಆಗಲಿ ಅಂದರೆ ಯಾವುದೂ ಆಗುವುದಿಲ್ಲ. ಎಲ್ಲರೂ ಒಗ್ಗಟ್ಟಾಗಿ ಸಹರಿಸಬೇಕಿದೆ. ಇದರಿಂದ ಹೊರ ಬರಲು ನಾವು ಪ್ರಯತ್ನ ಪಡುವುದೇ ನಿಜವಾದ ಪವಾಡ ಎಂದು ಹೇಳಿದ್ದಾರೆ.

ಜನ, ಸರ್ಕಾರ, ಪಕ್ಷಗಳು ಎಲ್ಲರೂ ಒಬ್ಬರನ್ನೊಬ್ಬರು ದೂರಿಕೊಳ್ಳುವುದು ಸರಿಯಲ್ಲ. ಎಲ್ಲಾ ಜನರನ್ನು ರಕ್ಷಿಸಬೇಕು ಎಂದು ಒಮ್ಮತದಿಂದ ಕೆಲಸ ಮಾಡಬೇಕು. ಆಗ ಮಾತ್ರ ಎಲ್ಲರೂ ಆರೋಗ್ಯವಾಗಿರಿಸಲು ಸಾಧ್ಯ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net