19, 21ಕ್ಕೆ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಇಲ್ಲ ಪ್ರವೇಶ

chamundi
Published on

ಮೈಸೂರು: ಕರೊನಾ ವೈರಸ್‌ ನಡುವೆಯೂ ಭಕ್ತರ ಆಶಯದ ಮೇರೆಗೆ ಮೈಸೂರಿನ ಪ್ರಸಿದ್ಧ ಚಾಮುಂಡಿ ದೇವಾಲಯದ ದರ್ಶನದ ಭಾಗ್ಯವನ್ನು ನೀಡಲಾಗಿದೆ.

ಆದರೆ ನಾಡಿದ್ದು ಅಂದರೆ 19 ಮತ್ತು 21 ರಂದು ಚಾಮುಂಡಿಬೆಟ್ಟಕ್ಕೆ ಭಕ್ತರ ಪ್ರವೇಶವನ್ನು ನಿರ್ಬಂಧಿಸಲಾಗಿದೆ ಎಂದು ದೇವಸ್ಥಾನ ಹೇಳಿದೆ.

19ರ ಬುಧವಾರ ಅಮಾವಾಸ್ಯೆ ಹಾಗೂ ಶುಕ್ರವಾರ ಸ್ವರ್ಣಗೌರಿ ವೃತ ಇದೆ. ಈ ಹಿನ್ನೆಲೆಯಲ್ಲಿ ಸಹಜವಾಗಿ ಬೆಟ್ಟಕ್ಕೆ ಬರುವ ಭಕ್ತರು ಹೆಚ್ಚಾಗುತ್ತಾರೆ. ಅವರನ್ನು ಈ ಸಮಯದಲ್ಲಿ ತಡೆಯುವುದು ಕಷ್ಟವಾಗುತ್ತದೆ. ಸಾಮಾಜಿಕ ಅಂತರ ಹಾಗೂ ಕರೊನಾ ನಿಯಮಗಳ ಪಾಲನೆ ಕಷ್ಟವಾಗುತ್ತದೆ. ಈ ಹಿನ್ನೆಲೆಯಲ್ಲಿ ಭಕ್ತರ ಪ್ರವೇಶವನ್ನು ನಿರ್ಬಂಧಿಸಲಾಗಿದೆ ಎಂದು ಮೈಸೂರು ಜಿಲ್ಲಾಧಿಕಾರಿ ಅಭಿರಾಮ್.ಜಿ.ಶಂಕರ್ ಹೇಳಿದ್ದಾರೆ.

ಈ ಬಗ್ಗೆ ಆದೇಶ ಹೊರಡಿಸಿರುವ ಜಿಲ್ಲಾಧಿಕಾರಿಗಳು, 19 ಮತ್ತು 21ರಂದು ಭಕ್ತರು ಇಲ್ಲಿಗೆ ಆಗಮಿಸದಂತೆ ಮನವಿ ಮಾಡಿಕೊಂಡಿದ್ದಾರೆ.

ಮೈಸೂರಿನಲ್ಲಿ ಕರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಆದ್ದರಿಂದ ಎಲ್ಲಾ ದೇವಸ್ಥಾನಗಳ ಮೇಲೆ ಕಟ್ಟೆಚ್ಚರ ವಹಿಸಲಾಗುತ್ತಿದೆ.

ಅದರಲ್ಲಿಯೂ ಭಕ್ತರ ಸಂಖ್ಯೆ ಹೆಚ್ಚಿರುವ ಚಾಮುಂಡಿ ಬೆಟ್ಟದ ಕುರಿತು ಇದಾಗಲೇ ಸಕಲ ಎಚ್ಚರಿಕೆ ವಹಿಸಲಾಗಿದೆ. ಆದರೆ ಭಕ್ತರ ಸಂಖ್ಯೆ ಏಕಾಏಕಿ ಹೆಚ್ಚಿದಾಗ ಅವರನ್ನು ನಿಯಂತ್ರಣ ಮಾಡುವುದು ಕಷ್ಟ ಎಂಬ ಕಾರಣಕ್ಕೆ ಈ ರೀತಿ ನಿಲುವು ತಳೆಯಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net